ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಂದಲೇ ಸಂಚಾರ ನಿಯಮ ಉಲ್ಲಂಘನೆ, ಫೋಟೊ ವೈರಲ್: ಕ್ರಮಕ್ಕೆ ನೆಟ್ಟಿಗರ ಆಗ್ರಹ

|
Google Oneindia Kannada News

ಬೆಂಗಳೂರು, ನವೆಂಬರ್ 23: ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ವಾಹನಗಳು ದುರ್ಬಳಕೆಯಾಗುತ್ತಿದ್ದು, ಈ ಬಗ್ಗೆ ಸೂಕ್ರ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೌದು, ಬೆಂಗಳೂರಿನ ಇಂದಿರಾನಗರದಲ್ಲಿ ನವೆಂಬರ್ 22ರಂದು 'POLICE' ಎಂದು ಬರೆಸಲಾಗಿರುವ ದ್ವಿಚಕ್ರ ವಾಹನ ದಲ್ಲಿ ಹಿಂಬದಿ ಸವಾರರು ಹೆಲ್ಮೆಟ್ ಧರಿಸಿಲ್ಲ. ಪೊಲೀಸರದ್ದು ಎನ್ನಲಾಗುತ್ತಿರುವ ಈ KA03 JM 6144 ಸಂಖ್ಯೆಯ ಖಾಸಗಿ ದ್ವಿಚಕ್ರ ವಾಹನ ಇಂದಿರಾನಗರ ಮೆಟ್ರೋ ನಿಲ್ದಾಣ ಬಳಿ ಓಡಾಡಿದ ಫೋಟೊವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸಾರ್ವಜನಿಕರಿಗೆ ಸಂಚಾರ ನಿಯಮ ಅನುಸರಿಸುವಂತೆ ತಿಳಿಸುವ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ದ್ವಿಚಕ್ರ ವಾಹನ ಹಿಂದೆ ಹಾಗೂ ಹೆಲ್ಮೆಟ್ ಮೇಲೆ ಪೊಲೀಸ್ ಎಂದು ಬರೆದ ಇಂಗ್ಲಿಷ್ ಅಕ್ಷರ ಕಾಣಿಸುತ್ತವೆ. ಈ ದ್ವಿಚಕ್ರ ವಾಹನದಲ್ಲಿ ಸವಾರ ಕಪ್ಪು ಶ್ವೆಟರ್ ಹಾಕಿದ್ದು ಪೊಲೀಸ್ ಎಂದು ಬರೆದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ. ಆದರೆ ಹಿಂಬದಿ ಸವಾರ ಹೆಲ್ಮೆಟ್ ಹಾಕದಿರುವುದು ಸ್ಪಷ್ಟವಾಗಿ ಫೋಟೊದಲ್ಲಿ ಕಾಣಿಸುತ್ತದೆ.

Traffic rules violation by Police in Bengaluru urge for taken action

ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ

ಒಂದು ವೇಳೆ ಪೊಲೀಸ್ ಅಧಿಕಾರಿಯ ಖಾಸಗಿ ಬೈಕ್ ಅನ್ನು ಅವರ ಸಂಬಂಧಿಕರು/ ಸ್ನೇಹಿತರು ತೆಗೆದುಕೊಂಡು ಹೋಗಿದ್ದರೆ ಅಲ್ಲಿಯೂ ಸಹ ಸಂಚಾರ ನಿಯಮ ಉಲ್ಲಂಘನೆ ಆಗಿದೆ. ಪೊಲೀಸ್ ಸಂಕೇತದ ಹೆಲ್ಮೆಟ್‌ ಅನ್ನು ಬೇರೆಯವರು ಧರಿಸಿರುವುದು ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಇಲ್ಲದೇ ಸವಾರಿ ಮಾಡುವುದು ನಿಯಮ ಉಲ್ಲಂಘಿಸಿದಂತಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರನ್ನು ಟ್ಯಾಗ್ ಮಾಡಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಸಂಚಾರ ಪೊಲೀಸ್ ಟ್ವಿಟ್ಟರ್ ಖಾತೆ, ಸಮಯ ಹಾಗೂ ಸ್ಥಳದ ಬಗ್ಗೆ ಮಾಹಿತಿ ನೀಡಿ ಎಂದು ಕಾಮೆಂಟ್ ಮಾಡಿದೆ. ಇದೇ ವೇಳೆ ಮತ್ತೊಬ್ಬರು ಬಿಟಿಪಿ ಮೊಬೈಲ್ ಅಪ್ಲಿಕೇಷನ್‌ನಲ್ಲಿ ವಾಹನ ನೋಂದಣಿ ಸಂಖ್ಯೆ ನಮೂದಿಸಿ ಪರಿಶೀಲಿಸಿದ ಫೋಟೊ (ಸ್ಕೀನ್‌ಶಾಟ್) ಕಾಮೆಂಟ್ ಮಾಡಿದ್ದಾರೆ.

Traffic rules violation by Police in Bengaluru urge for taken action

ಆ ಪೋಟೊದಲ್ಲಿ ಈ KA03 JM 6144 ಸಂಖ್ಯೆಯ ವಾಹನ ಸವಾರರು ನಿಯಮ ಉಲ್ಲಂಘಿಸಿರುವುದು ಪತ್ತೆ ಆಗಿದೆ. ಇದೇ ವರ್ಷ ಏಪ್ರಿಲ್ 24ರಂದು ಸಿಗ್ನಲ್ ಜಂಪ್ ಮಾಡಿದ್ದಕ್ಕೆ 500ರೂ. ದಂಡ. 2019ರ ಡಿಸೆಂಬರ್ ನಲ್ಲಿ ಹೆಲ್ಮೆಟ್ ಹಾಕದ್ದಕ್ಕೆ 500ರೂ. ದಂಡ ವಿಧಿಸಿರುವ ಮಾಹಿತಿ ನೆಟ್ಟಿಗರಿಗೆ ಲಭ್ಯವಾಗಿದೆ. ಸಾರ್ವಜನಿಕರಿಗೆ ದಂಡ ವಿಧಿಸುವ ಪೊಲೀಸರು ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

English summary
Traffic rules violation by Police in Bengaluru. Urge in Social Media for taken action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X