ಡಿಕೆ ರವಿ : ಸಾಮಾಜಿಕ ಜಾಲ ತಾಣದಲ್ಲಿ ಅನಿಸಿಕೆಗಳ ಸುರಿಮಳೆ
ಬೆಂಗಳೂರು, ಮಾ.23: ದಕ್ಷ, ಪ್ರಾಮಾಣಿಕ, ಯುವ ಐಎಎಸ್ ಅಧಿಕಾರಿ ಡಿಕೆ ರವಿ ಅವರ ದುರಂತ ಸಾವು ಕರ್ನಾಟಕದಲ್ಲಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು.
ಕೊನೆಗೂ ಜನರ ಅಗ್ರಹಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ ಸೋಮವಾರ ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ. ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿರುವ ಸಾರ್ವಜನಿಕರು ನೀಡಿರುವ ಅಭಿಪ್ರಾಯ ಸಂಗ್ರಹ ಇಲ್ಲಿದೆ: [ಡಿಕೆ ರವಿ ಸಾವಿನ ಸಿಬಿಐಗೆ : ಸರ್ಕಾರದ ಅಧಿಕೃತ ಹೇಳಿಕೆ]
'ಡಿಕೆ ರವಿ ಸಾವು ಆತ್ಮಹತ್ಯೆಯಲ್ಲ-ಕೊಲೆ' ಎಂಬ ಹೆಸರಿನಲ್ಲಿ ಆರಂಭವಾದ ಫೇಸ್ ಬುಕ್ ಪುಟ ಹಾಗೂ ಆನ್ ಲೈನ್ ಪಿಟೀಷನ್ ಗೆ ಬೆಲೆ ಸಿಕ್ಕಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ರವಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಲಾಗಿತ್ತು.
ಸಿದ್ದರಾಮಯ್ಯ ಸರ್ಕಾರ ನೀಡಿರುವ ಅಧಿಕೃತ ಹೇಳಿಕೆ, ವಿವಿಧ ಕ್ಷೇತ್ರಗಳ ಜನರ ಪ್ರತಿಕ್ರಿಯೆ, ಸಿಎಂ ಸಿದ್ದರಾಮಯ್ಯ ಅಂದು -ಇಂದು ನೀಡಿದ ಹೇಳಿಕೆ ವ್ಯತ್ಯಾಸ ಎಲ್ಲವೂ ಮುಂದಿನ ಟ್ವೀಟ್ ಸರಣಿಯಲ್ಲಿ ಕಾಣಬಹುದು.

ವಿಪಕ್ಷಗಳ ಮೇಲೆ ಕಿಡಿಕಾರಿದ ಸಿದ್ದರಾಮಯ್ಯ
ವಿಪಕ್ಷಗಳ ಮೇಲೆ ಕಿಡಿಕಾರಿದ ಸಿದ್ದರಾಮಯ್ಯ ಅವರು ಸಿಬಿಐ ಎಂದರೆ ಛೋರ್ ಬಚಾವೋ ಅಥವಾ ಕಾಂಗ್ರೆಸ್ ಬಚಾವೋ ಏಜೆನ್ಸಿ ಅಲ್ಲ. ವಿಪಕ್ಷಗಳು ಸಿಬಿಐ ಬಗ್ಗೆ ಹೊಂದಿರುವ ನಿಲುವು ನಾನು ಹೊಂದಿಲ್ಲ. ಸಿಐಡಿಯಂತೆ ಸಿಬಿಐ ಮೇಲೂ ನಮಗೆ ನಂಬಿಕೆ ಇದೆ ಎಂದರು.
|
ಕರ್ನಾಟಕ ಸರ್ಕಾರದ ಅಧಿಕೃತ ಹೇಳಿಕೆ
ಡಿಕೆ ರವಿ ಸಾವಿನ ಪ್ರಕರಣ ಸಿಬಿಐಗೆ ವಹಿಸಿದ್ದರ ಬಗ್ಗೆ ಕರ್ನಾಟಕ ಸರ್ಕಾರದ ಅಧಿಕೃತ ಹೇಳಿಕೆ ಸದನದಲ್ಲಿ ಸೋಮವಾರ(ಮಾ.23)ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ
|
ಕರ್ನಾಟಕ ಸರ್ಕಾರದ ಅಧಿಕೃತ ಹೇಳಿಕೆ ಪ್ರತಿ
ಡಿಕೆ ರವಿ ಸಾವಿನ ಪ್ರಕರಣ ಸಿಬಿಐಗೆ ವಹಿಸಿದ್ದರ ಬಗ್ಗೆ ಕರ್ನಾಟಕ ಸರ್ಕಾರದ ಅಧಿಕೃತ ಘೋಷಣೆ ಪ್ರತಿ ಇಲ್ಲಿದೆ.
|
ಅಧಿಕೃತ ಘೋಷಣೆ ಪ್ರತಿ -2
ಡಿಕೆ ರವಿ ಸಾವಿನ ಪ್ರಕರಣ ಸಿಬಿಐಗೆ ವಹಿಸಿದ್ದರ ಬಗ್ಗೆ ಕರ್ನಾಟಕ ಸರ್ಕಾರದ ಅಧಿಕೃತ ಘೋಷಣೆ ಪ್ರತಿ ಇಲ್ಲಿದೆ.
|
ಸಾವಿನ ದಿನ ಮುಖ್ಯಮಂತ್ರಿಗಳ ಅಧಿಕೃತ ಹೇಳಿಕೆ
ಡಿಕೆ ರವಿ ಸಾವನ್ನಪ್ಪಿದ ಮರುದಿನ (ಮಾ.17) ಮುಖ್ಯಮಂತ್ರಿಗಳ ಅಧಿಕೃತ ಹೇಳಿಕೆ ಹೀಗಿತ್ತು
|
ಸತ್ಯಕ್ಕಾಗಿ ಅಭಿಯಾನ ಆರಂಭಿಸಿದ್ದ ಟೈಮ್ಸ್ ನೌ
ಸತ್ಯಕ್ಕಾಗಿ ಅಭಿಯಾನ ಆರಂಭಿಸಿದ್ದ ಟೈಮ್ಸ್ ನೌ #IndiaVsMafia ಟ್ಯಾಗ್ ಟ್ರೆಂಡಿಂಗ್ ನಲ್ಲಿರುವಂತೆ ನೋಡಿಕೊಂಡಿತ್ತು.
|
ಕನ್ನಡಿಗ ವಸಂತ್ ಶೆಟ್ಟಿಪ್ರಶ್ನೆ
ಜನರ ಮನವಿ, ಆಗ್ರಹಕ್ಕೆ ಮಣಿಯದ ಜನಪ್ರತಿನಿಧಿ ಸಿದ್ದರಾಮಯ್ಯ ಅವರ ಮನಸ್ಸು ಬದಲಾಯಿಸಲು ಸೋನಿಯಾ ಗಾಂಧಿ ಅವರೇ ಕರೆ ಮಾಡಬೇಕಾಯಿತೇ? ಛೇ!
|
ಜನರ ಬಾಯಿಗೆ ಸಿಕ್ಕಿ ಬಿದ್ದ ಪವನ್ ಕುಮಾರ್
ಸುಮ್ಮನೆ ಏನೋ ಹೇಳಿ ಜನರ ಬಾಯಿಗೆ ಸಿಕ್ಕಿ ಬಿದ್ದ ಲೂಸಿಯಾ ಚಿತ್ರ ಖ್ಯಾತಿ ನಿರ್ದೇಶಕ ಪವನ್ ಕುಮಾರ್.
|
ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್
ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್ ಅವರು ಹೇಳಿಕೆ ನೀಡಿ, ಇದು ಬೆಂಗಳೂರಿನ ಜನಕ್ಕೆ ನೀತಿ ಪಾಠವಾಗಲಿ ಎಂದಿದ್ದಾರೆ.
|
ಡಿಕೆ ರವಿ ಕೇಸ್ ಇನ್ನೂ ಗೊಂದಲ
ಡಿಕೆ ರವಿ ಕೇಸ್ ಇನ್ನೂ ಗೊಂದಲವಾಗಿದೆ ಎಂದು ಜನ ಸಾಮಾನ್ಯರೊಬ್ಬರ ಟ್ವೀಟ್
|
ವಿಳಂಬ ಏಕೆ? ಎಂಬ ಪ್ರಶ್ನೆ ಕೇಳುತ್ತಿರುವ ಜನ
ಡಿಕೆ ರವಿ ಅವರ ಸಾವು ಸಂಭವಿಸಿ 8 ದಿನಗಳ ನಂತರ ಸಿಬಿಐ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯ ಅವರು ವಿಳಂಬ ನೀತಿ ಅನುಸರಿಸಿದ್ದು ಸಂಶಯಾಸ್ಪದ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications