ನಿತ್ಯ ಕಸ ಸಾಗಿಸುವ ಚಾಲಕರು, ಆಟೋ ಟಿಪ್ಪರ್ ಮಾಲೀಕರಾಗಲಿದ್ದಾರೆ!

ಬೆಂಗಳೂರು, ಮಾರ್ಚ್ 12: ನಿತ್ಯ ಕಸ ಸಂಗ್ರಹಿಸಿ ಟಿಪ್ಪರ್ ಆಟೋ ಮೂಲಕ ಸಾಗಿಸುವ ಕೆಸಲ ಮಾಡುತ್ತಿದ್ದ ತಿಂಗಳಾದರೆ ಗುತ್ತಿಗೆದಾರರ ಮುಂದೆ ವೇತನಕ್ಕೆ ಪರದಾಡುತ್ತಿದ್ದ ಚಾಲಕರು ಇನ್ನುಮುಂದೆ ವಾಹನದ ಮಾಲೀಕರಾಗಲಿದ್ದಾರೆ.

ತಾವೇ ಸಿಬ್ಬಂದಿಯನ್ನು ಕೆಲಸಕ್ಕಿಟ್ಟುಕೊಂಡು ವೇತನ ನೀಡುವ ಮಟ್ಟಕ್ಕೆ ಬೆಳೆಯಲಿದ್ದಾರೆ. ಅದಕ್ಕಾಗಿ ಬಿಬಿಎಂಪಿ ಹೊಸ ಯೋಜನೆ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಜಾರಿಗಳಿಸಲಿದೆ. ಗುತ್ತಿಗೆ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದಲೇ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದೀಗ ಟಿಪ್ಪರ್ ಆಟೋ ಚಾಲಕರು ಕೂಡ ಬಿಬಿಎಂಪಿಯಿಂದಲೇ ವೇತನ ಪಾವತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಪ್ರತಿಭಟನೆ ಹತ್ತಿಕ್ಕಲು ಮತ್ತು ಆಟೋ ಚಾಲಕರಿಗೆ ನೆಲೆ ಕಲ್ಪಿಸಲು ಸ್ವಂತ ಆಟೋ ಖರೀದಿಗೆ ಆರ್ಥಿಕ ನೆರವು ಒದಗಿಸಲು ನಿರ್ಧರಿಸಿದೆ.

Tipper auto drivers will own their vehicle soon

ಸಾಲ ಸೌಲಭ್ಯ: ಆಟೋ ಖರೀದಿಗೆ ಅಗತ್ಯವಿರುವ ಸಾಲವನ್ನು ಬಿಬಿಎಂಪಿಯೇ ಬ್ಯಾಂಕ್ ಗಳೊಂದಿಗೆ ಮಾತುಕತೆ ನಡೆಸಿ ಕೊಡಿಸಲಿದೆ. ಅಲ್ಲದೆ, ಕಸ ಸಂಗ್ರಹಿಸಿ, ಸಾಗಣೆ ಮಾಡಿದ್ದಕ್ಕೆ ಬದಲಾಗಿ ಬಿಬಿಎಂಪಿ ಚಾಲಕರಿಗೆ ನೀಡಬೇಕಾದ ಹಣದಲ್ಲಿ ಅರ್ಧ ಭಾಗವನ್ನು ಸಾಲ ಮರು ಪಾವತಿಗೆ ನೀಡಲಾಗುತ್ತದೆ. ಆ ಮೂಲಕ ಚಾಲಕರಿಗೂಆದಾಯದ ಜತೆಗೆ ಸಾಲ ತೀರಿಸುವ ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+