ಬೆಂಗಳೂರಲ್ಲಿ 2 ಕಡೆ ಸರಗಳ್ಳತನ, ಬೈಕ್ ಬಿಟ್ಟು ಪರಾರಿ
ಬೆಂಗಳೂರು, ಜು.02 : ಬೆಂಗಳೂರು ನಗರಕ್ಕೆ ಗುರುವಾರ ಮತ್ತೆ ಸರಗಳ್ಳರು ಬಂದಿದ್ದಾರೆ. ಸರಗಳ್ಳತನದ ಎರಡು ಪ್ರಕರಣಗಳು ನಗರದಲ್ಲಿ ನಡೆದಿವೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಶರ್ಟ್, ಬೈಕ್ ಬಿಟ್ಟು ಕಳ್ಳನೊಬ್ಬ ಪರಾರಿಯಾಗಿದ್ದಾನೆ.
ರಾಮಮೂರ್ತಿ ನಗರ ಮತ್ತು ವರ್ತೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗುರುವಾರ ಸರಗಳ್ಳತನದ ಪ್ರಕರಣಗಳು ನಡೆದಿವೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಬೈಕ್‌ನಲ್ಲಿದ್ದ ಇಬ್ಬರು ಸವಾರರು ಹೆಲ್ಮೆಟ್ ಧರಿಸಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. [ಮಂಗಳವಾರ 3 ಕಡೆ ಸರಗಳ್ಳರ ಕೈಚಳಕ]
Just Now Chain snatching reported in Rammurthynagara PS limits Banjara layout.B alert suspicious Bikeriders in yr area.Dial100&report @CPBlr
— M.G.N. Kumar (@DcpComdCentre) July 2, 2015 ಸರಗಳ್ಳರು ನಗರದಲ್ಲಿ ಸಕ್ರಿಯರಾಗಿದ್ದು ಎಚ್ಚರದಿಂದ ಇರುವಂತೆ ಬೆಂಗಳೂರು ನಗರ ಪೊಲೀಸರು ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕ ಜನರಿಗೆ ಕರೆ ನೀಡಿದ್ದಾರೆ. ಅಂದಹಾಗೆ ಮಂಗಳವಾರ ನಗರದ ಮೂರು ಕಡೆ ಸರಗಳ್ಳತನ ನಡೆದಿತ್ತು. [ಸರಗಳ್ಳರ ವಿರುದ್ಧ ಗೂಂಡಾ ಕಾಯ್ದೆ]

ಶರ್ಟ್, ಬೈಕ್ ಬಿಟ್ಟು ಹೋದ ಕಳ್ಳ : ಪೊಲೀಸರು ಹಿಡಿಯಲು ಬಂದಾಗ ಬೈಕ್ ಮತ್ತು ಶರ್ಟ್ ಬಿಟ್ಟು ಹಳೆ ಸರಗಳ್ಳನೊಬ್ಬ ಓಡಿಹೋದ ಘಟನೆ ಗುರುವಾರ ಬೆಳಗ್ಗೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಗಸ್ತು ತಿರುಗುತ್ತಿದ್ದ ಪೊಲೀಸರು ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ಹಳೆ ಸರಗಳ್ಳ ಬೈಕ್‌ನಲ್ಲಿ ಹೋಗುತ್ತಿರುವುದನ್ನು ನೋಡಿದ್ದಾರೆ ತಕ್ಷಣ ಅವನನ್ನು ಹಿಡಿಯಲು ಮುಂದಾಗಿದ್ದಾರೆ. ಪೊಲೀಸರು ಹಿಡಿಯಲು ಒಂದಾಗ ಕಳ್ಳ ಬೈಕ್ ಬಿಟ್ಟು ಓಡಲು ಆರಂಭಿಸಿದ್ದಾನೆ.
ಆಗ ಸಾರ್ವಜನಿಕರು ಅವನನ್ನು ಹಿಡಿಯಲು ಶರ್ಟ್‌ಗೆ ಕೈ ಹಾಕಿದ್ದಾರೆ. ಆಗ ಮೇಲೆ ಶರ್ಟ್ ಬಿಚ್ಚಿ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಪರಾರಿಯಾದ ಕಳ್ಳತನ ಬೈಕ್‌ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications