• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಯುಭಾರ ಕುಸಿತ: ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ 'ಗಜ'ಮಳೆ

|
   ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ 'ಗಜ'ಮಳೆ | Oneindia Kannada

   ಬೆಂಗಳೂರು, ನವೆಂಬರ್ 14: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಗಜ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಲಿದ್ದು ಬೆಂಗಳೂರಲ್ಲಿ ನವೆಂಬರ್ 15ರಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

   ಒಂದು ವಾರದ ಹಿಂದೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾಣಿಸಿಕೊಂಡಿತ್ತು, ಇದು ಚಂಡಮಾರುತವಾಗಿ ಬದಲಾಗಬಹುದು ಎಂದು ಹವಾಮಾನ ತಜ್ಞರು ನಿರೀಕ್ಷಿಸಿದ್ದರು.

   ಗಜ ಚಂಡಮಾರುತ ಎಫೆಕ್ಟ್: ಬೆಂಗಳೂರಲ್ಲಿ ಮೂರು ದಿನ ಮಳೆ ಸಾಧ್ಯತೆ

   ಅಂಡಮಾನ್ ನಿಕೋಬಾರ್ ಬಳಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ನಗರಕ್ಕೆ ಸ್ವಲ್ಪ ಮಟ್ಟಿಗೆ ತಟ್ಟಲಿದೆ. ಇದರಿಂದಾಗಿ ಅಲ್ಲಲ್ಲಿ ಮೂರು ದಿನ ಸಾಧಾರಣ ಮಳೆಯಾಗಬಹುದು ಎಂದು ಹವಮಾನ ಇಲಾಖೆ ಹೇಳಿದೆ. ಕಳೆದ ಒಂದು ತಿಂಗಳ ಹಿಂದೆ ತಿತ್ಲಿ ಚಂಡಮಾರುತದಿಂದ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿದ್ದು, ನೂರಾರು ಮಂದಿ ಬಲಿಯಾಗಿದ್ದರು. ಅಂಡಮಾನ್ ನಿಕೋಬಾರ್, ತಮಿಳುನಾಡಿನಲ್ಲಿ ಗಜದ ಪರಿಣಾಮ ಜೋರಾಗಿದ್ದು ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ.

   ನವೆಂಬರ್ ಆರಂಭದಲ್ಲೇ ರಾಜ್ಯಕ್ಕೆ ಹಿಂಗಾರು ಪ್ರವೇಶ

   ನವೆಂಬರ್ ಆರಂಭದಲ್ಲೇ ರಾಜ್ಯಕ್ಕೆ ಹಿಂಗಾರು ಪ್ರವೇಶ

   ಈ ಬಾರಿ ನವೆಂಬರ್ ಆರಂಭದಲ್ಲೇ ಹಿಂಗಾರು ರಾಜ್ಯಕ್ಕೆ ಪ್ರವೇಶಿಸಿದೆ. ಅಕ್ಟೋಬರ್ ಆರಂಭದಿಂದ ಇಲ್ಲಿಯವರೆಗೆ 190.2ಮಿ.ಮೀ ಮಳೆಯಾಗಬೇಕಿತ್ತು. ಇದು ಮುಂಗಾರಿನ ಕೊನೆಯ ಅವಧಿಯನ್ನೂ ಒಳಗೊಂಡಿದೆ. ಈ ಬಾರಿ 88.6 ಮಿ.ಮೀ ಮಳೆಯಾಗಿದೆ. ಇದರಲ್ಲಿ ಮುಂಗಾರಿನಿಂದ ಸುರಿದ ಮಳೆಯ ಪ್ರಮಾಣವೇ ಅಧಿಕವಾಗಿದೆ.

   ಹಿಂಗಾರು ದುರ್ಬಲ, ಚಂಡ ಮಾರುತ ಆಗಮನ

   ಹಿಂಗಾರು ದುರ್ಬಲ, ಚಂಡ ಮಾರುತ ಆಗಮನ

   ಹಿಂಗಾರು ದುರ್ಬಲವಾದ ಈ ಸಮಯದಲ್ಲಿ ಗಜ ಚಂಡ ಮಾರುತ ಆಗಮನವಾಗಿರುವುದರಿಂದ ನಗರದಲ್ಲಿ ಸಾಧಾರಣ ಮಳೆಯಾಗಬಹುದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಮಿತಿ ಮಾಹಿತಿ ನೀಡಿದೆ. ಹಲವು ದಿನಗಳಿಂದ ಬಿಸಿಲು ಇದ್ದು, ಸಂಜೆ ಹಾಗೂ ರಾತ್ರಿ ಚಳಿ ಹೆಚ್ಚುತ್ತಿದೆ. ಈಗ ಮಳೆಯೂ ಬಂದು ಹವಾಮಾನ ಬದಲಾಗಲಿದೆ. ಮೂರು ದಿನಗಳವರೆಗೆ ಮಳೆ ಬರುವುದರಿಂದ ಸಿದ್ಧರಾಗುವುದು ಒಳಿತು.

   ರೆಡ್ ಅಲರ್ಟ್ :ದಕ್ಷಿಣ ರಾಜ್ಯಗಳತ್ತ ನುಗ್ಗುತ್ತಿರುವ 'ಗಜ' ಚಂಡಮಾರುತ

   ಗಜ ಚಂಡಮಾರುತ, ಎಲ್ಲೆಲ್ಲಿ ಮಳೆ

   ಗಜ ಚಂಡಮಾರುತ, ಎಲ್ಲೆಲ್ಲಿ ಮಳೆ

   ಅಂಡಮಾನ್ ದ್ವೀಪದ ಕಡೆಯಿಂದ ಚಂಡಮಾರುತ ಬರುತ್ತಿದೆ. ನ.14 ಅಥವಾ 15ರಂದು ತಮಿಳುನಾಡಿನ ಕರಾವಳಿ ತಲುಪುವ ನಿರೀಕ್ಷೆ ಇದೆ. ಚಂಡಮಾರುತದ ಪ್ರಭಾವದಿಂದ ನಮ್ಮ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ.ನ.15ರಂದು ಮಳೆ ಪ್ರಾರಂಭವಾಗುವ ಸಾಧ್ಯತೆಗಳಿವೆ. 16ರಂದು ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. 17ವರೆಗೂ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಗಜ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಗಳಿದ್ದು, ಯಾವ ಕಡೆಗೆ ಮುನ್ನುಗ್ಗಲಿವೆ ಎಂಬ ಆಧಾರದ ಮೇಲೆ ರಾಜ್ಯದಲ್ಲಾಗುವ ಮಳೆ ಪ್ರಮಾಣವನ್ನು ನಿರ್ಧರಿಸಲಾಗುವುದು. ಇನ್ನೆರಡು ದಿನಗಳ ನಂತರ ಮಳೆ ನಿರ್ದಿಷ್ಟ ಲಕ್ಷಣ ಗೋಚರವಾಗಲಿದೆ.

   ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?

   ತಮಿಳುನಾಡಿನಿಂದ ಚಂಡ ಮಾರುತ 540ಕಿ.ಮೀ ದೂರ

   ತಮಿಳುನಾಡಿನಿಂದ ಚಂಡ ಮಾರುತ 540ಕಿ.ಮೀ ದೂರ

   ತಮಿಳುನಾಡಿನಿಂದ ಚಂಡಮಾರುತ ಕೇವಲ 540 ಕಿ.ಮೀ ಅಂತರದಲ್ಲಿದೆ, ಗಜ ಚಂಡ ಮಾರುತ ಇದೀಗ ಚೆನ್ನೈ ನಿಂದ ಪೂರ್ವಭಾಗದಲ್ಲಿ 930 ಕಿ.ಮೀ ದೂರದಲ್ಲಿತ್ತು ಮಂಗಳವಾರ 840 ಕಿ.ಮೀ ದೂರದಲ್ಲಿದೆ. ಮಂಗಳವಾರ ಗಂಟೆಗಳಲ್ಲಿ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶಕ್ಕೆ ಗಜ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಇದೀಗ ಕೇವಲ 540 ಕಿ.ಮೀ ಅಂತರದಲ್ಲಿದೆ.

   English summary
   Since past many days weather of Karnataka was almost dry. Presently, the state of Karnataka is running rain deficient. Moreover, several tehsils of the state are facing a drought-like situation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X