ಬೈಕಿಗೆ ಡಿಕ್ಕಿ ಹೊಡೆದು ಸವಾರನನ್ನು 100 ಮೀಟರ್ ಎಳೆದೊಯ್ದ ಲಾರಿ

ಬೆಂಗಳೂರು, ಮಾರ್ಚ್ 12: ಬೈಕಿಗೆ ಡಿಕ್ಕಿ ಹೊಡೆದ ಲಾರಿಯೊಂದು ಸವಾರನನ್ನು 100 ಮೀಟರ್ ಎಳೆದೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಅರಿಶಿನಕುಂಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತುಮಕೂರು ಮೂಲ ಜೀವನ್ ಶೈನ್(55) ಮೃತಪಟ್ಟ ಬೈಕ್ ಸವಾರ. ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು-ಬೆಂಗಳೂರು ಮಾರ್ಗದ ಹೆದ್ದಾರಿಯಲ್ಲಿ ತೆರಳುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ.

ಈ ಸಂದರ್ಭದಲ್ಲಿ ಬೈಕ್ ಸವಾರ ಲಾರಿ ಮಧ್ಯೆ ಸಿಲುಕಿದ್ದಾನೆ. ಇದನ್ನು ಗಮನಿಸದ ಚಾಲಕ ಲಾರಿಯನ್ನು ಚಲಾಯಿಸಿಕೊಂಡು ಸುಮಾರು ನೂರು ಮೀಟರ್‌ನಷ್ಟು ದೂರ ಹೋಗಿದ್ದ. ಇದನ್ನು ಕಂಡು ರಸ್ತೆಯ ಅಕ್ಕಪಕ್ಕದಲ್ಲಿದ್ದವರು ಲಾರಿ ನಿಲ್ಲಿಸುವಂತೆ ಖುಗಿದ್ದಾರೆ. ತಕ್ಷಣವೇ ಚಾಲಕ ಲಾರಿಯನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನ ಸಂದಣಿ ಉಂಟಾಗಿತ್ತು.

Truck drags man into 100 metres

ಇದೇ ರೀತಿಯ ಘಟನೆ ಹಿಂದೊಮ್ಮೆ ನಡೆದಿತ್ತು ಕೆಎಸ್‌ಆರ್‌ಟಿಸಿ ಬಸ್‌ ಒಂದು ಸವಾರನೊಬ್ಬನಿಗೆ ಡಿಕ್ಕಿ ಹೊಡೆದು ಸುಮಾರು 70 ಕಿ.ಮೀ ನಷ್ಟು ದೂರ ಎಳೆದುಕೊಂಡು ಬಂದಿತ್ತು. ಬಳಿಕ ಡಿಪೋದಲ್ಲಿ ಬಸ್ಸನ್ನು ನಿಲ್ಲಿಸುವ ವೇಳೆ ಗಮನಕ್ಕೆ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+