ಹೊಸ 'ಬಾಂಬ್' ಸಿಡಿಸಿದ ರೌಡಿ ಶೀಟರ್ ನಾಗ!
ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ತನ್ನ ಪರವಾಗಿ ತೀರ್ಪು ನೀಡುವಂತೆ ತಾನು ಮಧ್ಯವರ್ತಿಯ ಮೂಲಕ ನ್ಯಾಯಾಧೀಶರೊಬ್ಬರಿಗೆ ಲಂಚ ನೀಡಿದ್ದೆ ಎಂಬ ಹೊಸ ವಿಷಯವನ್ನು ನಾಗ ಬಿಚ್ಚಿಟ್ಟಿದ್ದಾನಂತೆ!
ಬೆಂಗಳೂರು, ಏಪ್ರಿಲ್ 22: ನೂರಾರು ಕೋಟಿ ಹಳೆ ನೋಟುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪ ಎದುರಿಸುತ್ತಿದ್ದ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್, ಪೊಲೀಸರಿಂದ ತಲೆಮರೆಸಿಕೊಂಡಿದ್ದು ಹಳೇ ವಿಚಾರ. ಆತ ಕೇರಳದಲ್ಲಿರಬಹುದು ಎಂಬ ಅಂತೆ ಕಂತೆ ಸುದ್ದಿಗಳನ್ನು ಬಿಟ್ಟರೆ ನಾಗ ಕುರಿತು ಹೆಚ್ಚು ವಿವರಗಳೇನೂ ಲಭ್ಯವಾಗಿಲ್ಲ.
ಹೀಗಿರುವಾಗ ನಾಗ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾನೆಂದು ಕನ್ನಡ ವಾಹಿನಿಯೊಂದು ವರದಿ ಮಾಡಿದೆ. ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ತನ್ನ ಪರವಾಗಿ ತೀರ್ಪು ನೀಡುವಂತೆ ತಾನು ಮಧ್ಯವರ್ತಿಯ ಮೂಲಕ ನ್ಯಾಯಾಧೀಶರೊಬ್ಬರಿಗೆ ಲಂಚ ನೀಡಿದ್ದೆ ಎಂಬ ಹೊಸ ವಿಷಯವನ್ನು ನಾಗ ಬಿಚ್ಚಿಟ್ಟಿದ್ದಾನಂತೆ.[ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಾಂಬ್ ನಾಗ?]

ಆದರೆ ಈ ವಿಷಯವನ್ನು ನಾಗ ಮಾಧ್ಯಮಗಳಿಗೆ ನೀಡಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.












Click it and Unblock the Notifications