ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಮನೆ ಬಾಗಿಲಿಗೆ ಬಂದು ದಂಡ ವಸೂಲಿ
ನೋಟಿಸ್ ಜಾರಿ ಮಾಡಲಾಗುತ್ತಿದ್ದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಟ್ರಾಫಿಕ್ ಆಯುಕ್ತರಿಂದ ಹೊಸ ವ್ಯವಸ್ಥೆಯ ಮುನ್ಸೂಚನೆ.
ಬೆಂಗಳೂರು, ಮೇ 2: ಇನ್ನು, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಮನೆ ಬಾಗಿಲಿಗೇ ಬರಲಿರುವ ಟ್ರಾಫಿಕ್ ಪೊಲೀಸರು ಅಲ್ಲೇ ದಂಡ ವಸೂಲಿ ಮಾಡಲಿದ್ದಾರೆಂದು ನಗರದ ಹೆಚ್ಚುವರಿ ಟ್ರಾಫಿಕ್ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ.
ಟ್ವಿಟರ್ ಮೂಲಕ ಈ ಬಗ್ಗೆ ಮಾಹಿತಿ ನೀಡಿರುವ ಅವರು, ನಿಯಮ ಉಲ್ಲಂಘನೆ ಮಾಡುವವರಿಂದ ಸರಿಯಾಗಿ ದಂಡ ವಸೂಲಾತಿ ಆಗದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.['ಫಿಲ್ಮ್ ಚೇಂಬರ್' ಆಯ್ತು 'ರಣರಂಗ': ಪತ್ರಕರ್ತರ ಜೊತೆ ಹುಚ್ಚ ವೆಂಕಟ್ ಮಹಾಸಂಘರ್ಷ]

ಇತ್ತೀಚೆಗೆ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂಥವರ ವಿರುದ್ಧ ನೋಟಿಸ್ ಜಾರಿ ಮಾಡಲಾಗುತ್ತಿದ್ದರೂ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ, ನಿಯಮ ಉಲ್ಲಂಘನೆ ಮಾಡುವವರ ಮನೆ ಬಾಗಿಲಿಗೇ ಬಂದು ದಂಡ ವಸೂಲಿ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.[ಕವಿ ಡುಂಡಿರಾಜ್ ಗೆ ಅರವತ್ತರ ಸಂಭ್ರಮ, ಮೇ 7ಕ್ಕೆ ಅಭಿನಂದನೆ]












Click it and Unblock the Notifications