Get Updates
Get notified of breaking news, exclusive insights, and must-see stories!

Benne Dosa: ಬೆಸ್ಟ್‌ 'ಬೆಣ್ಣೆ ದೋಸೆ' ಸಿಗುವ ಬೆಂಗಳೂರಿನ ಫೇಮಸ್‌ ಹೋಟೆಲ್‌ಗಳಿವು

ದಾವಣಗೆರೆ ಬೆಣ್ಣೆ ದೋಸೆ ಅಥವಾ ಬೆಣ್ಣೆ ದೋಸೆಯ ಮೂಲ ದಾವಣಗೆರೆ ಜಿಲ್ಲೆ. ಬಿಸಿ ಬಿಸಿಯಾದ, ಗರಿಗರಿಯಾದ ದೋಸೆಯ ಮೇಲೆ ಬೆಣ್ಣೆ ಹಾಕಿ, ಜೊತೆಗೆ ಒಂದು ಚಟ್ನಿ ನೀಡಿದರೆ, ಆಹಾ..! ಆಹಾರ ಪ್ರಿಯರಿಗೆ ಅವರಿರುವ ಸ್ಥಳವೇ ಸ್ವರ್ಗವಾಗಿರುತ್ತದೆ. ಇಂತಹ ಬೆಣ್ಣೆ ದೋಸೆಯ ರುಚಿಗೆ ಮನಸೋಲದವರಿಲ್ಲ.

ರುಚಿಯಾದ ಬೆಣ್ಣೆ ದೋಸೆ ಸವಿಯಲು ದಾವಣಗೆರೆ ಹೋಗಬೇಕು ಎನ್ನುವ ಆಲೋಚನೆ ಇದ್ದರೆ, ಇಂದೇ ಅದನ್ನು ಬಿಟ್ಟುಬಿಡಿ. ಯಾಕೆಂದರೆ ನಮ್ಮ ಬೆಂಗಳೂರಿನಲ್ಲೇ ರುಚಿರುಚಿಯಾದ ಬೆಣ್ಣೆ ದೋಸೆ ತಯಾರಿಸುವ ಹೋಟೆಲ್‌ಗಳು ಹತ್ತಾರಿವೆ. ಅವುಗಳಲ್ಲಿ ಬೆಸ್ಟ್‌ ಬೆಣ್ಣೆ ದೋಸೆ ನೀಡುವ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

Top 5 Spots To Have Benne Dosa In Bengaluru

ದಾವಣಗೆರೆ ಬೆಣ್ಣೆ ದೋಸೆ, ಜಯನಗರ

ಬೆಂಗಳೂರಿನ ಅನೇಕ ಭಾಗಗಳಲ್ಲಿ ನೀವು ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ಗಳನ್ನು ನೋಡಬಹುದು. ಇಲ್ಲಿ ದಾವಣಗೆರೆಯ ಶೈಲಿಯ ಬೆಣ್ಣೆ ದೋಸೆಗಳನ್ನು ನೀಡಲಾಗುತ್ತದೆ. ಮಧ್ಯ ಕರ್ನಾಟಕದ ದಾವಣಗೆರೆಯ ಪ್ರಸಿದ್ಧ ಬೆಣ್ಣೆ ದೋಸೆ ಈಗ ಬೆಂಗಳೂರಿನಲ್ಲಿಯೂ ಹೆಚ್ಚು ಜನಪ್ರಿಯವಾಗಿದೆ. ಜಯನಗರ 4th ಬ್ಲಾಕ್‌ನಲ್ಲಿರುವ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ ಆಹಾರ ಪ್ರಿಯರ ಆಯ್ಕೆ ಆಗಿದ್ದು, ಬೆಣ್ಣೆ ದೋಸೆ ಸವಿಯಲು ಈ ಹೋಟೆಲ್‌ಗೆ ಭೇಟಿ ನೀಡುವುದು ಉತ್ತಮ ಆಯ್ಕೆಯಾಗಿದೆ.

ಇಲ್ಲಿ ಬಹುತೇಕ ಸಮಯ ಸರತಿ ಸಾಲಿನಲ್ಲಿ ನಿಂತು ಬೆಣ್ಣೆ ದೋಸೆ ಪಡೆಯಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಇದು ಖಾಯಂ ಗ್ರಾಹಕರನ್ನು ಹೊಂದಿದೆ. ತಟ್ಟೆಯಲ್ಲಿ ಬಿಸಿ ಬಿಸಿ ದೋಸೆಯ ಮೇಲೆ ಬೆಣ್ಣೆಯ ಮುದ್ದೆ ಜೊತೆಗೆ ತೆಂಗಿನಕಾಯಿ ಚಟ್ನಿ ಹಾಗೂ ಆಲೂಗಡ್ಡೆ ಪಲ್ಯದೊಂದಿಗೆ ಗ್ರಾಹಕರಿಗೆ ನೀಡಲಾಗುತ್ತದೆ. ಜಯನಗರ 4th ಬ್ಲಾಕ್‌ನಲ್ಲಿರುವ ಈ ಹೋಟೆಲ್‌ ಬೆಳಗ್ಗೆ 7:30 ರಿಂದ ಮಧ್ಯಾಹ್ನ 12 ಮತ್ತು ಸಂಜೆ 4:30 ರಿಂದ ರಾತ್ರಿ 9:30 ರವರೆಗೆ ತೆರೆದಿರುತ್ತದೆ.

Top 5 Spots To Have Benne Dosa In Bengaluru

CTR ಮಲ್ಲೇಶ್ವರಂ

ಮಲ್ಲೇಶ್ವರಂ ಸೆಂಟ್ರಲ್‌ ಟಿಫನ್‌ ರೂಮ್‌ ಉಪಹಾರಕ್ಕೆ ಆಹಾರ ಪ್ರಿಯರ ಪ್ರಥಮ ಆಯ್ಕೆ. ಯಾಕೆಂದರೆ ಇಲ್ಲಿ ಸಿಗುವ ಇಡ್ಲಿ, ಖಾರಬಾತ್‌, ದೋಸೆಗಳ ರುಚಿಗೆ ಮನಸೋಲದವರಿಲ್ಲ. ಮೆನುವಿನಲ್ಲೇ ಕೆಲವೇ ಕೆಲವು ಖಾದ್ಯಗಳನ್ನು ಹೊಂದಿರುವ ಈ ಹೋಟೆಲ್‌ ರುಚಿಯಲ್ಲಿ ಮಾತ್ರ ಪರ್ಫೆಕ್ಟ್. ಈ ಹೋಟೆಲ್‌ ಬೆಣ್ಣೆ ದೋಸೆಗೂ ಕೂಡ ಫೇಮಸ್‌. ಜನ ಸರತಿ ಸಾಲಿನಲ್ಲಿ ನಿಂತು ಕಾದು ಇಲ್ಲಿನ ಬೆಣ್ಣೆ ದೋಸೆಯನ್ನು ಸವಿಯುತ್ತಾರೆ.

1920ರ ದಶಕದಲ್ಲಿ ವೈವಿ ಸುಬ್ರಮಣ್ಯಂ ಈ ಹೋಟೆಲ್‌ನ್ನು ಆರಂಭಿಸಿದ್ದು, ಇಂದಿಗೂ ಅದೇ ಜನಪ್ರಿಯತೆಯನ್ನು ಈ ಹೋಟೆಲ್‌ ಉಳಿಸಿಕೊಂಡಿದೆ. ಮಲ್ಲೇಶ್ವರಂನಲ್ಲಿರು ಈ ಹೋಟೆಲ್‌ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 9:30 ರವರೆಗೆ ತೆರೆದಿರುತ್ತದೆ.

Top 5 Spots To Have Benne Dosa In Bengaluru

ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್

ಬೆಂಗಳೂರಿನ ಸುತ್ತಮುತ್ತ ದಾವಣಗೆರೆಯ ಬೆಣ್ಣೆ ದೋಸೆಯನ್ನು ಜನಪ್ರಿಯಗೊಳಿಸಿದ ಕೀರ್ತಿ ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್‌ಗೆ ಸಲ್ಲುತ್ತದೆ. ರುಚಿರುಚಿಯಾದ ಬೆಣ್ಣೆ ದೋಸೆಯನ್ನು ನೀಡುವ ಮೂಲಕ ಈ ಹೋಟೆಲ್‌ ಮೆನುವಿನಲ್ಲಿ ಕನಿಷ್ಠ ಖಾದ್ಯಗಳನ್ನು ಹೊಂದಿದೆ. ಖಾಲಿ ದೋಸೆ , ಸಿಂಗಲ್‌ ಬೆಣ್ಣೆ ದೋಸೆ ಮತ್ತು ಡಬ್ಬಲ್‌ ಬೆಣ್ಣೆ ದೋಸೆ ಇಲ್ಲಿ ದೊರೆಯುತ್ತದೆ. ಈ ಹೋಟೆಲ್‌ಗೆ ಬಂದು ಆಸನ ಹಿಡಿದು ದೋಸೆ ಪಡೆಯಲು ಸಮಯ ತಗಲಬಹುದು ಆದರೆ ಇಲ್ಲಿನ ಬೆಣ್ಣೆ ದೋಸೆಯ ರುಚಿಯಲ್ಲಿ ಮಾತ್ರ ರಾಜಿ ಇಲ್ಲ.

ಬೆಣ್ಣೆ ದೋಸೆ ಅಭಿಮಾನಿಗಳಿಗೆ ಇದು ಸ್ವರ್ಗವಾಗಿದ್ದು, ತಟ್ಟೆಗೆ ಬಂದ ದೋಸೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ತರಕಾರಿ ಪಲ್ಯದ ಜೊತೆ ಮಸಾಲೆಯುಕ್ತ ತೆಂಗಿನಕಾಯಿ ಚಟ್ನಿಯೊಂದಿಗೆ ಇಲ್ಲಿ ಬೆಣ್ಣೆ ದೋಸೆಯನ್ನು ನೀಡಲಾಗುತ್ತದೆ. ಬೆಂಗಳೂರಿನ ಸುಬ್ಬರಾಮ ಚೆಟ್ಟಿ ರಸ್ತೆ, ಎನ್‌ಆರ್ ಕಾಲೋನಿ ಹಾಗೂ ಬಸವನಗುಡಿಯಲ್ಲಿ ಈ ಹೋಟೆಲ್‌ಗಳು ಇದ್ದು, ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 1:30 ಮತ್ತು ಸಂಜೆ 4:30 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ.

ಶ್ರೀ ರಾಘವೇಂದ್ರ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್

ಬೆಂಗಳೂರಿನ ಜೆಪಿ ನಗರದದಲ್ಲಿರುವ ಶ್ರೀ ರಾಘವೇಂದ್ರ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಸಿಗುವ ಬೆಣ್ಣೆ ದೋಸೆಗೆ ಮನಸೋಲದವರಿಲ್ಲ. ಗರಿಗರಿಯಾದ ಬಿಸಿಬಿಸಿಯಾದ ದೋಸೆ ಮೇಲೆ ನಿಮಗೆ ಸಾಕಾಗುಷ್ಟು ಬೆಣ್ಣೆಯನ್ನು ಹಾಕಿ ನೀಡುತ್ತಾರೆ. ಜೊತೆ ಖಾರದ ಕೆಂಪು ಚಟ್ನಿ. ತಟ್ಟೆಗೆ ಬಂದ ದೋಸೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಸದಾ ಜನರಿಂದ ತುಂಬಿರು ಈ ಹೋಟೆಲ್‌ ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ ತೆರೆದಿರುತ್ತದೆ.

Top 5 Spots To Have Benne Dosa In Bengaluru

ವಿದ್ಯಾರ್ಥಿ ಭವನ, ಗಾಂಧಿ ಬಜಾರ್‌

ಬೆಂಗಳೂರಿನ ದೋಸೆ ಸ್ಥಳಗಳ ಮಾಹಿತಿಯಲ್ಲಿ ವಿದ್ಯಾರ್ಥಿ ಭವನವನ್ನು ಮಿಸ್‌ ಮಾಡಲು ಹೇಗೆ ಸಾಧ್ಯ..? ಗಾಂಧಿ ಬಜಾರ್‌ನ ಹೂವಿನ ಮಾರುಕಟ್ಟೆಯ ಬಳಿ ಇರುವ ಈ ಹೋಟೆಲ್‌ ದೋಸೆಗಳಿಗೆ ಹೆಚ್ಚು ಜನಪ್ರಿಯ. ಇಲ್ಲಿನ ಮಸಾಲೆ ದೋಸೆ, ಬೆಣ್ಣೆ ದೋಸೆ ಸವಿಯಲು ಜನರು ಗಂಟೆಗಟ್ಟಲೆ ಕಾಯುತ್ತಾರೆ. ಸುಮಾರು ನಾಲ್ಕು ದಶಗಳಿಂದ ಬೆಂಗಳೂರಿನಲ್ಲಿ ದೋಸೆ ಸಿಗುವ ಸ್ಥಳಗಳ ಪಟ್ಟಿಯಲ್ಲಿ ವಿದ್ಯಾರ್ಥಿ ಭವನ ತನ್ನ ಸ್ಥಾನವನನ್ಉ ಭದ್ರವಾಗಿಸಿಕೊಂಡಿದೆ. 1943 ರಲ್ಲಿ ಸಣ್ಣ ಕ್ಯಾಂಟೀನ್ ಆಗಿ ಪ್ರಾರಂಭವಾದ ಈ ಹೋಟೆಲ್‌, ಇಂದು ಬೆಂಗಳೂರಿನ ಅತ್ಯಂತ ಶುದ್ಧ ಸಸ್ಯಾಹಾರಿ ಉಪಹಾರ ತಾಣಗಳಲ್ಲಿ ಒಂದಾಗಿದೆ. ಗಾಂಧಿಬಜಾರ್‌ನ ಮುಖ್ಯ ರಸ್ತೆಯಲ್ಲಿರುವ ಈ ಹೋಟೆಲ್‌ ಬೆಳಗ್ಗೆ 6:30 ರಿಂದ 11:30 ರವರೆಗೆ ಹಾಗೂ ಮಧ್ಯಾಹ್ನ 2-8ವರೆಗೆ ತೆರೆದಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+