ಕಾಂಗ್ರೆಸ್ ಸದಸ್ಯ 121789 ಪ್ರಥಮ ನುಡಿಗಳಿವು

ಬೆಂಗಳೂರು,ಮಾ.9: ಸುಮಾರು 130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಇನ್ನೂ 100 ವರ್ಷ ದೇಶದಲ್ಲಿ ಆಳ್ವಿಕೆ ನಡೆಸಲಿ ಎಂಬ ಆಶಯ ನನ್ನದು. ನನ್ನೆಲ್ಲಾ ಸಾಮರ್ಥ್ಯ ಅನುಭವವನ್ನು ಕಾಂಗ್ರೆಸ್ ಪಕ್ಷಕ್ಕೆ ಧಾರೆ ಎರೆಯುತ್ತೇನೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರು ಕಾಂಗ್ರೆಸ್ ಪಕ್ಷದ 121789ನೇ ಪ್ರಾಥಮಿಕ ಸದಸ್ಯತ್ವ ಪಡೆದ ನಂತರ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಅದ್ಧೂರಿ ಸ್ವಾಗತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ವಿದ್ಯುಕ್ತವಾಗಿ ಸೇರಿದ ಆಧಾರ್ ಜನಕ ನಂದನ್ ನಿಲೇಕಣಿ ಅವರು ನಾನು ಇಲ್ಲಿಯೇ ಮಾಗಡಿ ರೋಡಿನವನು.ನಾನು ಹುಟ್ಟಿದ್ದು ವಾಣಿವಿಲಾಸ್ ಆಸ್ಪತ್ರೆಯಲ್ಲಿ ಎಂದು ತಮ್ಮ ಪ್ರಾದೇಶಿಕತೆಯನ್ನು ಪ್ರತಿಪಾದಿಸಿದರು.

ಪಕ್ಷ ಸೇರ್ಪಡೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೇರಿರುವುದು ನನಗೆ ಸಂತೋಷವಾಗಿದೆ. ನಮ್ಮಂತವರು ರಾಜಕೀಯಕ್ಕೆ ಬರಬೇಕು ಎಂಬುದು ನನ್ನ ಅಭಿಲಾಷೆ. ನನ್ನ ಮತ್ತು ಕಾಂಗ್ರೆಸ್ ಸಿದ್ಧಾಂತ ಒಂದೇ ಆಗಿದೆ. ಈ ದೇಶದ ಪ್ರಧಾನಿಯಾಗಿದ್ದ ಜವಹಾರ್ ನೆಹರು ಅವರ ಸಿದ್ಧಾಂತವನ್ನು ನನ್ನ ತಂದೆ ನನಗೆ ಕಲಿಸಿದ್ದರು ಎಂದರು.

ನಿಲೇಕಣಿ ಅವರಿಗೆ ರಾಜಕೀಯ ಗೊತ್ತಿಲ್ಲ ಎಂದು ಮಾತನಾಡುವವರಿಗೆ ಪ್ರತ್ಯುತ್ತರ ನೀಡಿದ ಅವರು, ಬ್ಲಾಕ್ ಕಾಂಗ್ರೆಸ್ ನಿಂದ ಹಿಡಿದು ಲೋಕಸಭೆ ಅಭ್ಯರ್ಥಿಯವರೆಗೆ ಎಲ್ಲರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಸಚಿವರು, ಶಾಸಕರು, ಪರಾಜಿತ ಅಭ್ಯರ್ಥಿಗಳು ಬಿಬಿಎಂಪಿ ಸದಸ್ಯರು ಸೇರಿದಂತೆ ಎಲ್ಲರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇನೆ. ಎಲ್ಲರಿಗೂ ತಲುಪುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. [ಪಟ್ಟಿ ಇಲ್ಲಿದೆ ನೋಡಿ]

ನನ್ನ ಸಾಮರ್ಥ್ಯ ಅನುಭವವನ್ನು ಬಳಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಈ ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಕಾರ್ಯಪಡೆ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ ಅನುಭವವಿದೆ. ಆಧಾರ್ ಕಾರ್ಡ್ ಸಂಬಂಧ ಎಲ್ಲಾ ರಾಜಕೀಯ ಪಕ್ಷದ ಮುಖಂಡರನ್ನು ಸಂಪರ್ಕಿಸಿದ್ದೇನೆ. ಎಲ್ಲಾ ರಾಜ್ಯದ ಮುಖಂಡರೊಂದಿಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು. ಆಧಾರ್ ಕಾರ್ಡ್, ಅನಂತಕುಮಾರ್ ಜತೆ ಸ್ಪರ್ಧೆ ಬಗ್ಗೆ ಏನು ಹೇಳಿದರು ಮುಂದೆ ಓದಿ... [ಚಿತ್ರಕೃಪೆ: ನಂದನ್ ನಿಲೇಕಣಿ ಫೇಸ್ ಬುಕ್ ಪುಟ, @KtakaCongress]

ಆಧಾರ್ ಕಾರ್ಡ್ ಆಡ್, ಅನಂತ್ ವಿರುದ್ಧ ಸ್ಪರ್ಧೆ

ಆಧಾರ್ ಕಾರ್ಡ್ ಆಡ್, ಅನಂತ್ ವಿರುದ್ಧ ಸ್ಪರ್ಧೆ

ಆಧಾರ್ ಕಾರ್ಡ್ ಜಾಹಿರಾತಿನ ಬಗ್ಗೆ ಬಿಜೆಪಿ ನೀಡಿರುವ ದೂರಿನ ಬಗ್ಗೆ ಆಯೋಗ ನಿರ್ಧಾರ ಕೈಗೊಳ್ಳುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಐದು ಬಾರಿ ಗೆದ್ದ ಅನಂತಕುಮಾರ್ ವಿರುದ್ಧ ನೀವು ಗೆಲ್ಲಲು ಸಾದ್ಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಲೇಕಣಿ, ಎಲ್ಲದಕ್ಕೂ ಒಂದು ಕೊನೆ ಇರುತ್ತದೆ. ಆ ಕಾಲ ಈಗ ಬಂದಿದೆ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಆಧಾರ್ ಪ್ರಾಧಿಕಾರಕ್ಕೆ ಕಳೆದ ನಾಲ್ಕು ದಿನಗಳ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.

ನಾಳೆಯಿಂದಲೇ ವ್ಯಾಪಕ ಪ್ರಚಾರ ಕೈಗೊಳ್ಳುತ್ತೇನೆ

ನಾಳೆಯಿಂದಲೇ ವ್ಯಾಪಕ ಪ್ರಚಾರ ಕೈಗೊಳ್ಳುತ್ತೇನೆ

* ರಾಜಕೀಯ ಸೇರಬೇಕೆಂಬ ನಿರ್ಧಾರವನ್ನು ಆರು ತಿಂಗಳ ಹಿಂದೆ ಕೈಗೊಂಡಿದ್ದೇನೆ. ಐಟಿ ಕ್ಷೇತ್ರದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದೇನೆ
* ಯುಪಿಎ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸಮರ್ಪಕ ಉತ್ತರ ನೀಡದ ಅವರು, ಜನ ಒಳ್ಳೆಯವರನ್ನು ಬಯಸುತ್ತಾರೆ. ಪ್ರಾಮಾಣಿಕರಿಗೆ ಆದ್ಯತೆ ನೀಡುತ್ತಾರೆ
* ನಾಳೆಯಿಂದ ಬೆಂಗಳೂರು ದಕ್ಷಿಣದಲ್ಲಿ ವ್ಯಾಪಕ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ, ಪಕ್ಷ ಬಯಸಿದರೆ ಬೇರೆ ಕ್ಷೇತ್ರದಲ್ಲೂ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಂತಸ

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಂತಸ

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮಾತನಾಡಿ, ಪರಿವರ್ತನೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಸಾಮಾಜಿಕ ಸೇವೆಯಲ್ಲಿರುವವರು ಕಾಂಗ್ರೆಸ್ ಪಕ್ಷಕ್ಕೆ ಬರಬೇಕು, ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿದ್ದ ಪುಷ್ಪಾವತಿ ಅವರು ಕಾಂಗ್ರೆಸ್ ‌ಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾವಂತರಿಲ್ಲ. ಪ್ರಾಮಾಣಿಕರಿಲ್ಲ ಎಂಬ ಆರೋಪಗಳನ್ನು ಪಕ್ಷ ಸುಳ್ಳಾಗಿಸಿದೆ.

ನಂದನ್ ನಿಲೆಕೇಣಿ ಅವರ ಸೇರ್ಪಡೆಯಿಂದ ಐಟಿ ಕ್ಷೇತ್ರಕ್ಕೆ ಒಂದು ಉತ್ತಮ ಸಂದೇಶ ರವಾನೆಯಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಕೂಡ ಇದೇ ರೀತಿ ಪಕ್ಷ ಸೇರ್ಪಡೆಯಾಗಿ 10 ವರ್ಷಗಳ ಕಾಲ ದೇಶ ಮುನ್ನಡೆಸಿ ದೇಶವನ್ನು ಸದೃಢಗೊಳಿಸಿದ್ದಾರೆ ಎಂದರು.

ನಂದನ್ ಗೆ ಅಧಿಕಾರದ ಆಸೆಯಿಲ್ಲ, ಇದ್ದಿದ್ದರೆ

ನಂದನ್ ಗೆ ಅಧಿಕಾರದ ಆಸೆಯಿಲ್ಲ, ಇದ್ದಿದ್ದರೆ

ನಮ್ಮಲ್ಲಿ ಶೇ.60ರಷ್ಟು ಯುವಕರಿದ್ದಾರೆ. ನಿಲೇಕಣಿ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಲು ಹೆಮ್ಮೆಯಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುವುದಾದರೆ ನಿಲೇಕಣಿ ಅವರು ಬಿಜೆಪಿಗೆ ಸೇರುತ್ತಿದ್ದರು. ಅವರಿಗೆ ಅಧಿಕಾರದ ಆಸೆಯಿಲ್ಲ. ಒಂದು ರೂ. ಸಂಬಳ ಪಡೆದು ಆಧಾರ್ ಪ್ರಾಧಿಕಾರದ ಕೆಲಸ ನಿರ್ವಹಿಸಿದವರು ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಅನಾರೋಗ್ಯವಿರಬಹುದು. ರಾಹುಲ್ ಗಾಂಧಿಯವರಿಗೆ ಅನುಭವದ ಕೊರತೆ ಇರಬಹುದು. ಆದರೆ ಬದ್ಧತೆ ಮತ್ತು ಕಾಳಜಿ ಇದೆ ಎಂದರು.

ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಕೈ ಸೇರಲಿದೆ

ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಕೈ ಸೇರಲಿದೆ

1991ರಿಂದ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿದೆ. ಈ ಬಾರಿ ಜನ ಪಕ್ಷದ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್ಸಿಗರಲ್ಲಿ ಮೂಡಿದೆ. ಅನಂತ್ ಕುಮಾರ್ ಅವರು ಕೇಂದ್ರ ಸಚಿವರಾಗಿದ್ದಾಗ ಹುಡ್ಕೊ ಹಗರಣ ಮಾಡಿ ಕ್ಷೇತ್ರದ ಗೌರವ ಕಳೆದಿದ್ದರು ಎಂದು ಪರಮೇಶ್ವರ್ ಮತ್ತೊಮ್ಮೆ ಆರೋಪಿಸಿದ್ದಾರೆ. ಸಮಾರಂಭದಲ್ಲಿ ಸಚಿವರಾದ ರಾಮಲಿಂಗರೆಡ್ಡಿ, ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ರೆಹಮಾನ್ ಖಾನ್, ಶಾಸಕರಾದ ಆರ್.ವಿ.ದೇವರಾಜ್, ಎಂ. ಕೃಷ್ಣಪ್ಪ, ವೀರಣ್ಣ ಮತ್ತಿಕಟ್ಟಿ, ಎಂ.ಇ.ರಾಜಶೇಖರನ್, ಪಕ್ಷದ ಮುಖಂಡ ಬಿ.ಎಲ್.ಶಂಕರ್ ಮುಂತಾದವರು ಇದ್ದರು.

ನಾನು ಮ್ಯಾರಥಾನ್ ಓಟಗಾರ, ಸ್ಪ್ರಿಂಟರ್ ಅಲ್ಲ

ನಾನು ಮ್ಯಾರಥಾನ್ ಓಟಗಾರ, ಸ್ಪ್ರಿಂಟರ್ ಅಲ್ಲ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ನಂದನ್ ಅವರೇ ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಣೆಯಾಗುವ ಮುಂಚಿತವಾಗಿಯೇ ತಮ್ಮ ಪತ್ನಿ ರೋಹಿಣಿ ನಿಲೇಕಣಿ ಅವರೊಂದಿಗೆ ಮನೆಮನೆಗೆ, ಕಾಲೇಜುಗಳಿಗೆ ನಂದನ್ ಭೇಟಿ ಕೊಟ್ಟು ಕಾಂಗ್ರೆಸ್ ಪರ ಪ್ರಚಾರ ಆರಂಭಿಸಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ನಂದನ್ ನಿಲೇಕಣಿ ಮುಖ ಎಲ್ಲರಿಗೂ ಚಿರಪರಿಚಿತವಾಗಿಬಿಟ್ಟಿದೆ. ನಾನು ಮ್ಯಾರಥಾನ್ ಓಟಗಾರ, ಸ್ಪ್ರಿಂಟರ್ ಅಲ್ಲ ಎಂದು ಟೈಮ್ಸ್ ಪತ್ರಿಕೆ ನೀಡಿದ ವಿಶೇಷ ಸಂದರ್ಭದಲ್ಲಿ ತಮ್ಮ ರಾಜಕೀಯ ಓಟದ ಬಗ್ಗೆ ನಂದನ್ ನಿಲೇಕಣಿ ವಿಶ್ಲೇಷಣೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+