ಆಟೋದಲ್ಲಿ ಬಂದರು ಬೈಕ್ ಕಿತ್ತೊಯ್ದರು..: ಬೆಂಗಳೂರಿಗರೇ ಒಬ್ಬೊಂಟಿಯಾಗಿ ಓಡಾಡುವಾಗ ಹುಷಾರ್!

ಬೆಂಗಳೂರು ಫೆಬ್ರವರಿ 9: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಬಿಸಿಸಿ ಲೇಔಟ್‌ನಲ್ಲಿ ಸ್ನೇಹಿತನ ಮನೆಗೆ ಹೋಗುತ್ತಿದ್ದ ಇಂಜಿನಿಯರ್ ಒಬ್ಬರನ್ನು ಆಟೋದಲ್ಲಿ ಬಂದ ನಾಲ್ವರು ತಡೆದು ದ್ವಿಚಕ್ರ ವಾಹನ ಸಮೇತ ಪರಾರಿಯಾಗಿದ್ದಾರೆ.

ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ.

Thieves who came in an auto escaped with a bike.. Bangaloreans beware!

ಗುರುವಾರ ನಸುಕಿನ 1:50ರ ಸುಮಾರಿಗೆ ಎಮ್ಯಾನುವೆಲ್ (Emmanuel) ಎಂಬ ಟೆಕ್ಕಿಯೊಬ್ಬರು ಸ್ನೇಹಿತನ ಮನೆಗೆ ಹೋಗುತ್ತಿದ್ದರು. ಹಿಂಬದಿಯಿಂದ ಆಟೋದಲ್ಲಿ ಬಂದ ನಾಲ್ವರ ತಂಡ ಆತನನ್ನು ತಡೆದಿದೆ. ಆರೋಪಿಗಳು ವ್ಯಕ್ತಿಯನ್ನು ತಡೆದು ನಾನಾ ಪ್ರಶ್ನೆಗಳನ್ನು ಕೇಳಿದರು. ಅವನ ಬ್ಯಾಗ್ ಅನ್ನು ಪರಿಶೀಲಿಸಿದರು.

ಆರೋಪಿಗಳಿಗೆ ಆತನ ಬಳಿ ಹಣ ಸಿಗದೇ ಇದ್ದಾಗ ಕಪಾಳಮೋಕ್ಷ ಮಾಡಿದ್ದಾರೆ. ಕೊನೆಗೆ ಆಟೋ ಗ್ಯಾಂಗ್ ವ್ಯಕ್ತಿಯ ಬೈಕ್ ಕೀಯನ್ನು ತೆಗೆದುಕೊಂಡು ಪರಾರಿಯಾಗಿದೆ. ಘಟನೆಯಿಂದಾಗಿ ವ್ಯಕ್ತಿ ಆಘಾತಕ್ಕೊಳಗಾಗಿದ್ದು ಆರೋಪಿಗಳು ಆಟೋದಲ್ಲಿ ಹಿಂತಿರುಗಿದರೆ ಅವರಲ್ಲಿ ಒಬ್ಬರು ಬೈಕ್ ಚಲಾಯಿಸಿಕೊಂಡು ಹೋಗಿದ್ದಾನೆ.

ತಕ್ಷಣ ಎಮ್ಯಾನುವೆಲ್ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಸಂತ್ರಸ್ತೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಇಮ್ಯಾನುಯೆಲ್ ತನ್ನ ಬೈಕ್ ಅನ್ನು ದರೋಡೆ ಮಾಡಿದ ಸ್ಥಳಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿ ಸ್ಥಳೀಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ನೆರವಾಗುವ ಆಟೋ ನಂಬರ್‌ಗಾಗಿ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಿಟಕಿ ಕತ್ತರಿಸಿ ಕಳ್ಳತನ

ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು, 2 ಕೆ.ಜಿ. 250 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾರೆ. ಈ ಕಳ್ಳತನ ಸಂಬಂಧ ಬೆಂಗಳೂರಿನ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಶೇಷಾದ್ರಿಪುರ ನಿವಾಸಿ ಮಂಜುಳಾ ದೇವಿ ಅವರು ಕಳ್ಳತನ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ' ಎಂದು ಪೊಲೀಸರು ಹೇಳಿದರು.

''ಮಂಜುಳಾ ದೇವಿ ಹಾಗೂ ಕುಟುಂಬದವರು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವನ್ನು ಇತ್ತೀಚಿಗೆ ಬಿಡಿಸಿಕೊಂಡು ಬಂದು ಮನೆಯಲ್ಲಿ ಇಟ್ಟಿದ್ದರು. ದೇವರ ಪೂಜೆ ಅಂಗವಾಗಿ ಜನವರಿ 17ರಂದು ರಾಜಸ್ಥಾನಕ್ಕೆ ಹೋಗಿದ್ದರು. ಫೆಬ್ರವರಿ 4ರಂದು ವಾಪಸು ಮನೆಗೆ ಬಂದಾಗ, ಕಳ್ಳತನ ನಡೆದಿದ್ದು ಗಮನಕ್ಕೆ ಬಂದಿದೆ' ಎಂದು ತಿಳಿಸಿದ್ದಾರೆ.

'ಕಿಟಕಿಯ ಸರಳುಗಳು ಕತ್ತರಿಸಿ ಒಳಗೆ ನುಗ್ಗಿದ್ದ ಕಳ್ಳರು, ಮನೆಯಲ್ಲೆಲ್ಲ ಹುಡುಕಾಡಿದ್ದಾರೆ, ಲಾಕರ್‌ನಲ್ಲಿಟ್ಟಿದ್ದ 2 ಕೆ.ಜಿ. 250 ಗ್ರಾಂ ತೂಕದ ಚಿನ್ನಾಭರಣ, ಬೆಳ್ಳಿ ಸಾಮಾಗ್ರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಕಳ್ಳತನದಲ್ಲಿ ಪರಿಷಯಸ್ಥರೂ ಭಾಗಿಯಾಗಿರುವ ಅನುಮಾನವಿದೆ' ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+