ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋಗಾಗಿ ಮರಕ್ಕೆ ಕೊಡಲಿ; ಹೈಕೋರ್ಟ್ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 05 : ನಮ್ಮ ಮೆಟ್ರೋ ಯೋಜನೆಗೆ ಮರಗಳನ್ನು ಕಡಿಯಬೇಕೆ? ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ನಮ್ಮ ಮೆಟ್ರೋ ಯೋಜನೆಯ ವಿವಿಧ ಮಾರ್ಗಗಳಿಗೆ 200 ಮರಗಳನ್ನು ಕಡಿಯಲು ಅನುಮತಿ ಕೇಳಲಾಗಿದೆ.

ಕರ್ನಾಟಕ ಹೈಕೋರ್ಟ್ ಆದೇಶದ ಅನ್ವಯ 2019ರ ಏಪ್ರಿಲ್‌ನಲ್ಲಿ ಕರ್ನಾಟಕ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿತ್ತು. ವಿವಿಧ ಕ್ಷೇತ್ರಗಳ ತಜ್ಞರ ತಂಡ ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ ಇದೆಯೇ? ಎಂಬುದನ್ನು ಪರಿಶೀಲಿಸಿ ಒಪ್ಪಿಗೆ ನೀಡಬೇಕು ಎಂದು ಸೂಚನೆ ನೀಡಲಾಗಿತ್ತು.

ನಮ್ಮ ಮೆಟ್ರೋಗೆ 204 ಬೋಗಿ ಆಂಧ್ರದಲ್ಲಿ ನಿರ್ಮಾಣ ನಮ್ಮ ಮೆಟ್ರೋಗೆ 204 ಬೋಗಿ ಆಂಧ್ರದಲ್ಲಿ ನಿರ್ಮಾಣ

ಬಿಎಂಆರ್‌ಸಿಲ್ 200 ಮರಗಳನ್ನು ಕಡಿಯಲು/ಕೆಲವು ಮರಗಳನ್ನು ಸ್ಥಳಾಂತರ ಮಾಡಲು ಅನುಮತಿ ಕೇಳಿದೆ. ಆದ್ದರಿಂದ, ಕರ್ನಾಟಕ ಹೈಕೋರ್ಟ್ ಮರಗಳನ್ನು ಕಡಿಯ ಬೇಕಾದ ಅನಿವಾರ್ಯತೆ ಇದೆಯೇ? ಎಂಬುದನ್ನು ಪರಿಶೀಲಿಸಿ ಎಂದು ಸೂಚನೆ ನೀಡಿದೆ.

ಹೆಬ್ರಿಯಲ್ಲಿ ಮಣ್ಣಿನಡಿ ಹೂತಿಟ್ಟಿದ್ದ ಲಕ್ಷಾಂತರ ಮೌಲ್ಯದ ಮರ ವಶಹೆಬ್ರಿಯಲ್ಲಿ ಮಣ್ಣಿನಡಿ ಹೂತಿಟ್ಟಿದ್ದ ಲಕ್ಷಾಂತರ ಮೌಲ್ಯದ ಮರ ವಶ

Tress Cut For Namma Metro Project Court Directs To Fresh Examination

ಬೆಂಗಳೂರು ನಗರದಲ್ಲಿ ಮರಗಳ ಗಣತಿಯನ್ನು ಬಿಬಿಎಂಪಿ ಕೈಗೊಂಡಿದೆ. ಇದುವರೆಗೂ 4,859 ಮರಗಳ ಗಣತಿಯನ್ನು ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿದೆ. ಏಪ್ರಿಲ್ 7ರಂದು ಮರಗಳ ಕಡಿತದ ಬಗ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮತ್ತೆ ನಡೆಯಲಿದೆ.

ಶಿವಮೊಗ್ಗ; ಲಯನ್ ಸಫಾರಿಯಿಂದ ಅಕ್ರಮವಾಗಿ ಮರ ಸಾಗಾಟ? ಶಿವಮೊಗ್ಗ; ಲಯನ್ ಸಫಾರಿಯಿಂದ ಅಕ್ರಮವಾಗಿ ಮರ ಸಾಗಾಟ?

ಅರ್ಜಿಯ ವಿಚಾರಣೆ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಅವರು ಸಾಧ್ಯವಾದಷ್ಟು ಮರಗಳನ್ನು ಉಳಿಸಲು ಪ್ರಯತ್ನ ನಡೆಸಿ, ಅನಿವಾರ್ಯವಾದರೆ ಮಾತ್ರ ಮರಗಳನ್ನು ಕತ್ತರಿಸಿ ಎಂದು ಅಭಿಪ್ರಾಯಪಟ್ಟರು.

English summary
Karnataka high court directed special committee to conduct fresh examination of all applications submitted by BMRCL. Application seeks permission to cut 200 trees in Bengaluru for Namma Metro project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X