ಬೆಂಗಳೂರು-ಹೊಸೂರು ನಡುವಿನ ರೈಲು ಸಂಚಾರಕ್ಕೆ ವೇಗ

ಪ್ರಯೋಗದ ಸಮಯದಲ್ಲಿ ರೈಲುಗಳನ್ನು ಗಂಟೆಗೆ 120 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಓಡಿಸಲಾಗುತ್ತದೆ.

ಬೆಂಗಳೂರು, ಫೆಬ್ರವರಿ 20: ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ಕಾರ್ಮೆಲಾರಂ ಮತ್ತು ಹೀಲಲಿಗೆ ನಡುವೆ ಹೊಸದಾಗಿ ಹಾಕಲಾದ ಡಬಲ್ ಲೈನ್‌ನಲ್ಲಿ ಸೋಮವಾರ ವೇಗ ಪ್ರಯೋಗಗಳನ್ನು ನಡೆಸಲಿದ್ದಾರೆ. ಈ ಮೂಲಕ ಬೆಂಗಳೂರು, ಹೊಸೂರು ನಡುವಿನ ರೈಲು ಸಂಚಾರಕ್ಕೆ ವೇಗ ಸಿಗಲಿದೆ.

ಪ್ರಯೋಗದ ಸಮಯದಲ್ಲಿ ರೈಲುಗಳನ್ನು ಗಂಟೆಗೆ 120 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಓಡಿಸಲಾಗುತ್ತದೆ. ನಂತರ ನಿಯಮಿತ ರೈಲು ಸೇವೆಗಳನ್ನು ಒದಗಿಸಲಾಗುತ್ತದೆ. 10.5 ಕಿಲೋ ಮೀಟರ್‌ ಉದ್ದದ ಕಾರ್ಮೆಲಾರಂ- ಹೀಲಳಿಗೆ ಮಾರ್ಗವು 48 ಕಿಮೀ ಬೈಯಪ್ಪನಹಳ್ಳಿ- ಹೊಸೂರು ಮಾರ್ಗದಲ್ಲಿ ಬರುವ ಭಾಗವಾಗಿದೆ.

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) (ಕೆ-ರೈಡ್‌) ಲಿಮಿಟೆಡ್ 498.73 ಕೋಟಿ ವೆಚ್ಚದಲ್ಲಿ ಈ ಮಾರ್ಗದಲ್ಲಿ ದ್ವಿಮಾರ್ಗವನ್ನು ಹಾಕುಲಾಗುತ್ತಿದೆ. ಕಾರ್ಮೆಲಾರಂ ಮತ್ತು ಹೀಲಲಿಗೆ ನಡುವಿನ ಎರಡನೇ ರೈಲ್ವೆ ಹಳಿಯು ಬೆಂಗಳೂರು ಮತ್ತು ಹೊಸೂರು ನಡುವಿನ ರೈಲು ಸಂಚಾರವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಬೆಂಗಳೂರನ್ನು ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕಿಸುವ ರೈಲುಗಳು ಬೆಳ್ಳಂದೂರು ಅಥವಾ ಹೀಲಲಿಗೆ ಕಾಯಬೇಕಾಗಿಲ್ಲ.

ರೈಲ್ವೆ ಮಾರ್ಗದಲ್ಲಿ ಅತಿಕ್ರಮ ಪ್ರವೇಶ ಮಾಡದಂತೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಅಲ್ಲದೆ ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಬೈಯಪ್ಪನಹಳ್ಳಿ ಮತ್ತು ಕಾರ್ಮೆಲಾರಂ ಮತ್ತು ಹೀಲಲಿಗೆ ಮತ್ತು ಹೊಸೂರು ನಡುವಿನ ವಿಭಾಗಗಳು ಮಾರ್ಚ್ 2024 ರೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

498 ಕೋಟಿ ರೂಪಾಯಿಗಳ ಅಂದಾಜು ವೆಚ್ಚ

498 ಕೋಟಿ ರೂಪಾಯಿಗಳ ಅಂದಾಜು ವೆಚ್ಚ

ಬೈಯಪ್ಪನಹಳ್ಳಿ-ಹೊಸೂರು ಯೋಜನೆಯನ್ನು 2018-2019 ರಲ್ಲಿ 498 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಲಾಗಿತ್ತು. ಆದರೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಇದರ ಗಡುವನ್ನು ತಪ್ಪಿಸಿತು. "ಕೆ-ರೈಡ್‌ನಿಂದ ಕಾರ್ಯಾರಂಭ ಮಾಡಲಿರುವ ಮೊದಲ ಕಾಮಗಾರಿ ಇದಾಗಿದೆ. ಇದು ಅಧಿಕೃತಗೊಂಡ ನಂತರ ಅದೇ ದಿನ ಡಬಲ್ ಲೈನ್‌ನಲ್ಲಿ ರೈಲು ಸೇವೆಗಳನ್ನು ಪರಿಚಯಿಸಲಾಗುವುದು. ಬೈಯಪ್ಪನಹಳ್ಳಿ- ಹೊಸೂರು ಯೋಜನೆ ಪೂರ್ಣಗೊಂಡ ನಂತರ ಹೆಚ್ಚಿನ ರೈಲುಗಳನ್ನು ಪರಿಚಯಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕ

ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕ

ಯೋಜನೆಯು ಪೂರ್ಣಗೊಂಡ ನಂತರ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಹೊಸೂರು ನಡುವೆ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕ ಕಲ್ಪಿಸುವ ಹೆಚ್ಚಿನ ಪ್ರಯಾಣಿಕರ ರೈಲುಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಈ ಮಾರ್ಗದ ದ್ವಿಗುಣಗೊಳಿಸುವಿಕೆಯು ಬೆಂಗಳೂರು ಮತ್ತು ಹೊಸೂರು ನಡುವಿನ ರೈಲು ಸಂಚಾರವನ್ನು ವೇಗಗೊಳಿಸುವ ನಿರೀಕ್ಷೆಯಿದೆ.ಕೆ-ರೈಡ್‌ ಬೆಳ್ಳಂದೂರು, ಹೀಲಲಿಗೆ, ಮತ್ತು ಆನೇಕಲ್ ನಿಲ್ದಾಣಗಳಿಗೆ ಹೊಸ ರೂಪ ನೀಡಲಿದೆ ಮತ್ತು ಹುಸ್ಕೂರಿನಲ್ಲಿ ಹೊಸ ನಿಲ್ದಾಣವನ್ನು ನಿರ್ಮಿಸಲಾಗುತ್ತದೆ ಎಂದು ಮೂಲಗಳಯ ತಿಳಿಸಿವೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆ

ಬೆಂಗಳೂರು ಉಪನಗರ ರೈಲ್ವೆ ಯೋಜನೆ

ಕರ್ನಾಟಕ-ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪೆನಿ (ಕೆ-ರೈಡ್) ಉಪನಗರ ರೈಲು ಯೋಜನೆಯ ಅನುಷ್ಠಾನಕ್ಕಾಗಿ ನೋಡಲ್ ಏಜೆನ್ಸಿಯಿಂದ 15,767 ಕೋಟಿ ರೂಪಾಯಿಗಳ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಎರಡನೇ ಹಂತಕ್ಕೆ ಕಳೆದ ಜನವರಿಯಲ್ಲಿ ಅಂತಿಮವಾಗಿ ಟೆಂಡರ್‌ಗಳನ್ನು ಕರೆಯಲಾಗಿತ್ತು.

46.8 ಕಿಮೀ ಉದ್ದದ ಹೀಲಲಿಗೆ- ರಾಜನಕುಂಟೆ ಮಾರ್ಗ

46.8 ಕಿಮೀ ಉದ್ದದ ಹೀಲಲಿಗೆ- ರಾಜನಕುಂಟೆ ಮಾರ್ಗ

148 ಕಿಮೀ ಯೋಜನೆಯಲ್ಲಿ 46.8 ಕಿಮೀ ಉದ್ದದ ಯಲಹಂಕ (ಕಾರಿಡಾರ್ -4 ಎಂದು ಕರೆಯಲಾಗುತ್ತದೆ) ಮೂಲಕ ಹೀಲಲಿಗೆ ಮತ್ತು ರಾಜನಕುಂಟೆ ನಡುವಿನ ಕನಕ ಲೈನ್‌ನಲ್ಲಿ ಸಿವಿಲ್ ಕಾಮಗಾರಿಗಳನ್ನು ಟೆಂಡರ್ ಒಳಗೊಂಡಿದೆ. 8.96 ಕಿಮೀ ಉದ್ದದ ಎತ್ತರದ ವಯಾಡಕ್ಟ್‌ನ ವಿನ್ಯಾಸ ಮತ್ತು ನಿರ್ಮಾಣ ಮತ್ತು 37 92 ಕಿಮೀ ಉದ್ದದ ಅಟ್-ಗ್ರೇಡ್ ರಚನೆಯು ಅದರ ಅಡಿಯಲ್ಲಿ ಒಳಗೊಂಡಿದೆ. ನಿಲ್ದಾಣದ ಕಟ್ಟಡಗಳ ನಿರ್ಮಾಣವು ಯೋಜನೆಯ ಭಾಗವಾಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+