ಬಸ್ ಟಿಕೆಟ್ ದರ ಶೇ.18ರಷ್ಟು ಹೆಚ್ಚಳಕ್ಕೆ ಚಿಂತನೆ, ಮಾಹಿತಿ ಇಲ್ಲಿದೆ
ಬೆಂಗಳೂರು, ಮಾರ್ಚ್ 6: ಲೋಕಸಭಾ ಚುನಾವಣೆ ಮುಗಿದ ಬಳಿಕ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗುವುದು ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ತಿಳಿಸಿದ್ದಾರೆ.
ಡೀಸೆಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯು ತಿಂಗಳಿಗೆ 15 ಕೋಟಿ ರೂಗಳಂತೆ ವಾರ್ಷಿಕ 180 ಕೋಟಿ ರೂ ನಷ್ಟ ಅನುಭವಿಸುತ್ತಿದೆ ಹಾಗಾಗಿ ಟಿಕೆಟ್ ದರ ಹೆಚ್ಚಳ ಅನುವಾರ್ಯವಾಗಿದೆ. ಚುನಾವಣೆ ಮುಗಿದ ಬಳಿಕ ಶೇ.18ರಷ್ಟು ಹೆಚ್ಚಳ ಮಾಡುವ ಕುರಿತು ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

78 ಕೋಟಿ ರೂ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ ಎಲೆಕ್ಟ್ರಿಕ್ ಬಸ್‌ಗಳನ್ನು ಬಾಡಿಗೆ ಕೊಡಲು ಮುಂದಾಗಿದ್ದ ಕಂಪನಿಗಳು ಭಾರಿ ಲಾಭ ಮಾಡಿದ್ದವು. ಅಗತ್ಯಬಿದ್ದರೆ ಮಂತ್ರಿಗಳನ್ನೇ ಬದಲಾಯಿಸುವ ಶಕ್ತಿ ಇದಕ್ಕಿದೆ.
ಅಂಥ ಕಂಪನಿಯವರ ಆಟ ರಾಜ್ಯದಲ್ಲಿ ನಡೆಯಲಿಲ್ಲ, ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳ ದರ್ಪಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಹೇಳಿದರು.











Click it and Unblock the Notifications