Get Updates
Get notified of breaking news, exclusive insights, and must-see stories!

ಬೆಂಗಳೂರಿಗರ ವಿದೇಶಿ ಪ್ರವಾಸ ಚಪಲಕ್ಕೆ 'ಅಪನಗದೀಕರಣ' ಕತ್ತರಿ

ಹಿಂದಿನ ಅಂಕಿ-ಅಂಶಗಳನ್ನು ಅವಲೋಕಿಸಿದರೆ, ಬೆಂಗಳೂರಿನ ಜನ ಹೆಚ್ಚಾಗಿ ಲಂಡನ್, ಸ್ಪೇನ್, ಸ್ವಿಜರ್ಲೆಂಡ್ ದೇಶಗಳಿಗೆ ಹೆಚ್ಚಾಗಿ ಪ್ರವಾಸ ಹೋಗಿದ್ದಾರೆ.

ನವದೆಹಲಿ, ಏಪ್ರಿಲ್ 18: ಕಳೆದ ವರ್ಷಾಂತ್ಯದ ಹೊತ್ತಿಗೆ ಇಡೀ ದೇಶವೇ ಅಪನಗದೀಕರಣದ ಬೇಗೆಯಲ್ಲಿ ಬೇಯುತ್ತಿದ್ದ ಕಾಲದಲ್ಲಿ ವಿದೇಶ ಪ್ರವಾಸಕ್ಕೆ ತೆರಳಬೇಕಿದ್ದ ಬೆಂಗಳೂರಿನ ಅನೇಕ ಪ್ರವಾಸಿಗರು ವಿದೇಶಿ ಪ್ರವಾಸವನ್ನು ರದ್ದುಗೊಳಿಸಿ ಊಟಿ, ಕೊಡೈ ಕೆನಾಲ್ ಗಳಿಗೆ ಭೇಟಿ ನೀಡುವುದರಲ್ಲೇ ತೃಪ್ತಿಪಟ್ಟರು ಎಂದು ಮೂಲಗಳು ತಿಳಿಸಿವೆ.

ಹಿಂದಿನ ಅಂಕಿ-ಅಂಶಗಳನ್ನು ಅವಲೋಕಿಸಿದರೆ, ಬೆಂಗಳೂರಿನ ಜನ ಹೆಚ್ಚಾಗಿ ಲಂಡನ್, ಸ್ಪೇನ್, ಸ್ವಿಜರ್ಲೆಂಡ್ ದೇಶಗಳಿಗೆ ಹೆಚ್ಚಾಗಿ ಪ್ರವಾಸ ಹೋಗಿದ್ದಾರೆ.

This is How the Demonetisation Move cut short the dreams of tour enthusiasts of Bengaluru

2016ರ ಅಂಚಿನಲ್ಲೂ ಈ ದೇಶಗಳಿಗೆ ಅನೇಕರು ಪ್ರವಾಸ ಹೊರಡುವವರೂ ಇದ್ದರು. ಆದರೆ, ಅಪನಗದೀಕರಣ ಜಾರಿಗೊಳ್ಳುತ್ತಲೇ ಇವರ ಆಸೆಗೆ ತಣ್ಣೀರು ಎರಚಿದಂತಾಯಿತು ಎಂದು ಹೇಳಲಾಗಿದೆ.

ಕೆಲವರು ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವಂತೆ ವಿದೇಶಿ ಪ್ರವಾಸ ತಾಣಗಳ ಆಸೆ ಕೈಬಿಟ್ಟು, ದೇಶೀಯ ಪ್ರವಾಸಿ ತಾಣಗಳಿಗೆ ತೆರಳುವ ನಿರ್ದಾರ ಕೈಗೊಂಡರೆ, ಕೆಲವರು ದುಬಾರಿ ಪ್ರವಾಸಗಳಾದ ಯೂರೋಪ್, ಅಮೆರಿಕದ ಆಸೆ ಬಿಟ್ಟು ಇನ್ನೂ ಮುಂದುವರಿಯದ ದೇಶಗಳಲ್ಲಿನ ಪ್ರವಾಸಿ ತಾಣಗಳನ್ನು ಹುಡುಕಿಕೊಂಡು ಹೋಗಿದ್ದಾರೆ.

ಅಂಥವರು, ಹೆಚ್ಚಾಗಿ, ಜೋರ್ಡಾನ್ ದೇಶದ ಪೇಟ್ರಾ, ಪೆರುವಿನ ಕಣಿವೆಗಳಿಗೆ ಭೇಟಿ ನೀಡಿದ್ದರೆಂದು ಮೂಲಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+