ಪ್ರತ್ಯೇಕ ಬಸ್‌ ಪಥದಲ್ಲಿ ಅ.20 ರಿಂದ ಬಿಎಂಟಿಸಿ ಸಂಚಾರ

ಬೆಂಗಳೂರು, ಅಕ್ಟೋಬರ್ 16 : ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಪಥ ನಿರ್ಮಾಣವಾಗುತ್ತಿದೆ. ಅಕ್ಟೋಬರ್ 20 ರಿಂದಲೇ ಪ್ರತ್ಯೇಕ ಪಥದಲ್ಲಿ ಬಸ್‌ಗಳು ಪ್ರಾಯೋಗಿಕವಾಗಿ ಸಂಚಾರ ನಡೆಸಲಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಬಿಬಿಎಂಪಿ, ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ಬಿಎಂಟಿಸಿ ಜಂಟಿಯಾಗಿ ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕಾಗಿ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡುತ್ತಿವೆ.

ನಗರದ 12 ಪ್ರಮುಖ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಅಕ್ಟೋಬರ್ 20ರಿಂದ ಕೆ.ಆರ್.ಪುರದಿಂದ ಮಾರತ್ ಹಳ್ಳಿಯವರೆಗೆ ಪ್ರತ್ಯೇಕ ಬಸ್ ಪಥದಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಚಾಲನೆ ಸಿಗಲಿದೆ.

Bus Priority Lane

ಸಂಚಾರ ದಟ್ಟಣೆಯಲ್ಲಿ ಬಿಎಂಟಿಸಿ ಬಸ್‌ಗಳು ಸಿಲುಕುವುದನ್ನು ತಪ್ಪಿಸಲು ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ಬಿಎಂಟಿಸಿ ಸಾರಿಗೆಯನ್ನು ಬಳಸಿ, ಪ್ರತ್ಯೇಕ ಪಥದ ಪ್ರಯೋಜನ ಪಡೆಯಬೇಕು ಎಂದು ಆಯುಕ್ತರು ಕರೆ ನೀಡಿದ್ದಾರೆ.

ಬೆಂಗಳೂರಿನ 12 ಮಾರ್ಗದಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಿಸಲಾಗುತ್ತದೆ. ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ- ಕೆ.ಆರ್.ಪುರ ನಡುವಿನ 18.5 ಕಿ. ಮೀ. ಉದ್ದ ರಸ್ತೆಯಲ್ಲಿ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗುತ್ತಿದೆ.

ಬಿಎಂಟಿಸಿ ಬಸ್ ಪಥ 3.5 ಮೀಟರ್ ಇರಲಿದ್ದು ರಸ್ತೆಯಲ್ಲಿ ಬೊಲ್ಲಾರ್ಡ್‌ಗಳನ್ನು ಹಾಕಲಾಗುತ್ತದೆ. ಇದು ರಾತ್ರಿ ವೇಳೆ ಇತರ ವಾಹನ ಸವಾರರಿಗೆ ಕಾಣುವಂತೆ ಪ್ರತಿಫಲಕ ಆಳವಡಿಸಲಾಗುತ್ತಿದೆ. ಈ ಪಥದಲ್ಲಿ ಇತರ ವಾಹನ ಸಂಚಾರ ನಡೆಸದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಬೆಂಗಳೂರು ನಗರದಲ್ಲಿ 6500 ಬಿಎಂಟಿಸಿ ಬಸ್‌ಗಳಿವೆ. ಇವುಗಳಲ್ಲಿ 6200 ಬಸ್‌ಗಳು ಪ್ರತಿದಿನ ರಸ್ತೆಗೆ ಇಳಿಯುತ್ತವೆ. ಸಂಚಾರ ದಟ್ಟಣೆಯಿಂದಾಗಿ ಬಸ್‌ಗಳ ಸಂಚಾರದಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ, ಅಧಿಕ ಸಂಚಾರ ದಟ್ಟಣೆ ಇರುವ 12 ರಸ್ತೆಯಲ್ಲಿ ಬಸ್‌ಗಳಿಗೆ ಪ್ರತ್ಯೇಕ ಪಥ ನಿರ್ಮಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+