• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಾಯುಕ್ತ ನ್ಯಾಯಮೂರ್ತಿಗೆ ಚೂರಿ ಇರಿತ: ಗಣ್ಯರು ಏನಂತಾರೆ?

|

ಬೆಂಗಳೂರು, ಮಾರ್ಚ್ 07: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಇಂದು ಮಧ್ಯಾಹ್ನ 1:50 ರ ಸಮಯದಲ್ಲಿ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದ ಆವರಣದಲ್ಲಿ ಈ ದುರ್ಘಟನೆ ನಡೆದಿದ್ದು, ಆರೋಪಿಯನ್ನು ತೇಜಸ್ ಶರ್ಮಾ ಎಂದು ಗುರುತಿಸಲಾಗಿದೆ.

ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚೂರಿ ಇರಿತ

ನ್ಯಾ.ವಿಶ್ವನಾಥ್ ಶೆಟ್ಟಿ ಅವರನ್ನು ಮಲ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಈಗಷ್ಟೇ ಆಸ್ಪತ್ರೆಗೆ ಭೇಟಿ ನೀಡಿದ್ದ ಗ್ರಹ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಕುಸಿದು ಹೋಗಿದೆ ಕಾನೂನು ವ್ಯವಸ್ಥೆ

ಕುಸಿದು ಹೋಗಿದೆ ಕಾನೂನು ವ್ಯವಸ್ಥೆ

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವಾಗ, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ತಿಳಿದು ತೀವ್ರ ಆಘಾತವಾಗಿದೆ. ಇದು ಅತ್ಯಂತ ಖಂಡನೀಯ ಮತ್ತು ನ್ಯಾಯಮೂರ್ತಿಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದೇನೆ.

ರಾಜ್ಯದಲ್ಲಿ ಗೂಂಡಾರಾಜ್ ಪರಿಸ್ಥಿತಿಯಿದ್ದು, ಕುಸಿದು ಹೋಗಿರುವ ಕಾನೂನು ಸುವ್ಯವಸ್ಥೆಗೆ ಈ ಘಟನೆ ಮತ್ತೊಂದು ನಿದರ್ಶನ. ದುಷ್ಕರ್ಮಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಮಾಡುವಷ್ಟು ಧೈರ್ಯ ಬಂದಿರುವುದು ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎನ್ನುವುದು ಪ್ರತೀಕ. ರಾಜ್ಯ ಸರ್ಕಾರ ಕಿಂಚಿತ್ತೂ ತಡಮಾಡದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಖಚಿತಪಡಿಸಿಕೊಳ್ಳಬೇಕು, ಇದು ಎಲ್ಲ ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ವಿಶ್ವನಾಥ್ ಶೆಟ್ಟಿ ಅವರಿಗಾಗಿ ಪ್ರಾರ್ಥಿಸೋಣ

ಲೋಕಾಯುಕ್ತ ನ್ಯಾಯಾಧೀಶ ವಿಶ್ವನಾಥ್ ಅವರಿಗೆ ಚೂರಿ ಇರಿತದ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ಕರ್ನಾಟಕದ ಒಬ್ಬ ಗೌರವಾನ್ವಿತ ನ್ಯಾಯಾಧೀಶರಿಗೇ ಹೀಗಾಗುತ್ತದೆಂದರೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ದಿಟ. ವಿಶ್ವನಾಥ್ ಶೆಟ್ಟಿ ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದಿದ್ದಾರೆ ಕೇಂದ್ರ ಸಚಿವ ಸದಾನಂದ ಗೌಡ.

ನ್ಯಾ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತಕ್ಕೆ ಭದ್ರತಾ ವೈಫಲ್ಯವೇ ಕಾರಣ

ಸಿದ್ದರಾಮಯ್ಯ ಆಡಳಿತದಲ್ಲಿ ಲೋಕಾಯುಕ್ತರೂ ಸುರಕ್ಷಿತರಲ್ಲ!

ಸಿದ್ದರಾಮಯ್ಯ ಆಡಳಿತದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳೂ ಸುರಕ್ಷಿತರಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಇದೆಂಥ ರಾಜ್ಯಭಾರ?! ಏನೇ ಆಗಲಿ, ನ್ಯಾ.ವಿಶ್ವನಾಥ್ ಅವರು ಶೀಘ್ರ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಸಂಸದ ರಾಜೀವ್ ಚಂದ್ರಶೇಖರ.

ನ್ಯಾ.ವಿಶ್ವನಾಥ ಶೆಟ್ಟಿಗೆ ಇರಿತ, ಭದ್ರತಾ ವೈಫಲ್ಯ: ಸಂತೋಷ್ ಹೆಗ್ಡೆ

ಮಾಳವಿಕ ಅವಿನಾಶ್

ಕರ್ನಟಕದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಿಗೇ ರಕ್ಷಣೆ ಇಲ್ಲ ಎಂದಅದರೆ ಇನ್ಯಾರಿಗೆ ರಕ್ಷಣೆ ಸಿಕ್ಕೀತು? ಎಂದು ಪ್ರಶ್ನಿಸಿದ್ದಾರೆ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್.

ದೂರು ನೀಡಿ ಹತಾಶನಾಗಿದ್ದ ಕೊನೆಗೆ ನ್ಯಾಯಮೂರ್ತಿಗಳಿಗೇ ಇರಿದ

ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A man stabs Justice Vishwanath Shetty at Lokayukta court, Bengaluru. Accused is identified as Thejesh Sharma who was supposed to be appear before the court today for a case hearing. Here are twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more