• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು; ದಂಡ ಸಂಗ್ರಹಕ್ಕೆ ಮನೆಗೆ ಬರ್ತಾರೆ ಸಂಚಾರಿ ಪೊಲೀಸ್

|

ಬೆಂಗಳೂರು, ಅಕ್ಟೋಬರ್ 25 : ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಮನೆ ಬಾಗಿಲನ್ನು ಪೊಲೀಸರು ತಟ್ಟಲಿದ್ದಾರೆ. ಹೌದು, ದಂಡ ಮೊತ್ತದ ಛಲನ್ ಕಳಿಸಿದರೂ ಕಟ್ಟಲು ವಿಳಂಬ ಮಾಡಿದರೆ ಪೊಲೀಸರು ದಂಡ ಸಂಗ್ರಹಕ್ಕೆ ಮನೆಗೆ ಬರಲಿದ್ದಾರೆ.

ಬೆಂಗಳೂರು ಸಂಚಾರಿ ಪೊಲೀಸರು ಮನೆಗೆ ಬಂದು ದಂಡ ವಸೂಲು ಮಾಡುವ ಕಾರ್ಯವನ್ನು ಆರಂಭಿಸಿದ್ದಾರೆ. ಸುಮಾರು 150 ಕೋಟಿ ದಂಡ ಮೊತ್ತ ಪೊಲೀಸ್ ಇಲಾಖೆಗೆ ಇನ್ನೂ ಬರಬೇಕಿದೆ. ಆದ್ದರಿಂದ, ಪೊಲೀಸರ ಸಹಾಯದಿಂದ ಸಂಚಾರಿ ಪೊಲೀಸರು ಈ ಕಾರ್ಯಚರಣೆ ಆರಂಭಿಸಿದ್ದಾರೆ.

ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ನು 90 ದಿನ ಕಾಯಬೇಕು

ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿ ಮಾಡದವರ ಮನೆಗೆ ಪೊಲೀಸರು ಬರುತ್ತಿದ್ದಾರೆ. ಜನರ ಯಾವ ಕಾರಣವನ್ನು ಆಗ ಅವರು ಕೇಳುವುದಿಲ್ಲ, ದಂಡ ಕಟ್ಟುವುದು ಮಾತ್ರ ಪರಿಹಾರವಾಗಿದೆ.

ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ

ಪೊಲೀಸರು ಮನೆಗೆ ಮಾತ್ರ ಬರುವುದಿಲ್ಲ. ಟ್ರಾಫಿಕ್ ಜಂಕ್ಷನ್, ಪಾರ್ಕಿಂಗ್ ಲಾಟ್ ಮತ್ತು ಇತರ ಪ್ರದೇಶಗಳಲ್ಲಿ ಸಹ ದಂಡವನ್ನು ಪಾವತಿ ಮಾಡಿ ಎಂದು ವಾಹನ ಸವಾರರನ್ನು ಕೇಳಲಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ಮೊದಲು ಒಮ್ಮೆ ಆಲೋಚಿಸಿ.

ಕೊವಿಡ್ ನಿಯಮ ಪಾಲನೆ: ಬೆಂಗಳೂರಲ್ಲಿ ಮಾರ್ಷಲ್‌ಗಳಿಗೆ ಪೊಲೀಸ್ ಅಧಿಕಾರ

ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಅವರ ಸೂಚನೆಯಂತೆ ಪೊಲೀಸರು ಈ ಕಾರ್ಯಾಚರಣೆ ಬುಧವಾರ ಆರಂಭಿಸಿದ್ದಾರೆ. ಒಂದೇ ದಿನದಲ್ಲಿ 11,488 ಬಾಕಿ ಪ್ರಕರಣಗಳನ್ನು ಪರಿಹಾರ ಮಾಡಿದ್ದು, 49,94,600 ದಂಡವನ್ನು ಸಂಗ್ರಹ ಮಾಡಿದ್ದಾರೆ.

ಗುರುವಾರವೂ 7,978 ಪ್ರಕರಣಗಳನ್ನು ಪರಿಹಾರ ಮಾಡಿದ್ದು, 34,82,400 ರೂ. ದಂಡವನ್ನು ವಸೂಲಿ ಮಾಡಿದ್ದಾರೆ. ಒಬ್ಬರ ಹೆಸರಿನಲ್ಲಿ 5ಕ್ಕಿಂತ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಇದ್ದರೆ ಅವರ ಮನೆಗೆ ಪೊಲೀಸರು ಭೇಟಿ ಕೊಡುತ್ತಿದ್ದಾರೆ.

ಹೆಚ್ಚು ನಿಯಮ ಉಲ್ಲಂಘನೆ ಮಾಡಿದವರ ಪಟ್ಟಿಯನ್ನು ಸಿದ್ಧಪಡಿಸಿ ಸ್ಥಳೀಯ ಪೊಲೀಸ್ ಠಾಣೆಗೆ ನೀಡಲಾಗಿದೆ. ಸಹಾಯಕ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿ ಸೇರಿ ಮೂವರು ಪೊಲೀಸರು ಮನೆಗೆ ಬಂದು ದಂಡ ಸಂಗ್ರಹ ಮಾಡಲಿದ್ದಾರೆ.

ಸಂಚಾರಿ ಪೊಲೀಸರ ಮಾಹಿತಿಯಂತೆ ಈ ವರ್ಷದ ಸೆಪ್ಟೆಂಬರ್ ತನಕ 12,28,351 ಪ್ರಕರಣಗಳು ಬಾಕಿ ಉಳಿದ್ದಿದ್ದು, ಇಲಾಖೆಗೆ 47,81,55,100 ದಂಡ ಮೊತ್ತ ಬರಬೇಕಿದೆ. ಇವುಗಳಲ್ಲಿ ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸಿದ ಪ್ರಕರಣಗಳೇ ಅಧಿಕವಾಗಿವೆ.

English summary
Bengaluru traffic visiting the home of the people who have more than five violations cases and collect the fine at the spot. 11,488 cases cleared on the October 23, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X