ಹಿಂದಿ ಹೇರಿಕೆ ವಿರುದ್ಧದ ಟ್ವೀಟ್ ಪ್ರತಿಭಟನೆ ಯಶಸ್ವಿ!
ಬೆಂಗಳೂರು, ಆಗಸ್ಟ್ 16: ಕೇಂದ್ರ ಸರ್ಕಾರದ ಭಾಷಾ ತಾರತಮ್ಯ ಹಾಗೂ ಅನಗತ್ಯ ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಆಗಸ್ಟ್ 15ರಂದು ಹಮ್ಮಿಕೊಂಡಿದ್ದ ಟ್ವಿಟ್ಟರ್ ಅಭಿಯಾನ ಯಶಸ್ವಿಯಾಗಿದೆ.
ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರು ಸತತ ಟ್ವೀಟ್ ಗಳ ಮೂಲಕ ಭಾನುವಾರದಂದು #StopHindiImposition ಟ್ರೆಂಡಿಂಗ್ ನಲ್ಲಿರುವಂತೆ ನೋಡಿಕೊಂಡಿದ್ದಾರೆ. ಈ ಮೂಲಕ ಹಿಂದಿ ಭಾಷಿಕ ರಾಜ್ಯಗಳಲ್ಲೂ ಸರ್ಕಾರದ ದೊಡ್ಡ ಪ್ರಮಾದದ ಬಗ್ಗೆ ಅರಿವು ಮೂಡಿದೆ.[ಮೋದಿ ಸರ್ಕಾರದ 'ಹಿಂದಿ ಹೇರಿಕೆ'ವಿರುದ್ಧ ಕೂಗು]
ಸಂವಿಧಾನ 8 ಪರಿಚ್ಛೇದದ ಅನ್ವಯ ಎಲ್ಲಾ ಭಾಷೆಗಳಿಗೂ(22) ಸಮಾನ ಮಾನ್ಯತೆ ಹಾಗೂ ದೇಶದ ಅಧಿಕೃತ ಭಾಷೆ ಎಂದು ಕರೆಸಿಕೊಳ್ಳುವ ಹಕ್ಕಿದೆ. ಅದರೆ, ಹಿಂದಿ ಭಾಷೆಯನ್ನು ಮಾತ್ರ ಹೇರಿಕೆ ಮಾಡುವುದು ಸರಿಯಲ್ಲ. ಹಿಂದಿಯೇತರ ರಾಜ್ಯಗಳ ಜನತೆಯನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣಲಾಗುತ್ತಿದೆ. ಇದನ್ನು ಖಂಡಿಸಿ 9 ಗಂಟೆಗೆ #StopHindiImposition ಬಳಸಿ ಎಲ್ಲರೂ ಟ್ವೀಟ್ ಮಾಡುವಂತೆ ಕೋರಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಅಭಿಯಾನದ ಸದಸ್ಯ ಪ್ರಸನ್ನ ಎಲ್ ಎಂ ಅವರು ಹೇಳಿದ್ದಾರೆ.
1965ರಿಂದ ಹಿಂದಿಯನ್ನು ಮಾತ್ರ ಅಧಿಕೃತ ಭಾಷೆಯಾಗಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹಿಂದಿಯೇತರ ನುಡಿಸಮುದಾಯಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಮುಂದಾದಾಗ, 1965ರಲ್ಲಿ ದೊಡ್ಡಮಟ್ಟದ ಹೋರಾಟ ನಡೆಯಿತು. ಈಗ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬಳಸಿ ಜಾಗೃತಿ ಮೂಡಿಸಲಾಗಿದೆ. ಈ ಪ್ರತಿಭಟನೆ ಬಗ್ಗೆ ತಿಳಿದುಕೊಂಡ ಸಂಸದ ಪ್ರತಾಪ್ ಸಿಂಹ ಅವರು ಕೂಡಾ ನಿಮ್ಮ ಸಮಸ್ಯೆಗಳ ಬಗ್ಗೆ ನನಗೆ ಇಮೇಲ್ ಮಾಡಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಟ್ವೀಟ್ ಪ್ರತಿಭಟನೆ ಸಮಗ್ರ ಮಾಹಿತಿ ಸಂಗ್ರಹ
ಟ್ವೀಟ್ ಪ್ರತಿಭಟನೆ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ಇದರಿಂದ #StopHindiImposition ನಲ್ಲಿ ಬಂದ ಟ್ವೀಟ್ ಗಳು ಸಿಕ್ಕಿವೆ ಎಂದು ವಿಶಾಲ್ ವಿಎನ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗೆ @PLEBengaluru ಟ್ವಿಟ್ಟರ್ ಖಾತೆಯನ್ನು ಅನುಸರಿಸಿ.
ಹೆಚ್ಚಿನ ಮಾಹಿತಿಗಾಗಿ ಈ ಅಭಿಯಾನದ ಫೇಸ್ ಬುಕ್ ಪುಟವನ್ನು ವೀಕ್ಷಿಸಿ

#StopHindiImposition ಟ್ರೆಂಡಿಂಗ್
ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರು ಸತತ ಟ್ವೀಟ್ ಗಳ ಮೂಲಕ ಭಾನುವಾರದಂದು #StopHindiImposition ಟ್ರೆಂಡಿಂಗ್ ನಲ್ಲಿರುವಂತೆ ನೋಡಿಕೊಂಡಿದ್ದಾರೆ. ಈ ಮೂಲಕ ಹಿಂದಿ ಭಾಷಿಕ ರಾಜ್ಯಗಳಲ್ಲೂ ಸರ್ಕಾರದ ದೊಡ್ಡ ಪ್ರಮಾದದ ಬಗ್ಗೆ ಅರಿವು ಮೂಡಿದೆ.
|
ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕ್ರಿಯೆ
ಟ್ವೀಟ್ ಪ್ರತಿಭಟನೆಗೆ ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕ್ರಿಯೆ ಹೀಗಿದೆ. ಈ ಹಿಂದೆ ಕೂಡಾ ಮೆಟ್ರೋಗಳಲ್ಲಿ ಅನಗತ್ಯ ಹಿಂದಿ ಬೋರ್ಡ್ ಕಂಡು ಬಂದರೆ ತಿಳಿಸಿ ಎಂದು ಟ್ವೀಟ್ ಮಾಡಿದ್ದರು.
|
ಯಾರ ಮೇಲೂ ಏನನ್ನೂ ಹೇರುವಂತಿಲ್ಲ
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಯಾರ ಮೇಲೂ ಏನನ್ನೂ ಹೇರುವಂತಿಲ್ಲ
|
ತಮಿಳುನಾಡಿನಲ್ಲೂ ಇದೆ ಭಾಷಾ ಸಮಸ್ಯೆ
ತಮಿಳುನಾಡಿನಲ್ಲೂ ಇದೆ ಭಾಷಾ ಸಮಸ್ಯೆ, ದೈನಂದಿನ ಕಾರ್ಯಗಳಲ್ಲಿ ದ್ವಿಭಾಷಾ, ತ್ರಿಭಾಷಾ ನೀತಿ ಹಿಂದಿ ಹೇರಿಕೆ ಎಲ್ಲವೂ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ.
|
ಸಂವಿಧಾನ ಹೇಳಿದಂತೆ ನಡೆದುಕೊಳ್ಳಿ
ಸಂವಿಧಾನ ಹೇಳಿದಂತೆ ನಡೆದುಕೊಳ್ಳಿ, 22 ಭಾಷೆಗಳಿಗೂ ಅಧಿಕೃತ ಮಾನ್ಯತೆ ಸಿಗಬೇಕಿದೆ.
|
ಸುಸು ಮಾಡಲು ಈ ಎರಡು ಭಾಷೆ ಗೊತ್ತಿರಬೇಕು
ಸುಸು ಮಾಡಲು ಈ ಎರಡು ಭಾಷೆ ಗೊತ್ತಿರಬೇಕಂತೆ. ರೈಲುಗಳಲ್ಲಿ ಕಂಡು ಬಂದ ಬೋರ್ಡ್ ಹೀಗಿದೆ.
|
ಕಿಸಾನ್ ಚಾನೆಲ್ ಏಕೆ ಹಿಂದಿಯಲ್ಲಿದೆ?
ಕಿಸಾನ್ ಚಾನೆಲ್ ಏಕೆ ಹಿಂದಿಯಲ್ಲಿದೆ? ಹಿಂದಿಯೇತರ ರಾಜ್ಯಗಳಲ್ಲಿ ರೈತರಿಲ್ಲವೆ?
|
ವಿಶೇಷ ಸ್ವಾತಂತ್ರ್ಯೋತ್ಸವ ದಿನವಿಂದು ಟ್ವೀಟ್ ಮಾಡಿ
ವಿಶೇಷ ಸ್ವಾತಂತ್ರ್ಯೋತ್ಸವ ದಿನವಿಂದು ಟ್ವೀಟ್ ಮಾಡಿ, ಭಾಷಾ ಸ್ವಾತಂತ್ರ್ಯ ಪಡೆದುಕೊಳ್ಳಿ.
|
68 ವರ್ಷಗಳಿಂದಲೂ ಇದೇ ಸಮಸ್ಯೆ
68 ವರ್ಷಗಳಿಂದಲೂ ಇದೇ ಸಮಸ್ಯೆ ಮುಂದುವರೆಯುತ್ತಾ ಬಂದಿದೆ.












Click it and Unblock the Notifications