ಬೆಂಗಳೂರಿನಲ್ಲಿ ರುಚಿ-ರುಚಿಯಾದ ಖಾರ ಭಾತ್ ಸಿಗುವ ಜನಪ್ರಿಯ ಹೋಟೆಲ್‌ಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 28: ಬೆಳಗಿನ ಉಪಾಹಾರಕ್ಕಾಗಿ ಖಾರ ಬಾತ್‌ಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಯಾಕೆಂದರೆ ಅತ್ಯಂತ ರುಚಿಕರವಾದ ಈ ತಿಂಡಿ ಆಹಾರ ಪ್ರಿಯರಿಗೂ ಸೈ, ಡಯೆಟ್ ಮಾಡುವವರಿಗೂ ಸೈ. ಕಡಿಮೆ ಕ್ಯಾಲೋರಿ ಇರುವ ಈ ಖಾರ ಬಾತ್ ನಾಲಿಗೆಗೆ ರುಚಿ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಖಾರ ಬಾತ್ ಬೆಂಗಳೂರಿನ ಅತ್ಯಂತ ಜನಪ್ರಿಯ ಉಪಹಾರಗಳಲ್ಲಿ ಒಂದಾಗಿದೆ.
ಖಾರ ಭಾತ್, ಇದನ್ನು ಕೆಲವರು ರವಾ ಭಾತ್ ಎಂದು ಸಹ ಕರೆಯುತ್ತಾರೆ. ಈ ಉಪಹಾರವನ್ನು ಬಹುಬೇಗ ತಯಾರಿಸಬಹುದು. ಇದು ಸಣ್ಣ ರವೆಯಿಂದ ಮಾಡಿದ ಖಾರವಾದ ಖಾದ್ಯವಾಗಿದ್ದು, ತರಕಾರಿಗಳು, ಕರಿಬೇವಿನ ಎಲೆಗಳು ಮತ್ತು ತುಪ್ಪ ಇದ್ದರೆ ಸಾಕು ಈ ತಿಂಡಿ ತಯಾರಿಸಬಹುದು. ಖಾರ ಬಾತ್ ಸವಿಯಲು ಜನರು ಬೆಂಗಳೂರಿನ ಕೆಲವು ಹೋಟೆಲ್‌ಗಳಲ್ಲಿ ನೀವು ಜನ ಸಾಲುಗಟ್ಟಿ ನಿಂತಿರುವುದನ್ನು ಕಾಣಬಹುದು.

ರುಚಿ ಹಾಗೂ ಆರೋಗ್ಯಕರವಾದ ಖಾರ ಭಾತ್‌ಗೆ ಬೆಂಗಳೂರು ನಗರದಲ್ಲಿ ಬಹುಬೇಡಿಕೆ ಇದೆ. ಹೀಗಾಗಿ ಒಂದೊಮ್ಮೆ ನೀವು ಬೆಂಗಳೂರು ಪ್ರವಾಸ ಕೈಗೊಂಡರೆ ಅಥವಾ ಬೆಂಗಳೂರಿನ ನಿವಾಸಿಗಳಾದರೆ ಈ ಕೆಳಗಿನ ಸ್ಥಳಗಳಲ್ಲಿ ಖಾರ ಭಾತ್ ಸವಿಯುವುದನ್ನು ಮಿಸ್ ಮಾಡಬೇಡಿ. ಆಹಾರ ಪ್ರಿಯರಿಗಾಗಿ ಬೆಂಗಳೂರಿನಲ್ಲಿ ಖಾರ ಭಾತ್ ಸಿಗುವ ಅತ್ಯುತ್ತಮ ಸ್ಥಳಗಳನ್ನು ಇಲ್ಲಿ ತಿಳಿಸಲಾಗಿದೆ. ಸ್ಥಳೀಯ ಆಹಾರ ಪ್ರಿಯರ ಆಯ್ಕೆ ಮೇರೆಗೆ ಈ ಸ್ಥಳಗಳ ವಿವರ ನೀಡಲಾಗಿದೆ.
ಕೆಫೆ ಅಮುದಂ, ಕೋರಮಂಗಲ
ಕೋರಮಂಗಲದಲ್ಲಿರುವ ಕೆಫೆ ಅಮುದಂ ಹೋಟೆಲ್‌ನಲ್ಲಿ ದಕ್ಷಿಣ ಭಾರತದ ಉಪಹಾರಗಳು ಜನಪ್ರಿಯತೆ ಪಡೆದಿದೆ. ಪುಡಿ ಮಸಾಲೆ, ಮಸಾಲೆ ದೋಸೆ, ಹಾಗೂ ತುಪ್ಪದ ತಟ್ಟೆ ಇಡ್ಲಿ, ಉದ್ದಿನ ವಡೆ, ಪಡ್ಡುಗೆ ಈ ಸ್ಥಳ ಹೆಸರುವಾಸಿಯಾಗಿದೆ. ಇಲ್ಲಿ ಖಾರ ಬಾತ್ ಕೂಡ ಹೆಚ್ಚು ಮಾರಾಟವಾಗುವ ಉಪಹಾರಗಳಲ್ಲಿ ಒಂದಾಗಿದೆ. ಇಲ್ಲಿ ಸಾಮಾನ್ಯ ಖಾರ ಭಾತ್ ಜೊತೆಗೆ ಪುಡಿ ಖಾರ ಭಾತ್ ಕೂಡ ಲಭ್ಯವಿದ್ದು, ಗ್ರಾಹಕರು ಕೂಡ ಹೆಚ್ಚಾಗಿ ಇದನ್ನು ಆರ್ಡರ್ ಮಾಡುತ್ತಾರೆ. ಬೆಂಗಳೂರಿನ ಕೋರಮಂಗಲ 5ನೇ ಬ್ಲಾಕ್ ಕೆಹೆಚ್ ಬಿ ಕಾಲೋನಿಯಲ್ಲಿರುವ ಈ ಹೋಟೆಲ್ ಬೆಳಗ್ಗೆ 7 ರಿಂದ ರಾತ್ರಿ 11:30 ರವರೆಗೆ ತೆರೆದಿರುತ್ತದೆ. ಇಲ್ಲಿ ಇಬ್ಬರು 200 ರೂಪಾಯಿಯಲ್ಲಿ ಉಪಹಾರ ಮುಗಿಸಬಹುದಾಗಿದೆ.
ಬೆಂಗಳೂರು ಕೆಫೆ, ಜಯನಗರ
ಜಯನಗರದ ಬೆಂಗಳೂರು ಕೆಫೆಯಲ್ಲಿನ ಖಾರ ಭಾತ್ ರುಚಿಗೆ ಸೋಲದವರಿಲ್ಲ. ಇಲ್ಲಿ ಸಮಾನ್ಯವಾಗಿ ವಡಾ ಚಟ್ನಿ ಹೆಚ್ಚು ಜನಪ್ರಿಯವಾದರೂ ಕೂಡ ಈ ಹೋಟೆಲ್‌ಗೆ ಭೇಟಿ ನೀಡಿದರವರು ಖಾರ ಭಾತ್ ಮಿಸ್ ಮಾಡುವುದಿಲ್ಲ. ಇಲ್ಲಿನ ಖಾರ ಭಾತ್‌ನ ವಿಶೇಷತೆಯೆಂದರೆ ಹೆಚ್ಚು ಮಸಾಲೆಯುಕ್ತವಾಗಿರುವುದಿಲ್ಲ. ಹೀಗಾಗಿ ಮಕ್ಕಳು ಹಾಗೂ ಆರೋಗ್ಯ ಸಮಸ್ಯೆ ಇರುವವರು ಕೂಡ ಸೇವಿಸಬಹುದಾಗಿದೆ. ಜೊತೆಗೆ ಇಲ್ಲಿ ಖಾರ ಭಾತ್‌ಗೆ ಹೆಚ್ಚಾಗಿ ತರಕಾರಿಗಳನ್ನು ಬಳಸುತ್ತಾರೆ. ಬೆಂಗಳೂರಿನ ಜಯನಗರದ ಎರಡನೇ ಬ್ಲಾಕ್‌ನಲ್ಲಿರು ಈ ಹೋಟೆಲ್ ಬೆಳಗ್ಗೆ 7 ರಿಂದ ರಾತ್ರಿ 9:30 ರವರೆಗೆ ತೆರೆದಿರುತ್ತದೆ. ಇಲ್ಲಿ ಇಬ್ಬರು 150 ರೂಪಾಯಿಯಲ್ಲಿ ಉಪಹಾರ ಮುಗಿಸಬಹುದಾಗಿದೆ.

ಸೆಂಟ್ರಲ್ ಟಿಫನ್ ರೂಮ್, ಮಲ್ಲೇಶ್ವರಂ
ಬೆಂಗಳೂರಿನ ಸಿಟಿಆರ್ ಎಂದೇ ಪ್ರಸಿದ್ಧಿ ಪಡೆದಿರುವ ಮಲ್ಲೇಶ್ವರಂನ ಸೆಂಟ್ರಲ್ ಟಿಫನ್ ರೂಮ್ ಸೆಲೆಬ್ರೆಟಿಗಳಿಗೂ ಕೂಡ ಇಷ್ಟವಾದ ಹೋಟೆಲ್. 1920ರ ದಶಕದಲ್ಲಿ ವೈವಿ ಸುಬ್ರಮಣ್ಯಂ ಈ ಹೋಟೆಲ್‌ನ್ನು ಆರಂಭಿಸಿದ್ದು, ಇಂದಿಗೂ ಅದೇ ಜನಪ್ರಿಯತೆಯನ್ನು ಈ ಹೋಟೆಲ್ ಉಳಿಸಿಕೊಂಡಿದೆ. ಸಿಟಿಆರ್ ಮಸಾಲೆ ದೋಸೆಗೆ ಹೆಚ್ಚು ಫೇಮಸ್ ಆದರೂ ಸಹ ಇಲ್ಲಿನ ಮೆನುವಿನಲ್ಲಿ ಖಾರ ಭಾತ್ ಉತ್ತಮ ಆಯ್ಕೆ. ಫಿಲ್ಟರ್ ಕಾಫಿಯೊಂದಿಗೆ ಇಲ್ಲಿನ ಖಾರ ಭಾತ್ ಬೆಸ್ಟ್ ಕಾಂಬಿನೇಷನ್. ಮಲ್ಲೇಶ್ವರಂನಲ್ಲಿರು ಈ ಹೋಟೆಲ್ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 9:30 ರವರೆಗೆ ತೆರೆದಿರುತ್ತದೆ. ಇಲ್ಲಿ ಇಬ್ಬರು 150 ರೂಪಾಯಿಯಲ್ಲಿ ಉಪಹಾರ ಮುಗಿಸಬಹುದಾಗಿದೆ.
ಕೆಫೆ ಸಿರಿ, ಬ್ರೂಕ್‌ಫೀಲ್ಡ್
ಬೆಂಗಳೂರಿನ ಮಾರತಹಳ್ಳಿಯ ಬ್ರೂಕ್‌ಫೀಲ್ಡ್ನಲ್ಲಿರುವ ಕೆಫೆ ಸಿರಿಯು ಖಾರ ಭಾತ್‌ಗೆ ಹೆಚ್ಚು ಫೇಮಸ್ ಆಗಿದೆ. ಮಧ್ಯಾಹ್ನದವರೆಗೆ ಮಾತ್ರ ಇಲ್ಲಿ ಉಪಹಾರದ ಖಾದ್ಯಗಳು ಲಭ್ಯವಾಗಿರುತ್ತದೆ. ಇಲ್ಲಿ ನೀವು ಖಾರ ಭಾತ್‌ನ ನಿಜವಾದ ರುಚಿ ಸವಿಯಬಹುದು. ಸುತ್ತಮುತ್ತಲೂ ಎಂಎನ್‌ಸಿ ಕಂಪನಿಗಳಿರುವ ಈ ಜಾಗದಲ್ಲಿ ಕೆಫೆ ಸಿರಿಯ ಖಾರ ಭಾತ್ ಬಜೆಟ್ ಫ್ರೆಂಡ್ಲಿ ಉಪಹಾರವಾಗಿದೆ. ಇಲ್ಲಿ ಖಾರ ಭಾತ್ ಕೇವಲ 50 ರೂಪಾಯಿಗೆ ಲಭ್ಯವಿರುತ್ತದೆ. ಮಾರತಹಳ್ಳಿ, ಎಇಸಿಎಸ್ ಲೇಔಟ್ ಮೈನ್ ರ್ಡ್, ಎಇಸಿಎಸ್ ಲೇಔಟ್, ಬ್ರೂಕ್‌ಫೀಲ್ಡ್ನಲ್ಲಿರುವ ಹೋಟೆಲ್ ಬೆಳಗ್ಗೆ 7 ರಿಂದ ರಾತ್ರಿ 11:30 ರವರೆಗೆ ತೆರೆದಿರುತ್ತದೆ.

ಬ್ರಾಹ್ಮಣ ಕಾಫಿ ಬಾರ್, ಶಂಕರಪುರ
ಬೆಂಗಳೂರಿನ ಅತ್ಯಂತ ಜನಪ್ರಿಯ ಉಪಹಾರ ಸ್ಥಳಗಳಲ್ಲಿ ಒಂದಾದ ಈ ಹೋಟೆಲ್‌ಅನ್ನು ಅರವತ್ತರ ದಶಕದಲ್ಲಿ ಆರಂಭಿಸಲಾಯಿತು. ಬಹುಶಃ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಖಾಯಂ ಗ್ರಾಹಕರನ್ನು ಹೊಂದಿರುವ ಹೋಟೆಲ್ ಇದಾಗಿದೆ. ಇದು ಫಿಲ್ಟರ್ ಕಾಫಿ, ಖಾರ ಭಾತ್ ಮತ್ತು ಕೇಸರಿ ಭಾತ್‌ಗೆ ಹೆಸರುವಾಸಿಯಾಗಿದೆ. ಇಲ್ಲಿನ ಖಾರ ಭಾತ್ ತುಪ್ಪ, ತರಕಾರಿ, ಕರಿಬೇವಿನ ಎಲೆಗಳಿಂದ ತುಂಬಿರುತ್ತದೆ. ಪ್ರಮಾಣದಲ್ಲಿಯೂ ಕೂಡ ಇಲ್ಲಿ ಹೆಚ್ಚಾಗಿ ನೀಡುತ್ತಾರೆ. ಬೆಂಗಳೂರಿನ ಶಂಕರ ಮಠದ ಸಮೀಪದಲ್ಲಿರುವ ಈ ಹೋಟೆಲ್ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ, ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
ಬೈ ಟು ಕಾಫಿ ಬಸವನಗುಡಿ
ಬೆಂಗಳೂರಿನ ಬಸವನಗುಡಿಯಲ್ಲಿರುವ ಬೈ ಟು ಕಾಫಿ ಹೋಟೆಲ್, ಫಿಲ್ಟರ್ ಕಾಫಿ ಹಾಗೂ ಉಪಹಾರದ ಖಾದ್ಯಗಳಿಗೆ ಜನಪ್ರಿಯತೆ ಪಡೆದಿದೆ. ಇಲ್ಲಿನ ಖಾರ ಭಾತ್ ಹೆಚ್ಚು ತರಕಾರಿಯೊಂದಿಗೆ ರುಚಿಕರವಾಗಿ ತಯಾರಾಗುತ್ತದೆ. ಇಲ್ಲಿನ ಗ್ರಾಹಕರ ಸಾಮಾನ್ಯ ಆಯ್ಕೆ ಖಾರ ಭಾತ್ ಆಗಿದೆ. ಇಲ್ಲಿಯ ಮೆನುವಿನಲ್ಲಿ ಉಪ್ಪಿನಕಾಯಿ, ಕೋಸಂಬರಿ ಹಾಗೂ ವಿವಿಧ ಬಗೆಯ ಚಟ್ನಿಗಳು ಲಭ್ಯವಿರುತ್ತದೆ. ದೊಡ್ಡ ಗಣೇಶನ ದೇವಾಲಯದ ಸಮೀಪಿರುವ ಬಸವನಗುಡಿ ಬೈ ಟು ಕಾಫಿ ಬೆಳಗ್ಗೆ 7 ರಿಂದ 12:30 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ.
ವೀಣಾ ಸ್ಟೋರ್ಸ್, ಮಲ್ಲೇಶ್ವರಂ
ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತ್ಯುತ್ತಮ ತಿಂಡಿಗಳನ್ನು ಒದಗಿಸುವಲ್ಲಿ ವೀಣಾ ಸ್ಟೋರ್ಸ್ ತನ್ನ ಘನತೆಯನ್ನು ಉಳಿಸಿಕೊಂಡು ಬಂದಿದೆ. ಉಪಹಾರದ ಸಮಯದಲ್ಲಿ ಜನರಿಂದ ತುಂಬಿ ತುಳುಕುವ ಈ ಹೋಟೆಲ್‌ನಲ್ಲಿ ಸರದಿಯಲ್ಲಿ ನಿಂತು ಖಾರ ಭಾತ್ ಸವಿಯಬೇಕಾಗುತ್ತದೆ. ಇಲ್ಲಿನ ಖಾರ ಭಾತ್ ರುಚಿಯನ್ನು ಆಹಾರ ಪ್ರಿಯರು ಮನಸಾರೆ ಒಪ್ಪಿಕೊಂಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಈ ಹೋಟೆಲ್ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ.

ವಿದ್ಯಾರ್ಥಿ ಭವನ, ಗಾಂಧಿಬಜಾರ್
ಮಸಲೆ ದೋಸೆಗೆ ಹೆಸರುವಾಸಿಯಾದ ಗಾಂಧಿಬಜಾರ್‌ನ ವಿದ್ಯಾರ್ಥಿ ಭವನ ಬೆಂಗಳೂರಿನ ಹಳೆಯ ಹೋಟೆಲ್‌ಗಳಲ್ಲಿ ಒಂದು. 1943 ರಲ್ಲಿ ಸಣ್ಣ ಕ್ಯಾಂಟೀನ್ ಆಗಿ ಪ್ರಾರಂಭವಾದ ಈ ಹೋಟೆಲ್, ಇಂದು ಬೆಂಗಳೂರಿನ ಅತ್ಯಂತ ಶುದ್ಧ ಸಸ್ಯಾಹಾರಿ ಉಪಹಾರ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಖಾರ ಭಾತ್ ಮಾತ್ರವಲ್ಲ, ಎಲ್ಲಾ ತಿಂಡಿಗಳು ನಿಮಗೆ ಮನೆಯ ರುಚಿಯನ್ನು ಕೊಡುತ್ತದೆ. ಪ್ರತಿ ದಿನವೂ ಜನರಿಂದ ತುಂಬಿ ತುಳುಕುವ ಈ ಹೋಟೆಲ್‌ನಲ್ಲಿ ಮಸಲೆ ದೋಸೆ ಜೊತೆಗೆ ಖಾರ ಭಾತ್‌ಅನ್ನು ಸಹ ಒಮ್ಮೆ ಸವಿಯಿರಿ. ಬಳಿಕ ನೀವೂ ಕೂಡ ಇಲ್ಲಿನ ಖಾಯಂ ಗ್ರಾಹಕಾರುತ್ತಿರಿ. ಗಾಂಧಿಬಜಾರ್‌ನ ಮುಖ್ಯ ರಸ್ತೆಯಲ್ಲಿರುವ ಈ ಹೋಟೆಲ್ ಬೆಳಗ್ಗೆ 6:30 ರಿಂದ 11:30 ರವರೆಗೆ ಹಾಗೂ ಮಧ್ಯಾಹ್ನ 2-8ವರೆಗೆ ತೆರೆದಿರುತ್ತದೆ.
ಓಲ್ಡ್ ಬೆಂಗಳೂರು ಕೆಫೆ, ಬನಶಂಕರಿ
ಓಲ್ಡ್ ಬೆಂಗಳೂರು ಕೆಫೆಯು ಮೈಸೂರು ಪಾಕ್ ಸೇರಿದಂತೆ ಸ್ಥಳೀಯ ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿ ಉಪಹಾರದ ಖಾದ್ಯಗಳೂ ಕೂಡ ಅಷ್ಟೇ ರುಚಿ ಹೊಂದಿವೆ. ಇಲ್ಲಿನ ಕಾಳು ಉಪ್ಪಿಟ್ಟು ಹಾಗೂ ಖಾರ ಭಾತ್ ಹೆಚ್ಚು ರುಚಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ನೀಡಲಾಗುತ್ತದೆ. ಹೀಗಾಗಿ ಪ್ರತಿದಿನವೂ ಇಲ್ಲಿಗೆ ಬಂದು ಖಾರ ಭಾತ್ ಸೇವಿಸುವವರ ಸಂಖ್ಯೆ ಕೂಡ ಹೆಚ್ಚಿದೆ. ಬೆಂಗಳೂರಿನ ಬನಶಂಕರಿಯಲ್ಲಿ ಇರುವ ಈ ಹೋಟೆಲ್ ಬೆಳಗ್ಗೆ 7:30 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ.

ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಾಫಿ ಬಾರ್, ಬನಶಂಕರಿ
ಎಸ್‌ಎಲ್‌ವಿ ಕಾಫಿ ಬಾರ್ ಎಂದು ಜನಪ್ರಿಯವಾಗಿರುವ ಈ ಹೋಟೆಲ್‌ಗಳೂ ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಆಯ್ಕೆ. ಇಲ್ಲಿ ಸ್ವಲ್ಪ ಸಮಯ ಕಾದು ಉಪಹಾರವನ್ನು ಸೇವಿಸಬೇಕಾಗುತ್ತದೆ. ಇಲ್ಲಿ ಖಾರ ಭಾತ್ ಅತ್ಯಂತ ಜನಪ್ರಿಯ ಐಟಂಗಳಲ್ಲಿ ಒಂದಾಗಿದೆ. ತುಪ್ಪದಲ್ಲಿ ಬೇಯಿಸಿದ ರವೆ ಹಾಗೂ ತರಕಾರಿಗಳನ್ನು ಖಾರ ಭಾತ್‌ನಲ್ಲಿ ಸವಿಯಬಹುದಾಗಿದೆ. ಇಲ್ಲಿನ ಫಿಲ್ಟರ್ ಕಾಫಿ ಹಾಗೂ ವಡೆಗಳು ಕೂಡ ರುಚಿಕರವಾಗಿದ್ದು, ಬೆಳಗಿನ ಉಪಹಾರಕ್ಕಾಗಿ ಇದೊಂದು ಪರಿಪೂರ್ಣ ಜಾಗವಾಗಿದೆ. ಬೆಂಗಳೂರಿನ ಬನಶಂಕರಿಯಲ್ಲಿ ಇರುವ ಈ ಹೋಟೆಲ್ ಬೆಳಗ್ಗೆ 6 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ.
-
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಬಾಳೆಹಣ್ಣು ತಿನ್ನುವ ಸರಿಯಾದ ಕ್ರಮ ಯಾವುದು? ಈ ಸಣ್ಣ ತಪ್ಪು ನಿಮ್ಮ ಆರೋಗ್ಯವನ್ನೇ ಹಾಳು ಮಾಡಬಹುದು -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
Zomato: ಹಸಿದ ಹೊಟ್ಟೆಗೆ ಜೊಮ್ಯಾಟೋ ಬರೆ.. ಆನ್ಲೈನ್ ಊಟ ಬಲು ದುಬಾರಿ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ











Click it and Unblock the Notifications