ಬೆಂಗಳೂರು : ಮಂಗಳವಾರ 3 ಕಡೆ ಸರಗಳ್ಳರ ಕೈಚಳಕ

ಬೆಂಗಳೂರು, ಜೂ.30 : ಬೆಂಗಳೂರಿಗೆ ಸರಗಳ್ಳರು ಮತ್ತೆ ಬಂದಿದ್ದಾರೆ. ಮಂಗಳವಾರ ನಗರದ ಮೂರು ಕಡೆ ಸರಗಳ್ಳತನ ನಡೆದಿದೆ. ಹಿಂದಿನ ಪ್ರಕರಣಗಳಂತೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

ಬನಶಂಕರಿ, ಚಂದ್ರಾ ಲೇಔಟ್, ಮಹಾಲಕ್ಷ್ಮೀ ಲೇಔಟ್‌ಗಳಲ್ಲಿ ಮಂಗಳವಾರ ಸರಗಳ್ಳತನ ನಡೆದಿದೆ. ಸರಗಳ್ಳರನ್ನು ಗೂಂಡಾಕಾಯ್ದೆ ಅನ್ವಯ ಬಂಧಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. [ಸರಗಳ್ಳರ ವಿರುದ್ಧ ಗೂಂಡಾ ಕಾಯ್ದೆ]

bangalore police

ಬನಶಂಕರಿ : ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆ ಬಳಿ ಇದ್ದ 12 ಗ್ರಾಂ ಚಿನ್ನದ ಸರವನ್ನು ದೋಚಿ ಇಬ್ಬರು ಪರಾರಿಯಾಗಿದ್ದಾರೆ. ದ್ವಿಚಕ್ರವಾಹನದಲ್ಲಿ ಕಳ್ಳರು ಆಗಮಿಸಿದ್ದರು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. [1 ಗಂಟೆಯಲ್ಲಿ 10 ಕಡೆ ಸರಗಳ್ಳತನ]

ಚಂದ್ರ ಲೇಔಟ್ : ವಿಳಾಸ ಕೇಳುವ ನೆಪದಲ್ಲಿ ಬಂದು 55 ಗ್ರಾಂ ಸರವನ್ನು ಕದ್ದಿರುವ ಘಟನೆ ಚಂದ್ರಾಲೇಔಟ್‌ನಲ್ಲಿ ನಡೆದಿದೆ. ಬೆಳಗ್ಗೆ 11.15 ಸುಮಾರಿಗೆ ಸುಮಿತ್ರ (60) ಅವರ ಬಳಿ ಇದ್ದ ಸರವನ್ನು ಕಳ್ಳರು ಅಪಹರಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್ : ಮಹಾಲಕ್ಷ್ಮೀ ಲೇಔಟ್‌ನಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಅಂಗಡಿಯಿಂದ ಮನೆಗೆ ವಾಪಸ್ ಆಗುತ್ತಿದ್ದ ಸಾವಿತ್ರಮ್ಮ ಅವರ ಬಳಿ ಬಂದ ಕಳ್ಳರು ಸುಮಾರು 40 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+