ಸಾಲದ ಸುಳಿ; ದಕ್ಷಿಣ ಕನ್ನಡದ ಟ್ರಾನ್ಸ್‌ಪೋರ್ಟ್ ಮಾಲೀಕ ಆತ್ಮಹತ್ಯೆ

ಬೆಂಗಳೂರು, ಮೇ29: ಟ್ರಾನ್ಸ್‌ಪೋರ್ಟ್ ಮಾಲೀಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಸರಘಟ್ಟದ ಹಾವನೂರು ಬಡಾವಣೆಯಲ್ಲಿ ನಡೆದಿದೆ. ಮೂಡಬಿದಿರೆ ಮೂಲದ ಪ್ರಮೋದ್ ಹೆಗಡೆ (45) ನೇಣು ಬಿಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಮೋದ್ ಹೆಗಡೆ ಬೆಂಗೂರಿನ ಹೆಸರಘಟ್ಟ ಹಾವನೂರು ಬಡವಣೆಯಲ್ಲಿ ವಾಸವಾಗಿದ್ದರು. ಸ್ನೇಹಿತನ ಜೊತೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಮಾಹಿತಿ ನೀಡಿದ್ದರು. ಕ್ರಿಕೆಟ್ ಪಂದ್ಯಾವಳಿಯನ್ನು ನೋಡಿಕೊಂಡು ರಾತ್ರಿ 10.30 ಸುಮಾರಿಗೆ ಮನೆಗೆ ವಾಪಸ್ಸಾಗಿದ್ದಾರೆ.

ಆ ಬಳಿಕ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಪತ್ನಿ ವೀಣಾ ಹೆಗಡೆ ನಿರಂತರವಾಗಿ ಪತಿ ಪ್ರಮೋದ್ ಹೆಗಡೆಗೆ ಕರೆ ಮಾಡಿದ್ದಾರೆ. ಆದರೆ ಪ್ರಮೋದ್ ಫೋನ್ ರಿಸೀವ್ ಮಾಡಿರಲಿಲ್ಲ ಇದರಿಂದ ತಮ್ಮ ಪರಿಚಯಸ್ಥ ಶಶಿಗೌಡಗೆ ಕರಮಾಡಿ ಪತಿಯ ಬಗ್ಗೆ ವಿಚಾರಿಸಿದ್ದಾರೆ. ಶಶಿಗೌಡ ಮನೆಗೆ ಬಂದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಪ್ರಮೋದ್ ಮೃತದೇಹ ಪತ್ತೆಯಾಗಿದೆ. ತಕ್ಷಣಕ್ಕೆ ಬಾಗಲಗುಂಟೆ ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ.

Transport Company Owener Commited Suicide in Bengaluru

ಪ್ರಮೋದ್ ಹೆಗಡೆ ಮತ್ತು ವೀಣಾ ಹೆಗಡೆ ಮದುವೆಯಾಗಿ 16 ವರ್ಷಗಳು ಕಳೆದಿವೆ. ವೀಣಾ ಮತ್ತು ಪ್ರಮೋದ್ ನಡುವೆ ವೈಮನಸ್ಸಿರಲಿಲ್ಲ. ವೀಣಾ ಹೆಗಡೆ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಪ್ರಮೋದ್ ಹೆಗಡೆ ಮನೆಯಲ್ಲಿ ನೇಣಿಗೆ ಕೊರಳೊಡಿದ್ದಾರೆ.

ಸಾಲದ ಕೂಪಕ್ಕೆ ಸಿಲುಕಿದ್ದ ಪ್ರಮೋದ್; ಪ್ರಮೋದ್ ಪೀಣ್ಯದಲ್ಲಿ ಟ್ರಾನ್‌ಪೋರ್ಟ್ ವ್ಯವಹಾರ ಮತ್ತು ಗಮ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಕೋವಿಡ್‌ನಿಂದ ಪ್ರಮೋದ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆರ್ಥಿಕವಾಗಿ ಸಂಕಷ್ಟವಾದಗ ಸಾಲವನ್ನು ಮಾಡಿಕೊಂಡಿದ್ದರು. ಟ್ರಾನ್ಸ್‌ಪೋರ್ಟ್ ವ್ಯವಪಾರ ಅಷ್ಟಾಗಿ ನಡೆಯುತ್ತಿರಲಿಲ್ಲ ಇದರಿಂದಾಗಿ ಪ್ರಮೋದ್ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂದು ಪತ್ನಿ ವೀಣಾ ಹೆಗಡೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Transport Company Owener Commited Suicide in Bengaluru

ಡೆತ್‌ನೋಟ್ ಬರೆದಿಟ್ಟಿಲ್ಲ; ಪ್ರಮೋದ್ ಮನೆಯಲ್ಲಿ ಸಾವಿಗೆ ಶರಣಾಗಿರುವುದರಿಂದ ಮನೆಯಲ್ಲಿ ಏನಾದರೂ ಡೆತ್‌ನೋಟ್ ಬರಿದಿಟ್ಟಿದ್ದಾರಾ? ಎಂದು ಪೊಲೀಸರು ಶೋಧ ನಡೆಸಿದರು. ಆದರೆ ಪ್ರಮೋದ್ ಹೆಗಡೆ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟಿಲ್ಲ ಎಂಬುದು ತಿಳಿದುಬಂದಿದೆ. ಬಾಗಲುಗುಂಟೆ ಪೊಲೀಸರು ಪ್ರಮೋದ್ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ಕಳಿಸಿದರು. ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಕೋವಿಡ್ ಅದೆಷ್ಟೋ ಜನರ ಜೀವ ಜೀವವನ್ನು ಬಲಿ ತೆಗೆದುಕೊಂಡಿದೆ ಎಂಬದಕ್ಕೆ ಪ್ರಮೋದ್ ಸಾವು ಕೂಡ ನಿದರ್ಶನವಾಗಿದೆ. ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ವ್ಯಾಪಾರ ವ್ಯವಹಾರಕ್ಕೆ ಕೈ ಹಾಕಿದ್ದರು. ಕೊರೋನ ಎಂಬ ಖಾಯಿಲೆಯಿಂದ ಸೃಷ್ಟಿಯಾದ ಅವಾಂತರಗಳಿಂದ ಸಾಲದ ಸುಳಿಗೆ ಸಿಲಿಕಿದ ಪ್ರಮೋದ್ ಕೂಡ ಆತ್ಮಹತ್ಯೆಯನ್ನು ಮಾಡಿಕೊಂಡಿರುವುದು ದುರಂತದ ಸಂಗತಿಯಾಗಿದೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

Recommended Video

      IPL ಫೈನಲ್ ಮ್ಯಾಚ್ ಗೂ ಮುನ್ನ ಸ್ಟೇಡಿಯಂನಲ್ಲಿ ಮಾರ್ದನಿಸಿತು KGF ನ ವಯಲೆನ್ಸ್ ಡೈಲಾಗ್ | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+