ಮಕ್ಕಳಿಗೆ ರಜಾ ಮಜಾ, ಬಾಲಭವನದಲ್ಲಿ ಮತ್ತೆ ಚುಕುಬುಕು ರೈಲು ಆರಂಭ
ಬೆಂಗಳೂರು, ಏ.2: ಬೇಸಿಗೆ ರಜೆ ಅಂದಮೇಲೆ ಕಬ್ಬನ್ ಪಾರ್ಕಿಗೆ ಬರ್ದೇ ಇದ್ರೆ ರಜೆ ಹೇಗೆ ಪೂರ್ಣಗೊಳ್ಳುತ್ತೆ, ಮಕ್ಕಳಿಗೆ ರಜೆ ಆರಂಭವಾಗುವುದೇ ಬಾಲಭವನ, ಕಬ್ಬನ್ ಪಾರ್ಕಿನಲ್ಲಿ ಆಟ ಆಡುವುದರಿಂದ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೆಲವು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಚುಕುಬುಕು ರೈಲು ಮತ್ತೆ ಆರಂಭವಾಗಲಿದೆ. ರೈಲ್ವೆ ಇಲಾಖೆಯ ಎಂಜಿನಿಯರ್ ವಿಭಾಗದವರು ಎಂಜಿನ್ ಬದಲಿಸಿ, ಓಡಾಟದ ಟ್ರಯಲ್ ಈಗಾಗಲೇ ನಡೆಸಿದ್ದಾರೆ.
ಪುಟಾಣಿ ರೈಲಿನ ಜೊತೆಗೆ ಮೇರಿ ಕೊಲಂಬಸ್, ಸಣ್ಣ ರೈಲು ಮತ್ತು ಬ್ರೇಕ್ ಡ್ಯಾನ್ಸ್ ಮೋಜಿನ ಮನೋರಂಜನಾ ವ್ಯವಸ್ಥೆಯೂ ಕೂಡ ಇದೆ. ಜಾರು ಬಂಡೆ, ಉಯ್ಯಾಲೆಯಲ್ಲಿ ಮಕ್ಕಳು ಆಟವಾಡಬಹುದಾಗಿದೆ. ಆಟಿಕೆಗಳೂ ಕೂಡ ಲಭ್ಯವಿದೆ.

ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಸಂಚಾರದ ಅರಿವು ಮೂಡಿಸುವ ನಿಟ್ಟಿನಲ್ಲಿ ಟ್ರಾಫಿಕ್ ಪಾರ್ಕ್ ಸ್ಥಾಪನೆ ಮಾಡಿದೆ. ಸಿಬ್ಬಂದಿ ಕೊರತೆ ಇರುವ ಕಾರಣ ಪಾರ್ಕ್ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ಟ್ರಾಫಿಕ್ ಪಾರ್ಕ್ ಕೂಡ ಆರಂಭವಾಗಲಿದೆ.
ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?
ಆವರಣದಲ್ಲಿರುವ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕೆರೆಯಲ್ಲಿ ಹೂಳು ತುಂಬಿದ್ದರಿಂದ ಬೋಟಿಂಗ್ ನಡೆಸುತ್ತಿಲ್ಲ ಅದೂ ಕೂಡ ಶೀಘ್ರ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications