ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಾಪ್ ಸಿಂಹ ಟ್ವೀಟ್ ಗೆ ಬಂತು ತರಹೇವಾರಿ ಕಮೆಂಟ್ಸ್!

|
Google Oneindia Kannada News

Recommended Video

ಪ್ರತಾಪ್ ಸಿಂಹ ವಿನಯ್ ಕುಲಕರ್ಣಿ ಟ್ವಿಟ್ಟರ್ ಸಮರ | ಥರಹೇವಾರಿ ಕಾಮೆಂಟ್ಸ್ | Oneindia Kannada

ಸದಾ ಒಂದಿಲ್ಲೊಂದು ವಿವಾದದ ಮೂಲಕವೇ ಸುದ್ದಿಯಾಗುವ ಬಿಜೆಪಿಯ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಇದೀಗ ತಮ್ಮ ಮಾತಿನ ವರಸೆಯನ್ನು ಸಚಿವ ವಿನಯ್ ಕುಲಕರ್ಣಿ ಅವರತ್ತ ತಿರುಗಿಸಿದ್ದಾರೆ.

ಹನುಮ ಜಯಂತಿ ಸಮಯದಲ್ಲಿ ಮೈಸೂರಿನ ಹುಣಸೂರಿನಲ್ಲಿ ನಡೆದ ವಿವಾದಾತ್ಮಕ ಘಟನೆಗೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಅವರ ವಿರುದ್ಧ ಹರಿಯಾಯ್ದಿದ್ದ ಧಾರವಾಡದ ವಿನಯ್ ಕುಲಕರ್ಣಿ, 'ಪ್ರತಾಪ್ ಸಿಂಹ ಅವರನ್ನು ಒಂದು ಒಳ್ಳೆಯ ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಬೇಕು' ಎಂದಿದ್ದರು.

ಪ್ರತಾಪ್‌ ಸಿಂಹರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ವಿನಯ್ ಕುಲಕರ್ಣಿ ಪ್ರತಾಪ್‌ ಸಿಂಹರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ವಿನಯ್ ಕುಲಕರ್ಣಿ

ಸಂಸದರೊಬ್ಬರ ವಿರುದ್ಧ ಇಂಥ ಪದಬಳಕೆ ಮಾಡಿದ ವಿನಯ್ ಕುಲಕರ್ಣಿಯವರ ನಡೆ ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲ, ವಿನಯ್ ಕುಲಕರ್ಣಿ ವಿರುದ್ಧ ಪ್ರತಾಪ್ ಸಿಂಹ ಟ್ವೀಟ್ ಮಾಡಿ, "ಹೀಗೊಂದು ರಸಪ್ರಶ್ನೆ: 2007ರಲ್ಲಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆದ ಶೂಟೌಟ್ನಲ್ಲಿ ಮುಖ್ಯ ಆರೋಪಿಯಾಗಿದ್ದವನ ಸಹೋದರ ಹಾಗು ವೈದ್ಯರಿಗೆ ಕಪಾಳಕ್ಕೆ ಹೊಡೆದಿದ್ದಲ್ಲದೆ ಜಿಲ್ಲಾಪಂಚಾಯತ್ ಸದಸ್ಯರೊಬ್ಬರ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆ ಎದುರಿಸುತ್ತಿರುವ ಪುಂಡ ಯಾರು?!" ಎಂದು ಪರೋಕ್ಷವಾಗಿ ಪ್ರಶ್ನಿಸಿ, ವಿನಯ ಕುಲಕರ್ಣಿ ಅವರ ಕಾಲೆಳೆದಿದ್ದಾರೆ.

ಸಿಂಹ ಅವರ ಈ ಟ್ವೀಟ್ ಗೆ ಹಲವು ಪ್ರತಿಕ್ರಿಯೆಗಳೂ ಬಂದಿವೆ.
ಅಷ್ಟೇ ಅಲ್ಲ, "ಹೀಗೊಂದು ರಸಪ್ರಶ್ನೆ: ಒನಕೆ ಓಬವ್ವನಿಗೆ ಹಿಂದಿನಿಂದ ಚೂರಿ ಹಾಕಿ ಸಾಯಿಸಿದ ಹೇಡಿಯ ಕುಲಪುತ್ರನ ಜಯಂತಿ ಆಚರಣೆ ಆರಂಭಿಸಿದ ಸರ್ಕಾರ ಮತ್ತು ಪಕ್ಷ ಯಾವುದು?" ಎಂಬ ಪ್ರಶ್ನೆಯನ್ನೂ ಎಸೆದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ವಿನಯ್ ಕುಲಕರ್ಣಿ ಧರ್ಮ ಮುಖವಾಡದ ಮೂಲಕ ದಾರಿ ತಪ್ಪಿಸುತ್ತಿದ್ದಾರೆ ವಿನಯ್ ಕುಲಕರ್ಣಿ ಧರ್ಮ ಮುಖವಾಡದ ಮೂಲಕ ದಾರಿ ತಪ್ಪಿಸುತ್ತಿದ್ದಾರೆ

ಈ ಕುರಿತು ಹಲವರು ಪ್ರತಿಕ್ರಿಯಿಸಿದ್ದು, ಕೆಲವರು ಸಿಂಹ ಅವರ ನಡೆಯನ್ನು ಸಮರ್ಥಿಸಿಕೊಂದಿದ್ದರೆ, ಮತ್ತೆ ಕೆಲವರು 'ದಯವಿಟ್ಟು ತಾಳ್ಮೆ ಕಳೆದುಕೊಳ್ಳಬೇಡಿ' ಅಂತ ಪ್ರೀತಿಯಿಂದ ತಿಳಿಹೇಳಿದ್ದಾರೆ.

ಮಂತ್ರಿ ಪದವಿಯನ್ನು ಸಮರ್ಥವಾಗಿ ಬಳಸಿಕೊಳ್ಳದ ವಿನಯ್!

ಶ್ರೀ ಗುರು ಬಸವಣ್ಣನ ನವರ ಆಶೀರ್ವಾದ ದಿಂದ ಇವರಿಗೆ ಮಂತ್ರಿ ಪದವಿ ಸಿಕ್ಕಿತು. ಆದರೆ ಅದನ್ನು ಸಮರ್ಥವಾಗಿ ಉಪಯೋಸಿಕೊಂಡು ಹಳ್ಳಿ ಹಳ್ಳಿಗಳಿಗೆ ನೀರು ಹರಿಸಿ ಇನ್ನೊಬ್ಬ ನಝೀರ್ ಸಾಬ್ ಎನಿಸಿಕೊಳ್ಳುವ ಸುವರ್ಣ ಅವಕಾಶ ಕಳೆದು ಕೊಂಡು, ಸ್ವತಂತ್ರ ಧರ್ಮ ಎನ್ನುತ್ತ rally ಮಾಡುತ್ತ ಸಮಯ, ಸರ್ಕಾರದ ಹಣ ವೆಸ್ಟ್ ಮಾಡಿದ ಮಹಾ ನಾಯಕರು! ಎಂದು ವಿಠ್ಠಲರಾವ್ ಕುಲಕರ್ಣಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಅಧಿಕಾರಿ ಮೇಲೆ ಕಾರು ಹರಿಸಿದವರ್ಯಾರು?!

ಮೈಸೂರಿನಲ್ಲಿ ಬ್ಯಾರಿಕೇಡ್ ಗಳಿಗೆ ಡಿಕ್ಕಿ ಹೊಡೆದು, ಪೊಲೀಸ್ ಅಧಿಕಾರಿಯ ಮೇಲೆ ವಾಹನ ಚಲಾಯಿಸಿದವರ್ಯಾರು ಎಂದು ಪ್ರತಾಪ್ ಸಿಂಹ ಅವರು ಹನುಮ ಜಯಂತಿ ಸಮಯದಲ್ಲಿ ವರ್ತಿಸಿದ ಕ್ಷಣವನ್ನು ನೆನಪಿಸಿಕೊಂಡು ಪ್ರತಿ ಟಾಂಕ್ ಕೊಟ್ಟಿದ್ದಾರೆ ಆಸಿಫ್ ಎನ್ನುವವರು!

ದಯವಿಟ್ಟು ಯುವಕರನ್ನು ದ್ವೇಷಕ್ಕೆ ಎಳೆಯಬೇಡಿ!

ನೀವು ಇದನ್ನೆಲ್ಲ ಮಾಡುತ್ತಿರುವುದು ಪ್ರಚಾರಕ್ಕಾಗಿ ಎಂಬುದು ನಮಗೆಲ್ಲ ಗೊತ್ತು. ದಯವಿಟ್ಟು ಇಂದಿನ ಯುವಕರಲ್ಲಿ ದ್ವೇಷದ ಬೀಜ ಬಿತ್ತಬೇಡಿ. ಅವರಿಗೆ ಸೌಹಾರ್ದತೆ, ಶಾಂತಿಯ ಪಾಠ ಮಾಡಿ, ಸಮಾಜದ ಸ್ವಾಸಥ್ಯ ಕಾಯಲು ಪ್ರಯತ್ನಿಸಿ ಎಂದು ಕೆಂಗಣ್ಣು ಸ್ವಾಮಿ ಎಮಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಸುಲ್ತಾನ್ ಸಿದ್ಧ!

"ಕರ್ನಾಟಕದಲ್ಲಿ "ಸುಲ್ತಾನ್ ಸಿದ್ಧ" ಎಡಗೈಯಲ್ಲಿ ಭಾಗ್ಯಗಳನ್ನು ನೀಡಿ ಬಲಗೈಯಿಂದ ಬಂಗಾರದ ಚೂರಿಯನ್ನ ಬೆನ್ನಿಗೆ ಹಾಕುವ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾನೆ" ಎಂದು ಶಶಾಂಕ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಾಳ್ಮೆ ಕಳೆದುಕೊಳ್ಳಬೇಡಿ

ಸರ್, ತಮಗೆ ಒಂದು ಮಾತು ಹೇಳಬೇಕು ಅಂದುಕೊಂಡೆ. ಆದರೆ ತಮಗೆ ಬುದ್ಧಿ ಹೇಳುವಂಥ ದೊಡ್ಡ ವ್ಯಕ್ತಿ ನಾನಲ್ಲ ಆದರೂ ನಿಮ್ಮ ಹರಿತವಾದ ಲೇಖನಿಯಿಂದ ಹಾಗೂ ನಿಷ್ಠುರ ಮಾತುಗಳಿಂದ ಕರ್ನಾಟಕದ ಮನೆ ಮಾತಾಗಿರುವ ತಾವು ಇತ್ತೀಚೆಗೆ ತಾಳ್ಮೆ ಕಳೆದುಕೋಳ್ಳುತ್ತೀದ್ದೀರಾ ಎಂದು ಅನ್ನಿಸುತ್ತದೆ. ದಯವಿಟ್ಟು ತಾಳ್ಮೆಯಿಂದ ಸಮಸ್ಯೆಗಳು ಬಗೆಹರಿಸಲು ಪ್ರಯತ್ನಿಸಿ. ಇಂತಿ ಅಭಿಮಾನಿ. ಎಂದು ಅಭಿಮಾನ, ಕಾಳಜಿಯಿಂದ ರಾಜಕುಮಾರ್ ಎಂ.ಕೆ.ಎಂಬುವವರು ಟ್ವೀಟ್ ಮಾಡಿದ್ದಾರೆ.

ಮತದಾರರಿಗೆ ಎಲ್ಲವೂ ಗೊತ್ತು!

ಇದನ್ನು ಇಲ್ಲಿಗೇ ಬಿಟ್ಟುಬಿಡಿ ಪ್ರತಾಪ್ ಸಿಂಹ ಅವರೇ. ಮತದಾರರು ಈಗ ಬಹಳ ವಿದ್ಯಾವಂತರು, ಅವರಿಗೆ ಸರಿ-ತಪ್ಪು ತಿಳಿಯುತ್ತದೆ. ತಮ್ಮ ಸುತ್ತ ಏನು ನಡೆಯುತ್ತಿದೆ ಎಮಬುದೂ ಅರ್ಥವಾಗುತ್ತದೆ. ಇದನ್ನು ಇಲ್ಲಿಗೇ ಬಿಟ್ಟುಬಿಡಿ. ಉಪಯುಕ್ತ ವಿಷಯಗಳ ಬಗ್ಗೆ ಯೋಚಿಸಿ" ಎಂದು ಮೀನಾಕ್ಷಿ ದೇವಿ ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
After Congress MLA and minister Vinay Kulakarni's comment on Mysuru-Kodagu MP Pratap Simha, the MP blames, MLA by strong words on twitter. 2 days before, Dharwad MLA Vinay Kulkarni has blamed Pratap Simha for his rude behaviour during Hunuma Jayanti in Hunsur, Mysuru. "Pratap Simha should take proper treatment in some mental hospital!" Vinay Kulkarni had told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X