ಎರಡು ಬಿಎಂಟಿಸಿ ಬಸ್‌ಗಳಿಗೆ ಬೆಂಕಿ; ತನಿಖೆಗೆ ಸಮಿತಿ ರಚನೆ
ಬೆಂಗಳೂರು, ಫೆಬ್ರವರಿ 04; ಬೆಂಗಳೂರು ನಗರದಲ್ಲಿ 12 ದಿನಗಳ ಅಂತರದಲ್ಲಿ ಎರಡು ಬಿಎಂಟಿಸಿ ಬಸ್‌ಗಳಿಗೆ ನಡುವೆ ರಸ್ತೆಯಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದರೆ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಈ ಘಟನೆಗಳ ಬಗ್ಗೆ ತನಿಖೆಗೆ ಬಿಎಂಟಿಸಿ ಆದೇಶ ನೀಡಿದ್ದು, ಕಾರಣ ಪತ್ತೆ ಹಚ್ಚಲು ಮುಂದಾಗಿದೆ.
ಬಿಎಂಟಿಸಿ ಎಂಡಿ ಅನ್ಬು ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ, "ಬಸ್ ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಚಾಲಕರು ಮತ್ತು ನಿರ್ವಾಹಕರ ಸಮಯ ಪ್ರಜ್ಞೆಯಿಂದ ಯಾವುದೇ ಅಪಾಯವಾಗಿಲ್ಲ. ಈ ಅ ಘಟನೆ ನಮಗೂ ಸಹ ಅಚ್ಚರಿ ಹಾಗೂ ಎಚ್ಚರಿಕೆ ಗಂಟೆಯಾಗಿದೆ" ಎಂದು ಹೇಳಿದ್ದಾರೆ.
"ಈ ಬಗ್ಗೆ ತನಿಖೆ ನಡೆಸಿ ಸಂಪೂರ್ಣ ವರದಿ ನೀಡಲು ಒಂದು ವಿಶೇಷ ಸಮಿತಿ ರಚನೆ ಮಾಡಲಾಗಿದೆ. ಬಸ್‌ಗಳ ಸುರಕ್ಷತೆ ಬಗ್ಗೆ ಪ್ರಯಾಣಿಕರಿಗೆ ಯಾವುದೇ ಅನುಮಾನ ಬೇಡ. ಜನರು ನಿರಾಂತಕವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಿ" ಎಂದು ಮನವಿ ಮಾಡಿದ್ದಾರೆ.

ಜನವರಿ 21ರಂದು ಚಾಮರಾಜಪೇಟೆಯ ಮಕ್ಕಳ ಕೂಟ ಸಿಗ್ನಲ್ ಬಳಿ ಮತ್ತು ಫೆಬ್ರವರಿ 1ರಂದು ಜಯನಗರದ ಮೆಟ್ರೋ ನಿಲ್ದಾಣದ ಬಳಿ ಬಿಎಂಟಿಸಿ ಬಸ್‌ಗೆ ನಡು ರಸ್ತೆಯಲ್ಲಿಯೇ ಬೆಂಕಿ ಹೊತ್ತಿಕೊಂಡಿತ್ತು. ಚಾಲಕರು, ನಿರ್ವಾಹಕರು ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಸಿ ಯಾವುದೇ ಅಪಾಯವಾಗದಂತೆ ನೋಡಿಕೊಂಡಿದ್ದರು.
ಫೆಬ್ರವರಿ 1ರ ಮಂಗಳವಾರ ಮಧ್ಯಾಹ್ನ ಸುಮಾರು 01:15ರ ಸುಮಾರಿಗೆ ಜಯನಗರ ಮೆಟ್ರೋ ಸ್ಟೇಷನ್ ಹತ್ತಿರ ಬ್ಯಾಟರಿ ವಿದ್ಯುತ್ ಸೋರಿಕೆಯಿಂದ ಬಿಎಂಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರು.
ಇದುವರೆಗೂ ಬೆಂಕಿ ಹೊತ್ತಿಕೊಂಡ ಎರಡು ಬಸ್‌ಗಳು ಅಶೋಕ್ ಲೈಲೆಂಡ್ ಕಂಪನಿಗೆ ಸೇರಿದ ಬಸ್‌ಗಳು. ಬಸ್‌ನ ಸ್ಟಾರ್ಟರ್‌ನಲ್ಲಿ ಶಾರ್ಟ್ ಸರ್ಕ್ಯುಟ್ ಕಾಣಿಸಿಕೊಂಡ ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದ್ದು ತನಿಖೆ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ.
ಬಿಎಂಟಿಸಿ ಬಳಿ ಅಶೋಕ್ ಲೈಲೆಂಡ್ ಕಂಪನಿಗೆ ಸೇರಿದ 186 ಬಸ್‌ಗಳಿವೆ. ಎರಡು ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡ ಬಳಿಕ ಎಲ್ಲಾ ಘಟಕದಲ್ಲಿರುವ ಬಸ್‌ಗಳನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡಲಾಗುತ್ತಿದೆ.
ಇದಕ್ಕಾಗಿಯೇ ಅಶೋಕ ಲೈಲೆಂಡ್ ಕಂಪನಿಯಿಂದ ಇಬ್ಬರು ತಜ್ಞರು ಆಗಮಿಸಿದ್ದಾರೆ. ಬಿಎಂಟಿಸಿಯ 8 ಇಂಜಿನಿಯರ್‌ಗಳ ತಂಡ ಎಲ್ಲಾ 186 ಬಸ್‌ಗಳ ಪರಿಶೀಲನೆ ನಡೆಸುತ್ತಿದೆ.
ಬಸ್‌ನಲ್ಲಿರುವ ಬೆಂಕಿ ನಂದಿಸುವ ಉಪಕರಣಗಳಿಂದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದರೆ ಬಸ್ ಸಂಪೂರ್ಣ ಆಹುತಿಯಾಗುವುದು ತಪ್ಪುತ್ತಿತ್ತು. ಈ ಕುರಿತು ಸಹ ಸಮಿತಿ ತನಿಖೆ ನಡೆಸಲಿದೆ.
ಅಲ್ಲದೇ ಬೆಂಕಿ ಹೊತ್ತಿಕೊಂಡಿರುವ ಬಸ್‌ಗಳು ಹಳೆಯ ಬಸ್‌ಗಳಲ್ಲ. ಕೇವಲ 5-6 ವರ್ಷ ಸಂಚಾರ ನಡೆಸಿದ ಬಸ್‌ಗಳಾಗಿವೆ. ಬೆಂಗಳೂರು ನಗರದಲ್ಲಿ ಪ್ರತಿದಿನ 5 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸುತ್ತವೆ. ಲಕ್ಷಾಂತರ ಜನರು ಸಂಚಾರ ನಡೆಸುತ್ತಾರೆ.
ಬಸ್‌ಗಳಿಗೆ ನಡು ರಸ್ತೆಯಲ್ಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ಜನರಲ್ಲಿಯೂ ಆತಂಕ ಉಂಟಾಗಿದೆ. ಈ ಘಟನೆ ಬಿಎಂಟಿಸಿಗೆ ಎಚ್ಚರಿಕೆ ಗಂಟೆಯಾಗಿದ್ದು, ಆದ್ದರಿಂದಲೇ ತನಿಖೆಗೆ ಆದೇಶ ನೀಡಲಾಗಿದೆ.
ಬಿಎಂಟಿಸಿ ಎಂಡಿ ಅನ್ಬು ಕುಮಾರ್ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪ್ರಕರಣದ ಬಗ್ಗೆ ಜನರಿಗೆ ಆತಂಕ ಬೇಡ. ಪ್ರಯಾಣಿಕರ ಸುರಕ್ಷತೆ ನಮ್ಮ ಹೊಣೆ ಎಂದು ಹೇಳಿದ್ದಾರೆ. ನಾನು ಕೂಡಾ ಬಸ್‌ಗಳಲ್ಲಿ ಪ್ರಯಾಣ ಮಾಡಿ ಜನರಿಂದ, ಚಾಲಕ ಮತ್ತು ನಿರ್ವಾಹಕರಿಂದ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.












Click it and Unblock the Notifications