ಬೆಂಗಳೂರು: ಪಟಾಕಿ ಸಿಡಿದು ಗಾಯಗೊಂಡವರ ಸಂಖ್ಯೆ 40ಕ್ಕೆ ಏರಿಕೆ
ಬೆಂಗಳೂರು, ಅಕ್ಟೋಬರ್ 21: ದೀಪಾವಳಿ ಹಬ್ಬ ಸಂಭ್ರಮದಿಂದ ಮುಗಿದಿದೆ. ಆದರೆ ಬೆಳಕಿನ ಹಬ್ಬ ಹಲವರ ಪಾಲಿಗೆ ಕತ್ತಲಾಗಿ ಪರಿಣಮಿಸಿದ್ದು ದುರಂತವೇ ಸರಿ. ದೀಪಾವಳಿಯಂದು ಪಟಾಕಿ ಸಿಡಿಸಿ ಮತ್ತೆ 14 ಜನ ಗಾಯಗೊಂಡಿದ್ದು, ಇದುವರೆಗೂ ಗಾಯಗೊಂಡವರ ಸಂಖ್ಯೆ 40 ಕ್ಕೆ ಏರಿದೆ.
ಅ.19 ರಂದು 11 ಜನರ ಕಣ್ಣಿಗೆ ಗಾಯವಾಗಿ ಬೆಂಗಳೂರಿನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅ.20 ರಂದೂ ಪಟಾಕಿ ಹುಚ್ಚಿಗೆ ಮತ್ತಷ್ಟು ಜನ ಗಾಯಗೊಂಡಿದ್ದು, ಹಬ್ಬದ ಸಂಭ್ರಮಕ್ಕೆ ಮಂಕುಕವಿದಂತಾಗಿತ್ತು.

ಪರಿಸರ ಮಾಲಿನ್ಯ ಮತ್ತು ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ಮನಗಂಡು ಪಟಾಕಿಯನ್ನು ನಿಷೇಧಿಸುವ ಕುರಿತು ಹಲವೆಡೆಯಿಂದ ಕೂಗು ಕೇಳಿಬರುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications