ಹೆಚ್ಚು ದಿನ ಪಾರ್ಕಿಂಗ್‌ ಲಾಟ್‌ನಲ್ಲಿ ವಾಹನ ನಿಲ್ಲಿಸಬೇಡಿ

ಬೆಂಗಳೂರು, ಜ. 7 : ಒಂದು ವಾರಕ್ಕೂ ಹೆಚ್ಚು ಕಾಲ ಸಾರ್ವಜನಿಕ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿರುವ ವಾಹನಗಳಿಗೆ ಪೊಲೀಸರು ಸರಪಳಿ ಹಾಕಿ ಬೀಗ ಜಡಿಯಲಿದ್ದಾರೆ. ಶುಕ್ರವಾರದಿಂದ ನಗರ ಪೊಲೀಸರು ಈ ಕಾರ್ಯಾಚರಣೆ ಆರಂಭಿಸಲಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ಕಳವು ಹಾಗೂ ಸರ­ಗಳ್ಳತನಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು ಇಂತಹ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇದರ ಅನ್ವಯ ಒಂದು ವಾರಕ್ಕಿಂತ ಹೆಚ್ಚು ಕಾಲ ವಾಹನ ಪಾರ್ಕಿಂಗ್‌ ಲಾಟ್‌ನಲ್ಲಿದ್ದರೆ, ಅದನ್ನು ಜಪ್ತಿ ಮಾಡಲಿದ್ದಾರೆ.

Parking

ಪೊಲೀಸರು ವಾಹನಗಳನ್ನು ಜಪ್ತಿ ಮಾಡಿದ 10 ದಿನಗಳ ಒಳಗೆ ಮಾಲೀಕರು ಸೂಕ್ತ ದಾಖಲೆಗಳನ್ನು ಒದಗಿಸಿ ತಮ್ಮ ವಾಹನ ಪಡೆದು­ಕೊಳ್ಳಬೇಕು. ಇಲ್ಲವಾದಲ್ಲಿ ಅದನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ನಿರ್ಧರಿಸಿದ್ದಾರೆ. ಶುಕ್ರವಾರದಿಂದ ಈ ಕಾರ್ಯಾಚರಣೆ ನಡೆಯಲಿದೆ. [ಸಂಚಾರಿ ನಿಯಮ ಉಲ್ಲಂಘಿಸಿದರೆ ಡಿಎಲ್ ಅಮಾನತು]

ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ನಗರ ರೈಲು ನಿಲ್ದಾಣ, ಮೆಜೆಸ್ಟಿಕ್, ಸಿಟಿ ಮಾರು­ಕಟ್ಟೆ, ಯಶವಂತಪುರ, ಮೈಸೂರು ರಸ್ತೆ, ಸ್ಯಾಟಲೈಟ್ ಬಸ್‌ ನಿಲ್ದಾಣ, ಕೆಂಗೇರಿ, ಶಾಂತಿನಗರ ಬಸ್‌ ನಿಲ್ದಾಣ, ಶಿವಾಜಿನಗರ ಸೇರಿದಂತೆ ಬಿಎಂಪಿಯಿಂದ ಪರವಾನಗಿ ಪಡೆದಿರುವ 150 ವಾಹನ ನಿಲುಗಡೆ ಪ್ರದೇಶಗಳ ಮೇಲೆ ಶುಕ್ರವಾರ ದಾಳಿ ನಡೆಯಲಿದೆ ಎಂದು ಹೇಳಿದ್ದಾರೆ. [ಲಾರಿಗಳು ಹಗಲು ಬೆಂಗಳೂರು ಪ್ರವೇಶಿಸುವಂತಿಲ್ಲ]

ವಾರಸುದಾರರಿಲ್ಲದ ವಾಹನಗಳ ವಿಲೇವಾರಿಗೆ ಕಾನೂನಿನಲ್ಲಿ ಅವಕಾಶವಿದೆ. ಅದರ ಅನ್ವಯ ಏಳು ದಿನಕ್ಕೂ ಹೆಚ್ಚು ಕಾಲ ನಿಲುಗಡೆ ಪ್ರದೇಶದಲ್ಲಿರುವ ಅಪರಿಚಿತ ವಾಹನಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಹರಿಶೇಖರನ್ ತಿಳಿಸಿದರು.

ಕೆಲವು ದಿನಗಳಿಂದ ನಗರದಲ್ಲಿ ಸರಗಳ್ಳರ ಕಾಟ ಹೆಚ್ಚುತ್ತಿದೆ. ಹೊರ ರಾಜ್ಯದ ದುಷ್ಕರ್ಮಿಗಳು ತಿಂಗಳಿಗೆ ಒಂದೆರಡು ಬಾರಿ ನಗರಕ್ಕೆ ಬಂದು ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿರುವ ವಾಹನ ಬಳಸಿ ಕೆಲವೇ ತಾಸುಗಳಲ್ಲಿ ಹಲವು ಕಡೆ ಸರಗಳವು, ಮನೆಗಳವು ಮಾಡಿಕೊಂಡು ಪರಾರಿಯಾಗುತ್ತಾರೆ. ಇದನ್ನು ತಡೆಯಲು ಇತಂಹ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+