Power Cut; ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.22, 23ರಂದು ವಿದ್ಯುತ್ ವ್ಯತ್ಯಯ

ಬೆಂಗಳೂರು, ಫೆಬ್ರವರಿ 22: ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ ಸಮಸ್ಯೆ ದಿನವೂ ಆಗುತ್ತಲೇ ಇದೆ. ಬೇಸಿಗೆ ಆರಂಭವಾಗಿದ್ದು, ಜನರು ವಿದ್ಯುತ್ ಕಡಿತವಾದಾಗ ತೊಂದರೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ಮಧ್ಯಾಹ್ನದ ವೇಳೆ ವಿಪರೀತ ಸೆಖೆ ಮತ್ತು ರಾತ್ರಿ ಸೊಳ್ಳೆ ಕಾಟಕ್ಕೆ ಮಲಗಲು ತೊಂದರೆಯಾಗುತ್ತದೆ.

ಇದರ ನಡುವೆ ನಗರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ. ಈಗ ಮತ್ತೆ ಜನವರಿ 22ರ ಮಂಗಳವಾರ ಮತ್ತು ಫೆಬ್ರವರಿ 23ರ ಬುಧವಾರದಂದು ಮತ್ತೆ ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತ ಮಾಡಲು ಬೆಸ್ಕಾಂ ಮುಂದಾಗಿದೆ. ಹೀಗಾಗಿ ನಗರದ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Bengaluru To Face Power Cuts From February 22nd And February 23rd; Full Details

ಫೆ.22ರ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು
ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಲಾಲ್‌ಬಾಗ್ ರಸ್ತೆ, ಸಿಎಸ್‌ಐ ಕಾಂಪೌಂಡ್, ಜೆ ಕ್ರಾಡ್ 1 ಮತ್ತು 2 ಕ್ರಾಸ್, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈ.ವಿ.ಎನ್.ಐ. ರಸ್ತೆ, ಕುಮಾರಸ್ವಾಮಿ ಲೇಔಟ್, 50 ಅಡಿ ರಸ್ತೆ, ಟೀಚರ್ಸ್ ಕಾಲೋನಿ, ಕನಕ ಲೇಔಟ್, ಗೌಡನಪಾಳ್ಯ, 4ನೇ ಮುಖ್ಯ, 24ನೇ ಬಿ ಕ್ರಾಸ್ ಕೆಆರ್ ರಸ್ತೆ, 8ನೇ ಕ್ರಾಸ್, 9ನೇ ಮತ್ತು 10ನೇ ಸಿಆರ್‌ಎಸ್ ಜೆಪಿ ನಗರ 1ನೇ ಹಂತ, ಶಾಕಂಬರಿ ನಗರ, 9ನೇ ಕ್ರಾಸ್, ಐಜಿ ಸರ್ಕಲ್, ಸಾರಕ್ಕಿ ಮಾರುಕಟ್ಟೆ, ಕೆಟಿ ಅಪಾರ್ಟ್‌ಮೆಂಟ್, ಡಬ್ಲ್ಯುಎಂಎಸ್ ಕಾಂಪೌಂಡ್ ಹಿಂಬದಿ, ಜೆಪಿ ನಗರ 2ನೇ ಹಂತ, 3ನೇ ಹಂತ, 4ನೇ ಹಂತ, 5ನೇ ಹಂತ, 15ನೇ ಕ್ರಾಸ್, ಡ್ಯೋಲ್‌ನಾಗ್ಸ್‌ನಲ್ಲಿ ವಿದ್ಯುತ್ ಕಡಿತವಾಗಲಿದೆ.

ಉತ್ತರ ವಲಯ:
ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ವೈಪಿಆರ್ 1ನೇ ಮುಖ್ಯರಸ್ತೆ, ಮಾಡೆಲ್ ಕಾಲೋನಿ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಪೈಪ್ ಲೈನ್ ರಸ್ತೆ, ಮಂಜುನಾಥ ನಗರ (ಫುಲ್ ಫೀಡರ್), ಹೆಸರಘಟ್ಟ ರಸ್ತೆ ಸ್ಲಂ ಬೋರ್ಡ್ ಕಾಲೇಜು ರಸ್ತೆ, ಪಿ&ಟಿ ಕ್ವಾರ್ಟರ್ಸ್, ಕೆಎಚ್‌ಬಿ ಕ್ವಾರ್ಟರ್ಸ್, ರಂಕಾ ನಗರ, ದೊಡ್ಡಮ್ಮ ಲೇಔಟ್, ಎಂಆರ್ ಪಾಳ್ಯ, ಬೋನ್‌ವಿಲ್ ಏರಿಯಾ ಚಿಕ್ಕಸಂದ್ರ ಐಆರ್ ಲೇಔಟ್ ಸಪ್ತಗಿರಿ ಕಾಲೇಜು ಸುತ್ತ ಕರೆಂಟ್ ಇರುವುದಿಲ್ಲ.

ಪೂರ್ವ ವಲಯ:
ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ, ನಾಗವಾರ ಪಾಳ್ಯ ರಸ್ತೆ, ಪೈ ಲೇಔಟ್, ಕೆಜಿ ಪುರ ಮುಖ್ಯ ರಸ್ತೆ, ಮಾನ್ಸೂನ್ ಪಬ್ಲಿಕ್ ಸ್ಕೂಲ್ ಹತ್ತಿರ, ಉಮರ್ ನಗರ, ಚಾಣಕ್ಯ ಲೇಔಟ್, ನಾಗವಾರ, ಶೋಭಾ (ವಿದ್ಯಾನಗರ), ರಸ್ತೆ, ರವಿಶಂಕರ್ ಶಾಲೆ ಸುತ್ತಮುತ್ತಲಿನ ಪ್ರದೇಶ, ಮುಳ್ಳೂರು ರಸ್ತೆ, ವಿಷ್ಣು ವಿಲಾಸ್ ರಸ್ತೆ, ಕಾಲೇಜ್ ವಿಲಾಸ್ ಲೇಔಟ್‌ನಲ್ಲಿ ವಿದ್ಯುತ್ ಕಡಿತ.

Bengaluru To Face Power Cuts From February 22nd And February 23rd; Full Details

ಪಶ್ಚಿಮ ವಲಯ:
ಬೆಳಗ್ಗೆ 10:30ರಿಂದ ಸಂಜೆ 7 ಗಂಟೆಯವರೆಗೆ ವಿಡಿಯಾ ಲೇಔಟ್, ಬಿಎಚ್‌ಇಎಲ್ ಅತಿಥಿ ಗೃಹ, ಬಸವೇಶ್ವರ ಲೇಔಟ್, ಚಂದ್ರ ಲೇಔಟ್, ಜಿಕೆಡಬ್ಲ್ಯೂ ಲೇಔಟ್, ಪಿಎಫ್ ಲೇಔಟ್, ವಿನಾಯಕ, ಮೈಕೋ ಲೇಔಟ್ II, ಮೈಕೋ ಲೇಔಟ್, 7ನೇ ಮುಖ್ಯ ರಸ್ತೆ ಸಾನೆಗೊರವನಹಳ್ಳಿ, 7ನೇ ಮುಖ್ಯ, 7ನೇ ಎ, ಬಿ & ಸಿ ಮುಖ್ಯ, 3ನೇ ಹಂತ, 3ನೇ ಬ್ಲಾಕ್ ಬಸವೇಶ್ವರನಗರ. ಸೆಂಟ್ರಲ್ ಬ್ಯಾಂಕ್ ಸುತ್ತಲೂ ವಿದ್ಯುತ್ ಇರುವುದಿಲ್ಲ.

ಫೆ.23ರಂದು ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು
ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಸಿಎಸ್ಐ ಕಾಂಪೌಂಡ್, ಯೂನಿಟಿ ಬಿಲ್ಡಿಂಗ್, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಬಿಕಾಸಿಪುರ, ಮಾವು ಗಾರ್ಡನ್, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಸಿದ್ದಾಪುರ, 2ನೇ ಬ್ಲಾಕ್, 18ನೇ ಕ್ರಾಸ್, 8ನೇ ಕ್ರಾಸ್, 6ನೇ ಕ್ರಾಸ್, 10ನೇ ಮುಖ್ಯ 1ನೇ ಬ್ಲಾಕ್, 3ನೇ ಬ್ಲಾಕ್, 18ನೇ ಕ್ರಾಸ್, 7ನೇ ಕ್ರಾಸ್, ಸೋಮೇಶ್ವರನಗರ, ಎಂಎಂ ಇಂಡಸ್ಟ್ರೀಸ್, 14ನೇ ಕ್ರಾಸ್, ಶತಿನಗರ ಮುಖ್ಯ ರಸ್ತೆ, ಕೆಆರ್ ರಸ್ತೆ, ಮಾರತಹಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ಚೌಡೇಶ್ವರಿ ದೇವಸ್ಥಾನ ರಸ್ತೆ, ತುಳಸಿ ಥಿಯೇಟರ್ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಉತ್ತರ ವಲಯ:
ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಬಿಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ಎಂಎಲ್‌ಎ ಲೇಔಟ್, ಆರ್‌ಕೆ ಗಾರ್ಡನ್ಸ್, ನ್ಯೂ ಬಿಇಎಲ್ ರಸ್ತೆ, ರಾಯಲ್ ಸ್ಟ್ರೀಟ್, ವಿನಾಯಕ ಲೇಔಟ್, ನಾರಾಯಣ ಲೇಔಟ್, ಎಂಎಸ್ ಪಾಳ್ಯ, ಏರ್ ಫೋರ್ಸ್ ರಸ್ತೆ ಗಣೇಶ ಲೇಔಟ್, ತಾತಾನಗರ, ದೇವಿ ನಗರ, ಲೊಟ್ಟೆಗೋಳಕಲ್ಹಳ್ಳಿ, ಮುನೇಶ್ವರ ದೇವಸ್ಥಾನ, ರಿಂಗ್ ರಸ್ತೆಯ ಭಾಗ, ಜಿಕೆವಿಕೆ ಡಬಲ್ ರೋಡ್, ಬುಲೆಟ್ ಕೃಷ್ಣಪ್ಪ ಲೇಔಟ್, ಲೇಕಶೋರ್ ಗಾರ್ಡನ್, ಥಿಂಡ್ಲು ಟು ಭಾರತ್ ಪೆಟ್ರೋಲ್ ಬಂಕ್ ಸುತ್ತ ಕರೆಂಟ್ ಇರುವುದಿಲ್ಲ.

ಪೂರ್ವ ವಲಯ:
ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಉದಯನಗರ, ಕೆಜಿ ಪುರ, ಕೆಜಿ ಪುರ ಮುಖ್ಯ ರಸ್ತೆ, ಲೇಕ್ ಆರ್ಎಂಯು ಹತ್ತಿರ, ಚೈತನ್ಯ ಸ್ಕೂಲ್ ರಸ್ತೆ, ಜೋಗುಪಾಳ್ಯ ಮುಖ್ಯ ಚಾನಲ್ ರಸ್ತೆ, ಐಎಲ್‌ಪಿಇ ತೋಪು ಕೇಂಬ್ರಿಡ್ಜ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಪೃಥ್ವಿ ಲೇಔಟ್, ನಾಯ್ಡು ಲೇಔಟ್, ಕರುಮ್ವರಿ ಟೆಂಪಲ್ ರಸ್ತೆ, ಇಸಿಸಿಲ್ ರಸ್ತೆ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಮ್ಜಿ ಲೇಔಟ್, ಅಂಬೇಡ್ಕರ್ ನಗರ ಗುಟ್ಟಾ, ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಡಿತವಾಗಲಿದೆ.

ಪಶ್ಚಿಮ ವಲಯ:
ಬೆಳಗ್ಗೆ 10:30 ರಿಂದ ಸಂಜೆ 7 ಗಂಟೆಯವರೆಗೆ ಬಂಟ ಸಂಘ ಹತ್ತಿರ, ಸುಬ್ಬಣ್ಣ ಗಾರ್ಡನ್, ಬಿಎಚ್ಇಎಲ್ ಟೌನ್‌ಶಿಪ್, ಸುಬ್ಬಣ್ಣ ಗಾರ್ಡನ್, ಗಂಗೊಂಡನಹಳ್ಳಿ, ಗಂಗೊಂಡನಹಳ್ಳಿ ಬಿಸಿಸಿ ಲೇಔಟ್, ಅತ್ತಿಗುಪ್ಪೆ ಸರ್ಕಾರಿ ಕಾಲೇಜು ಹತ್ತಿರ, ಡಿ ಮತ್ತು ಇ ಕ್ರಾಸ್, ಬಸವನಗರ ಕ್ರಾಸ್, ಬಸವನಗರ 15ನೇ ಮುಖ್ಯ ರಸ್ತೆ, ಬಸವನಗರ 3ನೇ ಮುಖ್ಯ ಮತ್ತು 4ನೇ ಮುಖ್ಯ ರಸ್ತೆ, ಶಿಕ್ಷಕರ ಕಾಲೋನಿ, ಅಶೋಕ ಆಸ್ಪತ್ರೆ ಸುತ್ತಮುತ್ತ ಮತ್ತು ಜೆಸಿ ನಗರ NHCS ಲೇಔಟ್ 1ನೇ ಮುಖ್ಯ, 2ನೇ ಮುಖ್ಯ, 3ನೇ ಮುಖ್ಯ ಮತ್ತು 4ನೇ ಮುಖ್ಯ, ಶಿಕ್ಷಕರ ಕಾಲೋನಿ, ಅಶೋಕ ಆಸ್ಪತ್ರೆ ಸುತ್ತಮುತ್ತ ಮತ್ತು JC ನಗರ ಸುತ್ತಮುತ್ತ, KGHS ಲೇಔಟ್, ಹಳೆಯ ಹೊರ ವರ್ತುಲ ರಸ್ತೆ, ಪಾಪರೆಡ್ಡಿಪಾಳ್ಯ, ಕೆಕೆ ಲೇಔಟ್, ಬಿಬಿಎಂಪಿ ವಾರ್ಡ್ ಕಚೇರಿ, ಬಿನ್ನಿ ಲೇಔಟ್, ಜಯಲಕ್ಷ್ಮಮ್ಮ ಲೇಔಟ್‌ನಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದ್ದು, ಜನರಿಗೆ ಬೆಸ್ಕಾಮ ಸಹಕರಿಸುವಂತೆ ಮನವಿ ಮಾಡಿದೆ.

ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Recommended Video

      ಇದು ಎರಡು ವರ್ಷದ ಹಳೆ ದ್ವೇಷ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+