BMTC: ಯಲಹಂಕದಿಂದ ಹೊಸ ಮಾರ್ಗಗಳಲ್ಲಿ ಮೂರು ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ-ಯಾವಾಗಿನಿಂದ? ಇಲ್ಲಿದೆ ಮಾಹಿತಿ
BMTC: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ಒಂದಾದ ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಮಾರ್ಗಗಳಲ್ಲಿ ಆಗಾಗ ಬಸ್‌ಗಳನ್ನು ಬಿಡುತ್ತಲೇ ಇರುತ್ತದೆ. ಇದೀಗ ಯಲಹಂಕದಿಂದ ಹೊಸ ಮಾರ್ಗಗದಲ್ಲಿ ಮೂರು ಬಸ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಹಾಗಾದರೆ ಎಲ್ಲೆಲ್ಲಿಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯಲಹಂಕದಿಂದ ದೇವನಹಳ್ಳಿಗೆ ಹೊಸ ಮಾರ್ಗದಲ್ಲಿ ಮೂರು ಬಸ್‌ಗಳನ್ನು ಪರಿಚಯಿಸಲು ಬಿಎಂಟಿಸಿ ನಿರ್ಧರಿಸಿದೆ. ಬಾಗಲೂರು, ಭಟ್ರಮಾರೇನಹಳ್ಳಿ, ಬೆಟ್ಟಕೋಟೆ, ಬೈಚಾಪುರ ಮಾರ್ಗವಾಗಿ ಸೆಪ್ಟೆಂಬರ್ 16ರಿಂದ ಬಸ್‌ಗಳು ಸಂಚರಿಸಲಿವೆ.

ದಿನಕ್ಕೆ ಯಲಗಂಕದಿಂದ ದೇವನಹಳ್ಳಿಗೆ 12 ಟ್ರಿಪ್ ಮತ್ತು ದೇವನಹಳ್ಳುಯಿಂದ ಯಲಹಂಕಕ್ಕೆ 12 ಟ್ರಿಪ್ ಇರಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಶ್ರೀನಿವಾಸಪುರ ಕ್ರಾಸ್, ಕರಿಯಣ್ಣನ ಪಾಳ್ಯ, ರಘುವನಹಳ್ಳಿ ಕ್ರಾಸ್, ಆವಲಹಳ್ಳಿ ಬಿಡಿಎ, ಅಂಜನಾಪುರ, ಬಸವನಪುರ ಗೇಟ್, ಬೆಟ್ಟದಾಸನಪುರ ಮಾರ್ಗವಾಗಿ ನಾಲ್ಕು ಬಸ್‌ಗಳು ದಿನಕ್ಕೆ 12 ಟ್ರಿಪ್ ಸಂಚರಿಸಲಿವೆ ಎಂದು ತಿಳಿಸಿದೆ.
ನಾಲ್ಕು ಬಸ್‌ಗಳ ಸೇವೆ: ಈಗಾಗಲೇ ಸೆಪ್ಟೆಂಬರ್ 14ರಿಂದ ಹೊಸ ಬಸ್ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿವೆ. ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಬಸ್ ಸೇವೆಯನ್ನು ಬಿಎಂಟಿಸಿ ಆರಂಭಿಸಿದೆ.
ಒಟ್ಟು ನಾಲ್ಕು ಬಸ್‌ಗಳು ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರ ಮಾಡಲಿವೆ. 378-F ಸಂಖ್ಯೆಯ ಈ ಮಾರ್ಗದಲ್ಲಿ ಶ್ರೀನಿವಾಸಪುರ ಕ್ರಾಸ್, ಕರಿಯಣ್ಣನಪಾಳ್ಯ, ರಘುವನಹಳ್ಳಿ, ಆವಲಹಳ್ಳಿ, ಬಿಡಿಎ, ಅಂಜನಾಪುರ, ಬಸವನಪುರ ಗೇಟ್, ಬೆಟ್ಟದಾಸನಪುರದ ಮೂಲ ಬಸ್‌ಗಳ ಸೇವೆ ದೊರೆಯಲಿದೆ.
ನಾನ್-ಎಸಿ ಬಸ್‌ಗಳ ಪರಿಚಯ: ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೊಸ ಮಾರ್ಗದಲ್ಲಿ ನಾನ್-ಎಸಿ ಬಸ್‌ಗಳನ್ನು ಪರಿಚಯಿಸಿದೆ. 251 ಕೆ ಮಾರ್ಗದ ಬಸ್ ಆರ್ ಮಾರುಕಟ್ಟೆಯಿಂದ ಶಿವಕೋಟೆಗೆ ಸೇವೆ ನೀಡಲಿದೆ. ಯಶವಂತಪುರ, ಜಾಲಹಳ್ಳಿ ಕ್ರಾಸ್, ಸಿಕ್ಕಬಾಣಾವರ, ಹೆಸರಘಟ್ಟ ಟಿ ಬಿ ಕ್ರಾಸ್, ಮುತ್ಕೂರು ಕ್ರಾಸ್ ಮೂಲಕ ಬಸ್ ಸೇವೆ ನೀಡಲಿದೆ.
ಕೆಆರ್ ಮಾರುಕಟ್ಟೆ ಅಥವಾ ಯಶವಂತಪುರ ನಿರ್ಗಮನ ಸಮಯ 0600, 1410, 1710, 2030. ಶಿವಕೋಟೆ ನಿರ್ಗಮನ ಸಮಯ 0425, 0740, 1555, 1850 ಆಗಿರುತ್ತದೆ. ಈ ಮಾರ್ಗದಲ್ಲಿ 1 ಬಸ್ ಒಟ್ಟು 8 ಟ್ರಿಪ್ ಸೇವೆ ನೀಡಲಿದ್ದು, ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಎಂಟಿಸಿ ಪ್ರಯಾಣಿಕರಿಗೆ ಮನವಿ ಮಾಡಿದೆ.












Click it and Unblock the Notifications