• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು: ಸಮೀಪದಲ್ಲೇ 2 ವಿಮಾನ ಟೇಕ್‌ ಆಫ್‌, ತಪ್ಪಿದ ಭಾರೀ ಅನಾಹುತ

|
Google Oneindia Kannada News

ಬೆಂಗಳೂರು, ಜನವರಿ 19: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಜನವರಿ 7 ರಂದು ಒಂದೇ ದಿಕ್ಕಿನಲ್ಲಿ ಏಕಕಾಲ ಎರಡು ವಿಮಾನಗಳು ಟೇಕ್ ಆಫ್ ಆಗಿದ್ದು, ಭಾರೀ ಅನಾಹುತ ಕೊಂಚದರಲ್ಲೇ ತಪ್ಪಿದ್ದು ಎರಡು ವಿಮಾನಗಳಲ್ಲಿದ್ದ ಜನರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಅದೃಷ್ಟವಶಾತ್, ರಾಡಾರ್ ನಿಯಂತ್ರಕವು ಗಂಭೀರ ದೋಷವನ್ನು ಗುರುತಿಸಿದ್ದು, ಎರಡೂ ಫ್ಲೈಟ್ ಡೆಕ್‌ಗಳಲ್ಲಿ ಪೈಲಟ್‌ಗಳಿಗೆ ಎಚ್ಚರಿಕೆ ನೀಡಿತು. ಘರ್ಷಣೆಯನ್ನು ತಪ್ಪಿಸಲು ಒಂದು ವಿಮಾನವು ತೀವ್ರವಾಗಿ ಎಡಕ್ಕೆ ಮತ್ತು ಇನ್ನೊಂದು ಬಲಕ್ಕೆ ತಿರುಗಿತು. ಆದರೆ ಈ ಘಟನೆಯನ್ನು ಮುಚ್ಚಿಡುವ ಪ್ರಯತ್ನ ಮಾಡಲಾಗಿದೆ. ಸ್ಥಳೀಯ ಅಧಿಕಾರಿಗಳು ಡಿಜಿಸಿಎಗೆ ವರದಿ ಮಾಡದೆ ಬಹುಶಃ ತನಿಖೆ ಮತ್ತು ಶಿಕ್ಷೆಯನ್ನು ತಪ್ಪಿಸುವ ಮೂಲಕ ಅದನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ ಮಾಧ್ಯಮಗಳು ವರದಿ ಮಾಡಿದೆ.

Breaking News: ರಾಜಸ್ಥಾನದಲ್ಲಿ ಮಿಗ್ -21 ವಿಮಾನ ಪತನದಲ್ಲಿ ಪೈಲಟ್ ಹುತಾತ್ಮ Breaking News: ರಾಜಸ್ಥಾನದಲ್ಲಿ ಮಿಗ್ -21 ವಿಮಾನ ಪತನದಲ್ಲಿ ಪೈಲಟ್ ಹುತಾತ್ಮ

ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮುಖ್ಯಸ್ಥ ಅರುಣ್ ಕುಮಾರ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆಗೆ ಆದೇಶಿಸ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಅರುಣ್ ಕುಮಾರ್, "ಈ ನಿರ್ಲಕ್ಷ್ಯವನ್ನು ತೋರಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ 2 ಏರ್‌ಸ್ಟ್ರಿಪ್‌ಗಳ ನಡುವಿನ ಸ್ಥಳವು ಸಮಾನಾಂತರ ಮತ್ತು ಏಕಕಾಲಿಕ ಟೇಕ್-ಆಫ್ ಅಥವಾ ಲ್ಯಾಂಡಿಂಗ್‌ಗಳನ್ನು ಮಾಡಲು ಸಾಕಾಗುವುದಿಲ್ಲ. ಕಾರ್ಯಾಚರಣೆಯ ಭದ್ರತಾ ಕಾರಣಗಳಿಗಾಗಿ ವಿಮಾನ ಟೇಕ್-ಆಫ್ ಅಥವಾ ಲ್ಯಾಂಡಿಂಗ್‌ಗೆ ಖಚಿತವಾದ ಸಮಯವನ್ನು ನಿಗದಿ ಮಾಡಬೇಕಾಗುತ್ತದೆ.

ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ, ಅಂತಿಮ ತನಿಖಾ ವರದಿ ಬಹಿರಂಗಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ, ಅಂತಿಮ ತನಿಖಾ ವರದಿ ಬಹಿರಂಗ

"ಜನವರಿ 7, 2022 ರಂದು, ಎರಡು ಇಂಡಿಗೋ ವಿಮಾನಗಳು - 6E-455 ಕೋಲ್ಕತ್ತಾ ಮತ್ತು 6E-246 ಭುವನೇಶ್ವರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೇ ಸಮಯದಲ್ಲಿ ಟೇಕ್‌ ಆಫ್‌ ಆಗಿರುವುದು ಕಳವಳಕಾರಿ. ಅಂದು ಬೆಳಿಗ್ಗೆ, ಬೆಂಗಳೂರು ವಿಮಾನ ನಿಲ್ದಾಣದ ಉತ್ತರ ರನ್‌ವೇ ಟೇಕ್-ಆಫ್‌ಗಳಿಗೆ ಮತ್ತು ದಕ್ಷಿಣಕ್ಕೆ ಲ್ಯಾಂಡಿಂಗ್‌ಗಾಗಿ ಬಳಸಲಾಗಿತ್ತು. ನಂತರ, ಶಿಫ್ಟ್ ಇನ್‌ಚಾರ್ಜ್ (ಡಬ್ಲ್ಯುಎಸ್‌ಒ) ಪ್ರತಿ ಆಗಮನ ಮತ್ತು ನಿರ್ಗಮನಕ್ಕೆ ಉತ್ತರ ರನ್‌ವೇಯನ್ನು ಬಳಸುವ ಮೂಲಕ ಸಿಂಗಲ್ ರನ್‌ವೇ ಕಾರ್ಯಾಚರಣೆಗಳನ್ನು ಹೊಂದಲು ನಿರ್ಧಾರ ಮಾಡಿದ್ದರು," ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

"ಇದೀಗ ದಕ್ಷಿಣ ರನ್‌ವೇಯನ್ನು ಮುಚ್ಚಲಾಗಿದ್ದು, ಆದಾಗ್ಯೂ, ಇದನ್ನು ದಕ್ಷಿಣ ಟವರ್‌ ಕಂಟ್ರೋಲರ್‌ಗೆ ತಿಳಿಸಲಾಗಿಲ್ಲ. ಈ ಕಾರಣದಿಂದಾಗಿ, ದಕ್ಷಿಣ ಟಟವರ್‌ ಕಂಟ್ರೋಲರ್‌ 6E-455 ಅನ್ನು ಟೇಕ್‌ ಆಫ್‌ ಮಾಡಿದೆ. ಅದೇ ಸಮಯದಲ್ಲಿ ಉತ್ತರ ಟವರ್‌ ಕಂಟ್ರೋಲರ್‌ 6E-246 ಟೇಕ್‌ ಆಫ್‌ ಮಾಡಿಸಿದ್ದಾರೆ. ಟೇಕ್‌ ಆಫ್‌ ಆದ ಬಳಿಕ ಎರಡು ವಿಮಾನವು ಕೂಡಾ ಸಮೀಪದಲ್ಲಿಯೇ ಹಾರುತ್ತಿತ್ತು. ಇದನ್ನು ಗಮನಿಸಿದ ರಾಡಾರ್ ನಿಯಂತ್ರಕವು ಎಚ್ಚರಿಕೆಯನ್ನು ನೀಡಿದೆ. ಈ ಮೂಲಕ ಘರ್ಷಣೆಯನ್ನು ತಡೆಯಲಾಗಿದೆ," ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಗೆ ಇಲ್ಲ ಮಾಹಿತಿ

ಆಘಾತಕಾರಿ ಸಂಗತಿಯೆಂದರೆ, ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಈ ಘಟನೆಯನ್ನು ವರದಿ ಮಾಡಿಲ್ಲ ಅಥವಾ ಯಾವುದೇ ಲಾಗ್‌ಬುಕ್‌ನಲ್ಲಿ ದಾಖಲಾಗಿಲ್ಲ. ಅಂದರೆ ಅಥಾರಿಟಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. "2 ವಿಮಾನಗಳು 3,000 ಅಡಿ ಸುತ್ತು ತಲುಪುವವರೆಗೆ ಒಂದಕ್ಕೊಂದು ಒಂದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿರುವ ಬಗ್ಗೆ ಯಾವುದೇ ಸುಳಿವು ಕೂಡಾ ಬಂದಿಲ್ಲ. ಪೈಲಟ್‌ಗಳು ಅಪಾಯದ ಬಗ್ಗೆ ತಿಳಿದಿರಲಿಲ್ಲ. ಅದೃಷ್ಟವಶಾತ್, ಬೆಂಗಳೂರು ವಿಮಾನ ನಿಲ್ದಾಣದ ಕೆಳಭಾಗದಲ್ಲಿರುವ ರಾಡಾರ್ ನಿಯಂತ್ರಕವು ಸಮಯಕ್ಕೆ ಸರಿಯಾಗಿ ವಿಮಾನಗಳನ್ನು ಗಮನಿಸಿ 2 ಪೈಲಟ್‌ಗಳಿಗೆ ಎಚ್ಚರಿಕೆ ನೀಡಿತು. ಕೋಲ್ಕತ್ತಾಗೆ ಹೊರಟಿದ್ದ ವಿಮಾನವು ಎಡಕ್ಕೆ ತಿರುಗಿತು. ಈ ಮೂಲಕ ಅಪಾಯವನ್ನು ತಪ್ಪಿಸಲಾಯಿತು," ಎಂದು ಹೆಸರು ಹೇಳಲು ಬಯಸದ ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ಗುಂಪಿಗೆ ಸಂಪರ್ಕ ಹೊಂದಿದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಇಂಡಿಗೋ ಏರ್‌ವೇಸ್‌ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. (ಒನ್‌ಇಂಡಿಯಾ ಸುದ್ದಿ)

English summary
Bengaluru: People on two IndiGo flights miraculously escape after the plane was cleared to take off simultaneously in the same direction from Kempegowda International Airport. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X