ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲ ಕೊಡುವ ಆನ್‌ಲೈನ್ ಆಪ್ ಗಳ ಮೇಲೆ ಸಿಸಿಬಿ ಹದ್ದಿನ ಕಣ್ಣು !

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಆನ್‌ಲೈನ್ ಮುಖಾಂತರ ಕೇವಲ ಐದೇ ನಿಮಿಷದಲ್ಲಿ ಸಾಲ ನೀಡುತ್ತೇವೆ ! ಕೇವಲ ಐದು ನಿಮಿಷದಲ್ಲಿ ಆನ್‌ಲೈನ್ ನಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತೇವೆ. ಹೀಗೆ ಭಿನ್ನ ಅವಕಾಶ ನೀಡಿ ಆನ್ ಲೈನ್ ಮೂಲಕ ಸಾಲ ನೀಡಿದ ಆನ್‌ಲೈನ್ ಸಾಲ ಆಪ್‌ ಗಳ ವಿರುದ್ದ ಕ್ರಿಮಿನಲ್ ದಾವೆಗಳು ದಾಖಲಾಗಿವೆ. ಇದೇ ಪ್ರಪ್ರಥಮವಾಗಿ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಮೂರು ಕ್ರಿಮಿನಲ್ ಕೇಸು ದಾಖಲಾಗಿವೆ.

ಆಕರ್ಷಕ ಸೌಲಭ್ಯ ಹೆಸರಿನಲ್ಲಿ ಆನ್‌ ಲೈನ್ ಸಾಲ ಆಪ್‌ ಗಳು ಜನರನ್ನು ಆಕರ್ಷಣೆ ಮಾಡಿದ್ದವು. ಜನರು ಇದರತ್ತ ಸೆಳೆದು ಕೇವಲ ಐದು ನಿಮಿಷದಲ್ಲಿ ಸಾಲ ಪಡೆಯುವ ಅವಕಾಶ ಪಡೆದುಕೊಂಡರು. ಈ ಆಪ್‌ ಗಳ ಮೊರೆ ಜನ ಹೋಗುತ್ತಿದ್ದಂಥೆ, ಹೆಚ್ಚುವರಿ ಬಡ್ಡಿ ವಸೂಲಿ, ಸಾಲ ಪಾವತಿಸದವರಿಗೆ ಬೆದರಿಕೆ ಹೀಗೆ ನಾನಾ ಅಪರಾಧಗಳು ವರದಿಯಾಗುತ್ತಿವೆ. ಕೇಳವರೇ ಇಲ್ಲ ಎಂದು ಮನಸೋ ಇಚ್ಛೆ ಬಡ್ಡಿ ವಿಧಿಸುತ್ತಿದ್ದವು. ರಾಜಧಾನಿಯಲ್ಲಿ ಇದೇ ಮೊದಲ ಭಾರಿಗೆ ಸಿಸಿಬಿ ಪೊಲೀಸರು ಮೀಟರ್ ಬಡ್ಡಿ ವಸೂಲಿ ಮಾಡುವ ಆನ್‌ಲೈನ್ ಸಾಲ ಕೊಡುವ ಆಪ್‌ ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.

three criminal case registered against online lending Apps

Recommended Video

ಅಭ್ಯಾಸ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ SuryaKumar Yadav | Oneindia Kannada

ಭಾರತೀಯ ರಿಜರ್ವ್ ಬ್ಯಾಂಕ್‌ ಆಫ್ ಇಂಡಿಯಾ ನಿಯಮ ಉಲ್ಲಂಘಿಸಿ ಹೆಚ್ಚಿನ ಬಡ್ಡಿಗೆ ಸಾಲ ನೀಡಿದ್ದ ಲೋನ್ ಆಪ್‌ ಗಳ ವಿರುದ್ಧ ಮೂರು ಪ್ರತ್ಯೇಕ ಕೇಸು ದಾಖಲಾಗಿವೆ. ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಆನ್ ಲೈನ್ ನಲ್ಲಿ ಸಾಲ ಕೊಡುವ ಆಪ್‌ ಗಳ ವಿರುದ್ಧ ಸಿಸಿಬಿ ಮೂರು ಪ್ರಕರಣ ದಾಖಲಾಗಿವೆ. ಸಾಲ ಕೊಡುವ ಆಪ್‌ ಗಳು ನಿಯಮ ಉಲ್ಲಂಘಿಸಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಜತೆಗೆ ಮರು ಪಾವತಿ ಮಾಡದ ಗ್ರಾಹಕರಿಗೆ ಕಿರುಕುಳ ನೀಡಿತ್ತಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ಗ್ರಾಹಕರ ವಿವರ, ಪೋಟೋ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಸಾರ್ವಜನಿಕರು ವಂಚನೆಗೆ ಒಳಗಾಗಿದ್ದರೆ ದೂರು ನೀಡುವಂತೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

English summary
CCB police have filed three criminal cases against online lending apps. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X