Get Updates
Get notified of breaking news, exclusive insights, and must-see stories!

Traffic Violation: ಎರಡೇ ದಿನದಲ್ಲಿ 13.8 ಕೋಟಿ ರೂ.ದಂಡ ಸಂಗ್ರಹ, ತೆರವಾದ ಪ್ರಕರಣಗಳ ವಿವರ ಇಲ್ಲಿದೆ

ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಶೇ.50 ರಷ್ಟು ರಿಯಾಯಿತಿ ನೀಡಿದ ಬೆನ್ನಲ್ಲೆ ಕೇವಲ 2 ದಿನದಲ್ಲಿ ಕೋಟಿಗಟ್ಟಲೇ ಹಣ ದಂಡದ ರೂಪದಲ್ಲಿ ಸಂಗ್ರಹ. ಪಾವತಿಯಾದ ಹಣ, ವಿಲೇವಾರಿಯಾದ ಪ್ರಕರಣಗಳು ಎಷ್ಟು? ಮುಂದೆ ತಿಳಿಯಿರಿ.

ಬೆಂಗಳೂರು, ಫೆಬ್ರುವರಿ 05: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಅರ್ಧದಷ್ಟು ರಿಯಾಯಿತಿ ನೀಡಿದ ಬೆನ್ನಲ್ಲೆ ಕೆಲವೇ ದಿನಗಳಲ್ಲಿ ನಿಯಮ ಉಲ್ಲಂಘಿಸಿದವರಿಂದ ಕೋಟಿಗಟ್ಟಲೇ ದಂಡ ಪಾವತಿಯಾಗಿದೆ. ಇನ್ನೂ ಸಹ ವಾಹನ ಸವಾರರು ದಂಡ ಕಟ್ಟಲು ಮುಗಿಬೀಳುತ್ತಿದ್ದಾರೆ.

ಬೆಂಗಳೂರಲ್ಲಿ ಸಂಚಾರ (Traffic rules) ನಿಯಮ ಉಲ್ಲಂಘಿಸಿ ದಂಡದ ಕಟ್ಟದೇ ಬಾಕಿ ಉಳಿಸಿಕೊಂಡಿದ್ದವರಿಗೆ ಸರ್ಕಾರ ಎರಡು ದಿನದ ಹಿಂದಷ್ಟೇ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಈ ರಿಯಾಯತಿ ಸಮಯ ಫೆಬ್ರುವರಿ 11ರವರೆಗೆ ಇರಲಿದೆ. ಹೀಗಾಗಿ ಕಳೆದ ಶುಕ್ರವಾರದಿಂದಲೇ ಸಂಚಾರ ನಿಯಮ ಉಲ್ಲಂಘನೆಯ ಸಾಕಷ್ಟು ಪ್ರಕರಣಗಳು ತೆರವಾಗಿವೆ. ಕೋಟಿಗಟ್ಟಲೇ ಹಣ ದಂಡದ ರೂಪದಲ್ಲಿ ಸಂಗ್ರಹವಾಗಿದೆ.

ರಿಯಾಯಿತಿ ನಿರ್ಧಾರ ಪ್ರಕಟವಾದ ಬಳಿಕ ನಗರ ಸಂಚಾರ ಪೊಲೀಸರು 2 ದಿನಗಳಲ್ಲಿ ರೂ.13.8 ಕೋಟಿಗೂ ಹೆಚ್ಚು ದಂಡವನ್ನು ಸಂಗ್ರಹಿಸಿದ್ದಾರೆ. ಇನ್ನೂ ಸಾಕಷ್ಟು ಪ್ರಮಾಣದ ಹಣ ಪಾವತಿಯಾಗುವ ನಿರೀಕ್ಷೆ ಇದೆ.

Traffic violation : 13.8 Crore Fines Collected And 4.7 Lakh Cases Of Disposed

ಪೊಲೀಸ್ ಮೂಲಗಳು ನೀಡಿದ ಅಂಕಿ ಸಂಖ್ಯೆಗಳ ಪ್ರಕಾರ, ಶನಿವಾರದವರೆಗೆ ಒಟ್ಟು 4,77,298 ಸಂಚಾರ ನಿಯಮ ಉಲ್ಲಂಘನೆಯ (Traffic Rules Violation) ಪ್ರಕರಣಗಳು ವಿಲೇವಾರಿಯಾಗಿವೆ. ಇದರಿಂದ ಕೇವಲ ಎರಡೇ ದಿನದಲ್ಲಿ ಪೊಲೀಸ್ ಇಲಾಖೆಗೆ 13,81,13,621 ರೂಪಾಯಿ ಸಂಗ್ರಹವಾಗಿದೆ. ಶುಕ್ರವಾರವೇ ಸುಮಾರು ರೂ.5.6 ಕೋಟಿ ದಂಡ ಪಾವತಿಯಾಗಿತ್ತು. ನೆನ್ನೆ ಶನಿವಾರ ನಿಯಮ ಉಲ್ಲಂಘಿಸಿದವರಿಂದ ಸುಮಾರು 8 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ.

ಬಾಕಿ ಉಳಿದಿದ್ದ ಹಣ ಪಾವತಿಗಾಗಿ ಕಳೆದ ತಿಂಗಳು ಜನವರಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಬಳಿಕವೇ ರಾಜ್ಯ ಸಾರಿಗೆ ಇಲಾಖೆಯು ಗುರುವಾರ ನಿಯಮ ಉಲ್ಲಂಘಿಸುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿತು. ಬೆಂಗಳೂರು ಟ್ರಾಫಿಕ್ ಕಮಿಷನರ್ ಸಲೀಂ ಮಾತನಾಡಿ, ನಗರದಲ್ಲಿ ಒಟ್ಟು 500 ರೂ ಕೋಟಿ ದಂಡದಂತೆ ಎರಡು ಕೋಟಿಗೂ ಹೆಚ್ಚು ಇ-ಚಲನ್ ಪ್ರಕರಣಗಳಿವೆ. ಒಟ್ಟಾರೆ ರಾಜ್ಯಾದ್ಯಂತ ಸುಮಾರು ಶೇ.80ರಷ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇವೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇ-ಚಲನ್ ಪ್ರಕರಣಗಳಿಗೆ ದಂಡವನ್ನು ತೆರವುಗೊಳಿಸಲು ಇಚ್ಛಿಸುವವರು ನಿಮ್ಮ ಹತ್ತಿರದಲ್ಲಿರುವ ಸಂಚಾರ ಪೊಲೀಸ್ ಠಾಣೆಗಳಿಗೆ ಅಥವಾ ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿನ ಸಂಚಾರ ನಿರ್ವಹಣಾ ಕೇಂದ್ರ (TMC)ಕ್ಕೆ ಭೇಟಿ ನೀಡಬಹುದು. ಇನ್ನು ಪರ್ಯಾಯವಾದ ಮಾರ್ಗವೆಂದರೆ ಪೇಟಿಎಂ ಅಥವಾ ಕರ್ನಾಟಕ ಒನ್ ವೆಬ್‌ಸೈಟ್ ಮೂಲಕ ದಂಡದ ಹಣ ಪಾವತಿಸಬಹುದು ಎಂದು ತಿಳಿಸಿದರು.

Traffic violation : 13.8 Crore Fines Collected And 4.7 Lakh Cases Of Disposed

ನೆರೆ ರಾಜ್ಯದ ನಗರವಾದ ಹೈದರಾಬಾದ್ ನಲ್ಲಿ ಸಹ 2022ರಲ್ಲಿ ಟ್ರಾಫಿಕ್ ಪೊಲೀಸರು ಇದೇ ರೀತಿಯ ಕೊಡುಗೆಯನ್ನು ನೀಡಿಡದ್ದರು. ಇದರಿಂದ ಸಂಚಾರ ನಿಯಮ ಉಲ್ಲಂಘಿಸಿದವರಿಂದ ಬರಬೇದ್ದ ಬಾಕಿ ಮೊತ್ತ ಭಾರಿ ಪ್ರಮಾಣದಲ್ಲಿ ಸಂದಾಯವಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+