ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸವರ್ಷಕ್ಕೆ ಎಲ್ಲೆಲ್ಲಿ ವಾಹನ ನಿಲುಗಡೆ, ನಿರ್ಬಂಧ?

By Kiran B Hegde
|
Google Oneindia Kannada News

ಬೆಂಗಳೂರು, ಡಿ. 30: ಹೊಸ ವರ್ಷದ ಸಂಭ್ರಮಾಚರಣೆ ನಿಮಿತ್ತ ಬುಧವಾರ ರಾತ್ರಿ ಹಲವೆಡೆ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿರ್ಬಂಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಜೊತೆಗೆ ಹಲವು ಸೂಚನೆಗಳನ್ನು ನೀಡಿದ್ದಾರೆ.

1) ಡಿ. 31ರಂದು ರಾತ್ರಿ 8 ಗಂಟೆಯಿಂದ ಜ. 1ರಂದು ಬೆಳಗಿನ ಜಾವ ಒಂದು ಗಂಟೆಯವರೆಗೆ ಈ ಕೆಳಗಿನ ರಸ್ತೆಗಳಲ್ಲಿ ಪೊಲೀಸ್ ವಾಹನ ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. [ಹೊಸ ವರ್ಷಾಚರಣೆಗೆ ಬೆಂಗಳೂರಿನ ಭದ್ರತೆ ಹೇಗಿದೆ?]

  • ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ವರೆಗೆ)
  • ಬ್ರಿಗೇಡ್ ರಸ್ತೆ (ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ)
  • ಚರ್ಚ್ ಸ್ಟ್ರೀಟ್‌ (ಬ್ರಿಗೇಡ್ ರಸ್ತೆ ಜಂಕ್ಷನ್‍ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ)
  • ಮ್ಯೂಸಿಯಂ ರಸ್ತೆ (ಎಂ.ಜಿ. ರಸ್ತೆ ಜಂಕ್ಷನ್‍ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್‌ಬಿಐ) ವೃತ್ತದವರೆಗೆ)
  • ರೆಸ್ಟ್‌ಹೌಸ್ ರಸ್ತೆ (ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್‌ವರೆಗೆ)
  • ಕಾಮರಾಜ ರಸ್ತೆ (ಕಾವೇರಿ ಎಂಪೋರಿಯಂ ಜಂಕ್ಷನ್‍ನಿಂದ ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ ಹಾಗೂ ಕಬ್ಬನ್‌ ರಸ್ತೆ ಜಂಕ್ಷನ್‍ನಿಂದ ಕಾವೇರಿ ಎಂಪೋರಿಯಂವರೆಗೆ)
  • ರೆಸಿಡೆನ್ಸಿ ಕ್ರಾಸ್ ರಸ್ತೆ (ರೆಸಿಡೆನ್ಸಿ ರಸ್ತೆ ಜಂಕ್ಷನ್‍ನಿಂದ ಎಂ.ಜಿ. ರಸ್ತೆ ಜಂಕ್ಷನ್‌ವರೆಗೆ (ಶಂಕರ್‍ನಾಗ್ ಚಿತ್ರ ಮಂದಿರ)
police

2) ಡಿ. 31ರಂದು ಸಂಜೆ 4 ಗಂಟೆಯಿಂದ ಜ. 1ರಂದು ಬೆಳಗಿನ ಜಾವ 3 ಗಂಟೆಯವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಪೊಲೀಸ್ ವಾಹನ ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

  • ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ)
  • ಬ್ರಿಗೇಡ್ ರಸ್ತೆ (ಆರ್ಟ್ಸ್ ಆ್ಯಂಡ್ ಕ್ರಾಫ್ಟ್ಸ್ ಜಂಕ್ಷನ್‍ನಿಂದ ಅಪೇರಾ ಜಂಕ್ಷನ್‌ವರೆಗೆ)
  • ಚರ್ಚ್ ಸ್ಟ್ರೀಟ್ (ಬ್ರಿಗೇಡ್ ರಸ್ತೆ ಜಂಕ್ಷನ್‍ನಿಂದ ಸೇಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್‌ವರೆಗೆ)
  • ರೆಸ್ಟ್ ಹೌಸ್ ರಸ್ತೆ (ಬ್ರಿಗೇಡ್ ರಸ್ತೆ ಜಂಕ್ಷನ್‍ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‍ವರೆಗೆ)
  • ಮ್ಯೂಸಿಯಂ ರಸ್ತೆ (ಎಂ.ಜಿ. ರಸ್ತೆ ಜಂಕ್ಷನ್‍ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್‌ಬಿಐ) ವೃತ್ತದ ವರೆಗೆ)

3) ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಡಿ. 31ರಂದು ಸಂಜೆ 4 ಗಂಟೆಯೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಅಂತಹ ವಾಹನಗಳಿಗೆ ಟೋ ಮಾಡಿ ದಂಡ ವಿಧಿಸಲಾಗುವುದು. [1 ಗಂಟೆವರೆಗೆ ಮಾತ್ರ ಬಾರ್, ಹೋಟೆಲ್ ತೆರೆದಿಡಲು ಒಪ್ಪಿಗೆ]

4) ಡಿ. 31ರಂದು ರಾತ್ರಿ 8 ಗಂಟೆ ನಂತರ ಎಂ.ಜಿ. ರಸ್ತೆಯಲ್ಲಿ ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಇನ್ನೂ ಮುಂದಕ್ಕೆ ಹೋಗುವ ವಾಹನ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆಯಬೇಕು. ಸೆಂಟ್ರಲ್ ಸ್ಟ್ರೀಟ್ - ಬಿಆರ್‌ವಿ ಜಂಕ್ಷನ್ - ಕಬ್ಬನ್‌ ರಸ್ತೆ ಮೂಲಕ ಸಂಚರಿಸಿ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ. ರಸ್ತೆ ಸೇರಿ ಮುಂದೆ ಸಾಗಬಹುದು.

  • ಹಲಸೂರು ಕಡೆಯಿಂದ ಕಂಟೋನ್ಮೆಂಟ್‌ನತ್ತ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ - ಡಿಕನ್ಸನ್ ರಸ್ತೆ ಮಾರ್ಗವಾಗಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬೇಕು.
  • ಕಾಮರಾಜ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್‍ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
  • ಸಾರ್ವಜನಿಕರು ವಾಹನಗಳನ್ನು ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್‌ನ 1ನೇ ಮಹಡಿಯ ವಾಹನ ನಿಲುಗಡೆ ಸ್ಥಳದಲ್ಲಿ ಸಹ ನಿಲ್ಲಿಸಬಹುದು.

5) ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ. ರಸ್ತೆ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ ಕಡೆಗೆ ಕಾಲ್ನಡಿಗೆಯಲ್ಲಿ ಮಾತ್ರ ಹೋಗಬೇಕು. ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಪುನಃ ಎಂ.ಜಿ. ರಸ್ತೆಗೆ ಬರಬೇಕಾದಲ್ಲಿ ರೆಸಿಡೆನ್ಸಿ ರಸ್ತೆ - ರೆಸಿಡೆನ್ಸಿ ರಸ್ತೆ ಕ್ರಾಸ್ (ಶಂಕರ್‌ ನಾಗ್ ಚಿತ್ರಮಂದಿರ) ಮಾರ್ಗವಾಗಿ ಬರಬಹುದು.

6) ಡಿ. 31ರಂದು ರಾತ್ರಿ 9 ಗಂಟೆಯಿಂದ ಜ. 1ರಂದು ಬೆಳಗಿನ ಜಾವ 6 ಗಂಟೆಯವರೆಗೆ ಫ್ಲೈ ಓವರ್ (ಮೇಲು ಸೇತುವೆ) ಮೇಲೆ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

7) ಮದ್ಯಪಾನ ಮಾಡಿದವರು ವಾಹನ ಚಾಲನೆ ಮಾಡುವಂತಿಲ್ಲ. [ಸೋಲಿಗರೊಂದಿಗೆ ಸಚಿವ ಆಂಜನೇಯ ಹೊಸ ವರ್ಷಾಚರಣೆ]

8) ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುವವರು, ವೀಲಿಂಗ್ ಹಾಗೂ ಡ್ರಾಗ್ ರೇಸ್‌ನಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಬೈಕ್ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಕಂಡುಬಂದಲ್ಲಿ ಸಂಚಾರ ಪೊಲೀಸರಿಗೆ ದೂ. 103 ಅಥವಾ 100 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

9) ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಸುತ್ತಲಿನ ರಸ್ತೆಗಳಲ್ಲಿ ಡಿಎಂಎಫ್‍ಡಿ ಮತ್ತು ಎಚ್ಎಚ್‍ಎಂಡಿ ಉಪಕರಣಗಳನ್ನು ಅಳವಡಿಸಿ ಸಾರ್ವಜನಿಕರನ್ನು ತಪಾಸಣೆಗೆ ಒಳಪಡಿಸಲಾಗುವುದು. ಸುತ್ತಲಿನ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಗೆ ನಿಗದಿಪಡಿಸಿರುವ ಸ್ಥಳಗಳಲ್ಲಿಯೂ ಸಲಕರಣೆಗಳ ಮೂಲಕ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ.

10) ಎಂ.ಜಿ. ರಸ್ತೆಯ ಸುತ್ತಲಿನ 10 ಸ್ಥಳಗಳಲ್ಲಿ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಮತ್ತು ಇಂದಿರಾ ನಗರಗಳ 4 ಸ್ಥಳಗಳಲ್ಲಿ ಎತ್ತರದ ಗೋಪುರಗಳನ್ನು ನಿರ್ಮಿಸಿ ಶಸ್ತ್ರ ಸಜ್ಜಿತ ನೈಟ್ ವ್ಹೀವಿಂಗ್ ಬೈನಾಕ್ಯುಲರ್‌ಗಳನ್ನು ಒಳಗೊಂಡ ಸಿಬ್ಬಂದಿ ನಿಯೋಜಿಸಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗುವುದು. [ನೂತನ ವರ್ಷಾಚರಣೆ ಕೈಬಿಡುವುದೇ ಲೇಸಲ್ಲವೇ?]

11) ಎಂ.ಜಿ. ರಸ್ತೆಯ ಸುತ್ತಲಿನ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ 25 ಮತ್ತು ಖಾಸಗಿ ವ್ಯಕ್ತಿಗಳಿಂದ 50 ಸಿಸಿ ಕ್ಯಾಮರಾಗಳನ್ನು ಹಾಗೂ ಕಮರ್ಷಿಯಲ್ ಸ್ಟ್ರೀಟ್ ಮತ್ತು ಇಂದಿರಾ ನಗರದಲ್ಲಿ 8 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಈ ಮೂಲಕ ಹೊಸ ವರ್ಷಾಚರಣೆಯ ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು.

12) ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ 12 ಅಶ್ವಾರೋಹಿ ದಳಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.

police

ಸಾರ್ವಜನಿಕರಿಗೆ ಸಾಮಾನ್ಯ ಸೂಚನೆಗಳು...

  • ಹೊಸ ವರ್ಷ ಆಚರಿಸಲು ಬರುವ ಸಾರ್ವಜನಿಕರು ತಾವು ತಂದ ವಸ್ತುಗಳನ್ನು ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಎಸೆಯಬಾರದು. ಅವುಗಳನ್ನು ದುಷ್ಕರ್ಮಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ.
  • ಹೊಸ ವರ್ಷ ಆಚರಿಸಲು ಬರುವ ಹೆಣ್ಣು ಮಕ್ಕಳನ್ನು ಚುಡಾಯಿಸಿದರೆ ಹಾಗೂ ಅವರ ಜೊತೆ ಅಸಭ್ಯವಾಗಿ ವರ್ತಿಸಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
  • ಹೊಸ ವರ್ಷ ಆಚರಣೆ ಸಂದರ್ಭ ಕಾನೂನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಜನರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ನಗರ ನಿಯಂತ್ರಣ ಕೊಠಡಿ (100) ಗೆ ಮಾಹಿತಿ ನೀಡಬೇಕು.
  • ಸಂಭ್ರಮಾಚರಣೆ ಸಂದರ್ಭ ನೆರೆಹೊರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
  • ಹೊಸ ವರ್ಷಾಚರಣೆಗೆ ಬರುವವರು ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಕೂಗುವುದು, ರಸ್ತೆ ಬದಿಗಳಲ್ಲಿ ನಿಲ್ಲಿಸಿದ ವಾಹನಗಳಿಗೆ ಹಾನಿಯುಂಟು ಮಾಡಿದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
  • ಹೊಸ ವರ್ಷಾಚರಣೆಯ ಬಂದೋಬಸ್ತ್ ಕರ್ತವ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ 20 ಎಸಿಪಿ, 91 ಪಿಐ, 220 ಪಿಎಸ್‍ಐ, 333 ಎಎಸ್‍ಐ, 992 ಎಚ್‌ಸಿ, 2092 ಪಿಸಿ, 86 ಮಹಿಳಾ ಎಚ್‍ಸಿ ಹಾಗೂ ಪಿಸಿ, ಅಲ್ಲದೇ 1,300 ಹೋಮ್‍ಗಾರ್ಡ್ಸ್ ಮತ್ತು 47 ಕೆಎಸ್‍ಆರ್‌ಪಿ, ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
English summary
Traffic movement has been restricted in many roads from 8 p.m. on December 31st to 1 a.m. on January 1st. Because large number of people will visit the area on the new years eve. Traffic movement on flyovers will also be restricted from 9 p.m. to Wednesday 6 a.m. on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X