ಕಿರುತೆರೆ ನಟ ಚಂದನ್ ಪತ್ನಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು, ಮೇ 31: ಕಿರುತೆರೆ ನಟ ಚಂದನ್ ಸಾವಿನಿಂದಾಗಿ ನೊಂದ ಪತ್ನಿ ಮೀನಾ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.
ಕಿರಿತೆರೆ ನಟ ಚಂದನ್ ಮೇ 24ರಂದು ದಾವಣಗೆರೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದ ನೊಂದ ಪತ್ನಿ ಮೀನಾ ಮಗ ತುಷಾರ್ (13) ಕತ್ತು ಸೀಳಿ ಕೊಂಡು ನಂತರ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಿಹರದ ಹನಗವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಲಾರಿಯೊಂದಕ್ಕೆ ಹಿಂಬದಿಯಿಂದ ಕಾರು ಢಿಕ್ಕಿಯಾದ ಪರಿಣಾಮ ಅದರಲ್ಲಿದ್ದ ಕಿರುತೆರೆ ನಟ, ನಿರೂಪಕ ಚಂದನ್(36) ಮತ್ತು ಇನ್ನೋರ್ವ ನಟಿ ಸ್ಥಳದಲ್ಲೇ ಸಾವನ್ನಪ್ಪಿ,ಇನ್ನಿಬ್ಬರು ಗಾಯಗೊಂಡಿರುವ ಭೀಕರ ದುರ್ಘಟನೆ ನಡೆದಿತ್ತು.

ಹಲವು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಹೆಸರು ಮಾಡಿದ್ದ ಚಂದ್ರಶೇಖರ್ ಅವರು ಚಂದನ್ ಎಂಬ ಹೆಸರಿನಲ್ಲೆ ಪರಿಚಿತರಾಗಿದ್ದರು. ಅವರೊಂದಿಗಿದ್ದ ನಟಿ ಸಂತೋಷಿ (24)ಅವರೂ ಸಾವನ್ನಪ್ಪಿದ್ದು, ರಾಮು ಮತ್ತು ಸುನೀತಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಚಂದನ್ ಸಾವಿನಿಂದ ನೊಂದ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications