ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಶುಕ್ರವಾರ ಗುಡುಗು ಸಹಿತ ಮಳೆ ಸಾಧ್ಯತೆ

|
Google Oneindia Kannada News

ಅಂತೂ ಬೆಂಗಳೂರಿನಲ್ಲಿ ಜೂನ್ ಎಂಟರ ಗುರುವಾರ ಮಳೆ ಕಂಡಂತಾಯಿತು. ಶುಕ್ರವಾರಕ್ಕೆ ಬೆಂಗಳೂರಿನ ವಾತಾವರಣ ಹೇಗಿರುತ್ತದೆ, ಮಳೆ ಬರಬಹುದಾ ಎಂಬ ಬಗ್ಗೆ ನಿಮಗೆ ಯಾವುದೇ ಕುತೂಹಲ ಇಲ್ಲವಾ? ಆದ್ದರಿಂದಲೇ ಜೂನ್ ಒಂಬತ್ತರ ಶುಕ್ರವಾರದ ಹವಾಮಾನದ ಸ್ಥಿತಿಯ ಬಗ್ಗೆ ಇಲ್ಲಿ ಮಾಹಿತಿ ಕೊಡ್ತಿದ್ದೀವಿ.

ಅಂತೂ ನೈರುತ್ಯ ಮುಂಗಾರು ಬೆಂಗಳೂರಿನಲ್ಲಿ ಪ್ರವೇಶ ಮಾಡಿದೆ. ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಗುಡುಗುಸಹಿತ ಮಳೆ ಆಗುವ ಸಾಧ್ಯತೆ ಇದೆ. ಸ್ಕೈ ಮೆಟ್ ವೆದರ್ ವರದಿಯ ಪ್ರಕಾರ ಕರ್ನಾಟಕದ ವಿವಿಧೆಡೆ ತುಂತುರು ಮಳೆಯಿಂದ ಸಾಧಾರಣ ಮಳೆವರೆಗೆ ಬೀಳಬಹುದು.

ಕನಿಷ್ಠ ಮುಂದಿನ ಎರಡು ದಿನದಲಿ ಗುಡುಗು ಸಹಿತ ಮಳೆಯಂತೂ ಆಗುತ್ತದೆ. ಅದ್ಯಾಕೆ ಬೆಂಗಳೂರಿನಲ್ಲಿ ಜೂನ್ ಒಂಬತ್ತರ ಶುಕ್ರವಾರದಂದು ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ನಿಚ್ಚಳವಾಗಿದೆ.[ಹುಬ್ಬಳ್ಳಿ-ಧಾರವಾಡದಲ್ಲಿ ಮಳೆಗಾಲಕ್ಕೆ ಸಿದ್ಧತೆಯೇ ಇಲ್ಲವಲ್ಲಪ್ಪೋ!]

Weather

ಇನ್ನು ಗರಿಷ್ಠ ಉಷ್ಣಾಂಶ ಇಪ್ಪತ್ತಾರು ಡಿಗ್ರಿ ಸೆಲ್ಷಿಯಸ್ ದಾಖಲಾಗಲಿದೆ. ಅಂತೂ ಶುಕ್ರವಾರ ಮನೆಯಿಂದ ಆಚೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗೋದು ಮರೆಯಬೇಡಿ.

ಸಂಜೆ ಹೊತ್ತಿಗಂತೂ ಮನೆಯನ್ನು ಸೇರುವ ಹಾಗೆ ನೋಡಿಕೊಳ್ಳಿ. ಮರದ ಕೆಳಗೆ ನಿಲ್ಲಬೇಡಿ. ವಾಹನ ಸವಾರರು ಎಚ್ಚರ.

English summary
Monsoon has finally arrived in Bengaluru. Rains and thundershowers will continue over the city for the next 48 hours. According to Skymet weather, a wind shear zone has formed over the Karnataka region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X