ತುಮಕೂರು-ನೆಲಮಂಗಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್: ಪ್ರಯಾಣ ಸಮಯ ಇಳಿಕೆ
Tumakuru-Bengaluru National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಈಗಾಗಲೇ ಕೆಲ ಹೆದ್ದಾರಿಗಳು ಉದ್ಘಾಟನೆ ಹಂತದಲ್ಲಿದ್ದರೆ, ಇನ್ನೂ ಹಲವು ಕಾಮಗಾರಿ ಹಂತದಲ್ಲಿವೆ. ಈ ನಡುವೆಯೇ ತುಮಕೂರು-ಬೆಂಗಳೂರು NHನಲ್ಲಿ ಸಂಚಾರ ದಟ್ಟಣೆ ಎದುರಿದುತ್ತಿದ್ದ ವಾಹನ ಸವಾರರಿಗೆ ಪ್ರಾಧಿಕಾರ ಗುಡ್ ನ್ಯೂಸ್‌ವೊಂದನ್ನು ನೀಡಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದೀಗ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಲೇನ್ ಆಗಿದ್ದು, ನೆಲಮಂಗಲ-ತುಮಕೂರು ಭಾಗದಲ್ಲಿ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪ್ರತಿನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದನ್ನರಿತ ಪ್ರಾಧಿಕಾರ ವಿಸ್ತರಣೆ ಮಾಡುವ ಮಹತ್ವದ ಕಾರ್ಯಕ್ಕೆ ಕೈಹಾಕಿದ್ದು, ಇದು ಪೂರ್ಣಗೊಂಡರೆ ಇದರಿಂದ ವಾಹನ ಸವಾರರು ಸರಗವಾಗಿ ಸಂಚಾರ ಮಾಡಲು ತುಂಬಾ ಉಪಯುಕ್ತ ಆದಂತಾಗುತ್ತದೆ. ಹಾಗಾದ್ರೆ, ಇದು ಯಾವಾಗ ಪೂರ್ಣಗೊಳ್ಳಲಿದೆ ಎನ್ನುವ ಪ್ರಶ್ನಗೆ ಉತ್ತರವನ್ನು ಇಲ್ಲಿ ನೀಡಲಾಗದೆ.

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಏನಿಲ್ಲಾ ಅಂದರೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತಲಿರುತ್ತವೆ. ಈ ಹಿನ್ನೆಲೆ ಸಂಚಾರ ದಟ್ಟಣೆ ಹೆಚ್ಚಾಗುತ್ತಲಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ದಶಪಥ ರಸ್ತೆ ನಿರ್ಮಾಣದ ಕಾಮಗಾರಿ ಆರಂಭ ಆಗಿದೆ. ಇದು ಸದ್ಯ ನಾಲ್ಕು ಪಥದ ಹೆದ್ದಾರಿ ಆಗಿದೆ. ಇದೀಗ ಇದನ್ನು ಆರು ಪಥಕ್ಕೆ ವಿಸ್ತರಣೆ ಮಾಡಲಾಗುತ್ತಿದ್ದು, ನೆಲಮಂಗಲ-ತುಮಕೂರು ನಡುವೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಈಗಾಗಲೇ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾಗಿ ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಇದಕ್ಕೂ ಮುಂಚೆ ಈ ಭಾಗದಲ್ಲಿ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಬೇಸತ್ತು ಹೋಗಿದ್ದು, ಈ ಹೆದ್ದಾರಿ ಆದಮೇಲೆ ಸಂಚಾರ ದಟ್ಟಣೆ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಹಾಗೆಯೇ ಇದೀಗ ಈ ಎಕ್ಸ್‌ಪ್ರೆಸ್ ವೇ ರೀತಿಯಲ್ಲೇ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗುತ್ತಿದೆ.
ಈಗಾಗಲೇ ದಶಪಥ ಹೆದ್ದಾರಿ ಕಾಮಗಾರಿ ಆರಂಭ ಆಗಿದೆ. ಈ ಹೆದ್ದಾರಿಯಲ್ಲಿ 6 ಲೇನ್ ನಿರ್ಮಾಣ ಮತ್ತು ಎರಡೂ ಬದಿಗಳಲ್ಲೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. 2026ರ ಒಳಗೆ ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಇದು ಪೂರ್ಣಗೊಂಡ ನಂತರ ತುಮಕೂರು-ಬೆಂಗಳೂರಿಗೆ ಪ್ರಯಾಣದ ಅವಧಿ ಕೇವಲ 30 ನಿಮಿಷಕ್ಕೆ ಇಳಿಕೆಯಾಗಲಿದೆ.
ರಾಜ್ಯದಲ್ಲಿ ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಪೂರ್ಣಗೊಂಡಿದ್ದು, ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಈ ಭಾಗದಲ್ಲಿ ಎಕ್ಸ್‌ಪ್ರೆಸ್ ವೇ ಆದಾಗಿನಿಂದ ಸಂಚಾರ ದಟ್ಟಣೆ ಜೊತೆಗೆ ಪ್ರಯಾಣದ ಅವಧಿ ಸಹ ಕಡಿಮೆಯಾಗಿದೆ. ಇನ್ನೂ ಇದೀಗ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಹಂತದಲ್ಲಿದೆ.
ಕರ್ನಾಟಕ ಭಾಗದಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ನಿರ್ಮಾಣ ಕಾಮಗಾರಿ ಮೂರು ಹಂತಗಳಲ್ಲೂ ಮುಕ್ತಾಯವಾಗಿದ್ದು, ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಇತ್ತೀಚೆಗಷ್ಟೇ ಟೋಲ್ ದರಪಟ್ಟಿಯನ್ನು ಸಹ ನಿಗದಿ ಮಾಡಲಾಗಿದೆ. ಇದನ್ನು ಪ್ರಾಧಿಕಾರ ಒಪ್ಪಿಗೆ ಕೊಟ್ಟ ಬಳಿಕ ಜಾರಿಗೆ ತರಲಾಗುತ್ತದೆ ಎಂದು ತಿಳಿದುಬಂದಿತ್ತು. ಆಂಧ್ರಪ್ರದೇಶ - ತಮಿಳುನಾಡು ಭಾಗದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಉದ್ಘಾಟನೆ ವಿಳಂಬ ಆಗಿದ್ದು, ಇದೇ ವರ್ಷದ ಕೊನೆಯಲ್ಲಿ ಅಥವಾ 2026ರ ಜೂನ್‌ನಲ್ಲಿ ಇದು ನೆರವೇರಲಿದೆ ಎನ್ನುವ ಮಾಹಿತಿಯನ್ನು ಹೆದ್ದಾರಿ ಪ್ರಾಧಿಕಾರ ನೀಡಿದೆ.












Click it and Unblock the Notifications