ಭಾನುವಾರ ಬೆಳ್ಳಂಬೆಳಗ್ಗೆ ಒಳ್ಳೆ ಕಾಲು ಸೂಪ್ ಕುಡಿಬೇಕಾ..? ಇಲ್ಲಿದೆ ಬೆಂಗಳೂರಿನ ಬೆಸ್ಟ್ ಹೋಟೆಲ್‌ಗಳು
ಭಾನುವಾರ ಬಂತೆಂದರೆ ಸಾಕು ಎಲ್ಲಾ ಪೂಜೆ ಪುನಸ್ಕಾರ, ಡಯೆಟ್‌ಗಳಿಗೆ ಗುಡ್ ಬೈ ಹೇಳಿ ಮನಪೂರಕವಾಗಿ ನಾನ್ ವೆಜ್ ತಿಂದು ಬಿಡಿ. ವಾರ ಇಡೀ ಡಯೆಟ್, ಕೆಲಸದ ಒತ್ತಡದಿಂದ ನಿಮ್ಮ ಆಹಾರಕ್ಕಾಗಿ ಟೈಮ್ ಕೊಡಲು ಸಾಧ್ಯವಾಗದೇ ಇದ್ದಾಗ, ಭಾನುವಾರ ನಿಮ್ಮ ನೆಚ್ಚಿನ ಊಟ ಸವಿಯಲೆಂದೇ ಮೀಸಲಿಡಿ. ಇದರಿಂದ ಜೀವನದ ಒತ್ತಡ ಕೂಡ ಕಮ್ಮಿಯಾಗುತ್ತದೆ.
ಭಾನುವಾರದ ಬಾಡೂಟವನ್ನು ಬೆಳ್ಳಂಬೆಳಗ್ಗೆ ಒಂದೊಳ್ಳೆ ಕಾಲು ಸೂಪ್ ಕುಡಿಯುವ ಮೂಲಕ ಆರಂಭಿಸಿ. ಕಾಲು ಸೂಪ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಕೀಲುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಕ್ಯಾಲ್ಸಿಯಂ, ಪ್ರೋಟಿನ್, ಮಿನರಲ್ಸ್, ಅಮೀನೋ ಆಸಿಡ್ಸ್ ಅಂಶಗಳುಳ್ಳ, ಉರಿಯೂತ, ಅಲರ್ಜಿ ನಿವಾರಕ ಈ ಕಾಲು ಸೂಪ್. ಹೀಗಾಗಿ ಬೆಂಗಳೂರಿನಲ್ಲಿ ಕಾಲು ಸೂಪ್ ಸಿಗುವ ಬೆಸ್ಟ್ ಹೋಟೆಗಳ ಪಟ್ಟಿ ಇಲ್ಲಿದೆ.

1. ಏಂಜಲ್ ಮಟನ್ ಲೆಗ್ ಸೂಪ್
ಬೆಂಗಳೂರಿನ ತಿಪ್ಪಸಂದ್ರದಲ್ಲಿರುವ ಏಂಜಲ್ ಮಟನ್ ಲೆಗ್ ಸೂಪ್ ಬೆಂಗಳೂರಿನ ಜನಪ್ರಿಯ ಮಟನ್ ಲೆಗ್ ಸೂಪ್‌ಗಳಲ್ಲಿ ಒಂದು. ಬೆಂಗಳೂರಿನ ಬೇರೆ ಬೇರೆ ಕಡೆಗಳಿಂದ ಭಾನುವಾರ ಮುಂಜಾನೆಯೇ ಇಲ್ಲಿಗೆ ಭೇಟಿ ನೀಡಿ ಕಾಲು ಸೂಪ್ ಸವಿಯುತ್ತಾರೆ. ಇಲ್ಲಿ ಪ್ಲೇನ್ ಸೂಪ್, ಲೆಗ್ ಸೂಪ್ ಸೇರಿದಂತೆ ವಿವಿಧ ಬಗೆಯ ಸೂಪ್ ಲಭ್ಯವಿರುತ್ತದೆ. ಇಲ್ಲಿ ಬರಿ ಕಾಲು ಸೂಪ್ ಮಾತ್ರವಲ್ಲದೇ ಮಟನ್ ವಿಶೇಷ ಖಾಧ್ಯಗಳಾದ, ಬೋಟಿ ಗೊಜ್ಜು, ತಲೆ ಮಾಂಸ ಗೊಜ್ಜು ಹಾಗೂ ಇತರ ರುಚಿಕರವಾದ ಖಾದ್ಯಗಳು ಸಿಗುತ್ತದೆ.
ವಿಳಾಸ: ಬಿಡಿಎ ಕಾಂಪ್ಲೆಕ್ಸ್, 3 ಜೀವನ್ ಭೀಮನಗರ, 10 ನೇ ಮುಖ್ಯ ರಸ್ತೆ, ಎಸ್‌ಬಿಐ ಹತ್ತಿರ, ಪುಟ್ಟಪ್ಪ ಲೇಔಟ್, ಹೊಸ ತಿಪ್ಪಸಂದ್ರ

2. ಹೋಟೆಲ್ ಆದಿತ್ಯ ಕುರುಬರ ಹಳ್ಳಿ
ಬೆಂಗಳೂರಿನಲ್ಲಿ ಪಕ್ಕಾ ನಾಟಿ ಸ್ಟೈಲ್ ಊಟಕ್ಕೆ ಫೇಮಸ್ ಎಂದರೆ ಕುರುಬರ ಹಳ್ಳಿಯಲ್ಲಿರುವ ಆದಿತ್ಯ ನಾಟಿ ಸ್ಟೈಲ್ ಹೋಟೆಲ್. ಇಲ್ಲಿನ ರುಚಿ ಮನೆ ಅಡುಗೆಯ ರುಚಿ ನೀಡುತ್ತದೆ ಎನ್ನುವುದು ಗ್ರಾಹಕರ ಮಾತಾಗಿದೆ. ಇಲ್ಲಿನ ಕಾಲು ಸೂಪ್ ಕೂಡ ಸಖತ್ ಫೇಮಸ್ ಆಗಿದ್ದು, ಕುರುಬರ ಹಳ್ಳಿ ಮಾತ್ರವಲ್ಲದೇ ಇತರ ಭಾಗಗಳಿಂದು ಹುಡುಕಿಕೊಂಡು ಬಂದು ಇಲ್ಲಿನ ಕಾಲು ಸೂಪ್ ಸವಿಯುತ್ತಾರೆ. ಇಲ್ಲಿ ಮಟನ್ ಹಾಗೂ ಚಿಕನ್‌ನ ಪಕ್ಕಾ ನಾಟಿ ಸ್ಟೈಲ್ ಊಟ ಲಭ್ಯವಿದ್ದು, ಇಲ್ಲಿನ ಮಸಾಲೆಯ ಘಮ ಊಟ ಮುಗಿಸಿ ತೆರಳಿದ ಮೇಲೂ ನಿಮ್ಮನ್ನು ಕಾಡುತ್ತಿರುತ್ತದೆ. ಬೆಳಗ್ಗೆಯಿಂದ ಮಧ್ಯಾಹ್ನ ಊಟಸ ಸಮಯದ ವರೆಗೆ ತೆರೆದಿರುವ ಈ ಹೋಟೆಲ್ ಸಂಜೆ 4 ಗಂಟೆಯ ಮೇಲೆ ಮತ್ತೆ ತೆರೆಯುತ್ತದೆ.
ವಿಳಾಸ: 159 6ನೇ ಮೈನ್ ಎದುರು ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ (ಹಳೆಯ ನಂದಿನಿ ಥಿಯೇಟರ್) ಮಹಾಲಕ್ಷ್ಮಿಪುರಂ, 1433, ಪೈಪ್‌ಲೈನ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ 2ನೇ ಹಂತ.

3. ರಂಗಣ್ಣ ಮಿಲಿಟರಿ ಹೋಟೆಲ್
ಆರ್‌ಎಂಎಚ್ ಎಂದೇ ಜನಪ್ರಿಯತೆ ಪಡೆದಿರುವ ರಂಗಣ್ಣ ಮಿಲಿಟರಿ ಹೋಟೆಲ್ ಜಯನಗರ ಹಾಗೂ ಸುತ್ತಲಿನ ಏರಿಯಾದ ನಾನ್ ವೆಜ್ ಪ್ರಿಯರ ಮೆಚ್ಚಿನ ಸ್ಥಳ. ಇಲ್ಲಿನ ನಾನ್ ವೆಜ್ ಖಾದ್ಯ ಮುಖ್ಯವಾಗಿ ಮಟನ್‌ನಿಂದ ಮಾಡುವ ಖಾದ್ಯಕ್ಕೆ ಮನಸೋಲದವರಿಲ್ಲ. ಮಟನ್ ಬಿರಿಯಾನಿ, ಚಾಪ್ಸ್, ಬೋಟೊ ಗೊಜ್ಜು, ಕುಷ್ಕಾ ಹೀಗೆ ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ, ಇಲ್ಲಿನ ರುಚಿ ಮತ್ತೆ ಮತ್ತೆ ನಿಮ್ಮನ್ನು ಇಲ್ಲಿಗೆ ಭೇಟಿ ನೀಡುವಂತೆ ಮಾಡುತ್ತದೆ. ಮುಖ್ಯವಾಗಿ ಇಲ್ಲಿನ ಕಾಲು ಸೂಪ್‌ಗೆ ಸಪರೇಟ್ ಅಭಿಮಾನಿಗಳಿದ್ದರೆ, ಹೀಗಾಗಿ ಇಲ್ಲಿನ ಕಾಲು ಸೂಪ್ ಸವಿಯಬೇಕೆಂದರೆ ನೀವು ಕಾಯಲೇಬೇಕು.
ವಿಳಾಸ: 61, ಕೃಷ್ಣ ರಾಜೇಂದ್ರ ರಸ್ತೆ, ಇಂಡಿಯನ್ ಆಯಿಲ್ ಪೆಟ್ರೋಲಿಯಂ ಎದುರು, 7ನೇ ಬ್ಲಾಕ್, ಜಯನಗರ

4. ಶಿವಾಜಿ ಮಿಲಿಟರಿ ಹೋಟೆಲ್
ಬೆಂಗಳೂರಿನ ಜನಪ್ರಿಯ ನಾನ್‌ವೆಜ್ ಹೋಟೆಲ್‌ಗಳಲ್ಲಿ ಶಿವಾಜಿ ಮಿಲಿಟರಿ ಹೋಟೆಲ್ ಮುಖ್ಯವಾದದು. 1930ರಲ್ಲಿ ಆರಂಭವಾದ ಈ ಹೋಟೆಲ್ ಇಂದಿಗೂ ತನ್ನ ರುಚಿಯನ್ನು ಉಳಿಸಿಕೊಂಡು ಬಂದಿದೆ. ಇಲ್ಲಿ ಮರಾಠ ಪಾಕ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಹೀಗಾಗಿ ಇಲ್ಲಿ ಕಾಲು ಸೂಪು ರುಚಿ ನೆಕ್ಸ್ಟ್ ಲೆವೆಲ್ ಎನ್ನುವುದು ಜನರ ಅಭಿಪ್ರಾಯ. ಸದಾ ಜನರಿಂದ ತುಂಬಿ ತುಳುಕುವ ಈ ಹೋಟೆಲ್‌ನಲ್ಲಿ ನೀವು ಕನಿಷ್ಠ 30 ನಿಮಿಷ ಕಾದು ಕಾಲು ಸೂಪ್ ಸವಿಯಬೇಕಾಗುತ್ತದೆ. ಆದರೆ ಇಲ್ಲಿನ ರುಚಿ ನಿಮ್ಮ ಸಮಯ ಹಾಗೂ ಹಣಕ್ಕೆ ನ್ಯಾಯ ಒದಗಿಸಿಕೊಡುತ್ತದೆ. ಇಲ್ಲಿ ಕಾಲು ಸೂಪು ಜೊತೆಗೆ ಮಟನ್ ಬಿರಿಯಾನಿ, ಮಟನ್ ಡ್ರೈ, ಚಿಕನ್ ಚಾಪ್ಸ್, ಚಿಕನ್ ಬಿರಿಯಾನಿ ಹಾಗೂ ದೊನ್ನೆ ಬಿರಿಯಾನಿಯನ್ನು ಮಿಸ್ ಮಾಡದೇ ಟ್ರೈ ಮಾಡಿ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ನೀವು ಈ ಹೋಟೆಲ್ ಕಾಣಬಹುದು.
5. ಭುವನೇಶ್ವರಿ ಹೋಟೆಲ್
ವಿಶ್ವೇಶ್ವರಯ್ಯ ನಗರದಲ್ಲಿರುವ ಭುವನೇಶ್ವರಿ ಹೋಟೆಲ್ ಒಂದೊಳ್ಳೆ ಬಜೆಟ್ ಫ್ರೆಂಡ್ಲಿ ನಾನ್ ವೆಜ್ ಸಿಗುವ ಸ್ಥಳ. ಹೋಟೆಲ್ ನೋಡಲು ಚಿಕ್ಕದಾಗಿದ್ದರು, ಇಲ್ಲಿನ ರುಚಿ ಮಾತ್ರ ಅದ್ಭುತ ಎನ್ನುವುದು ಗ್ರಾಹಕರ ಮಾತು. ಇಲ್ಲಿ ಮಿಸ್ ಮಾಡದೇ ಒಮ್ಮೆ ಕಾಲು ಸೂಪ್ ಟ್ರೈ ಮಾಡಿ. ಪಕ್ಕಾ ನಾಟಿ ಸ್ಟೈಲ್‌ನ ಇಲ್ಲಿನ ಕಾಲು ಸೂಪ್‌ಗೆ ಮನಸೋಲದವರಿಲ್ಲ. ಕಾಲು ಸೂಪ್ ಜೊತೆಗೆ ಇಲ್ಲಿನ ಖುಷ್ಕಾ ರುಚಿಗೂ ಕೂಡ ಆಹಾರ ಪ್ರಿಯರು ಜೈ ಎಂದಿದ್ದಾರೆ. ಚಿಕನ್ ಖಾದ್ಯಗಳು ಕೂಡ ಇಲ್ಲಿ ಲಭ್ಯವಿದ್ದು, ನಾನ್ ವೆಜ್ ಪ್ರಿಯರು ಮಿಸ್ ಮಾಡದೇ ಇಲ್ಲಿದೆ ಭೇಟಿ ನೀಡಿ.
ವಿಳಾಸ: ನಂ 98, ಸಿಬಿಐ ರಸ್ತೆ, 10 ನೇ ಕ್ರಾಸ್, ಲಕ್ಷ್ಮಯ್ಯ ಬ್ಲಾಕ್, ಸಿಬಿಐ ಹತ್ತಿರ, ಲಕ್ಷ್ಮಯ್ಯ ಲೇಔಟ್, ವಿಶ್ವೇಶ್ವರಯ್ಯ ನಗರ, ಗಂಗಾನಗರ,












Click it and Unblock the Notifications