ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಕೀ ಬಳಸಿ 23 ವಾಹನಗಳ ಕದ್ದ ಚಾಲಾಕಿ ಕಳ್ಳ

|
Google Oneindia Kannada News

ಬೆಂಗಳೂರು, ಆಗಸ್ಟ್ 01: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ವಾಹನಗಳ ಕಳ್ಳತನ ನಿತ್ಯ ಕಸುಬಾಗಿದೆ.

ದೇವಸ್ಥಾನ, ಮಾರ್ಕೆಟ್, ಮನೆಯ ಮುಂದೆ ನಿಲ್ಲಿಸಿದ ವಾಹನಗಳನ್ನು ಕದಿಯುವುದು ಕಳ್ಳರ ನಿತ್ಯ ಕೆಲಸವಾಗಿದೆ. ಈ ಕಳ್ಳ ಒಂದೇ ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.

ಕಾರು ಲಾಕ್ ಮಾಡಿದ್ದೇನೆ, ಕೀ ನನ್ನ ಬಳಿಯೇ ಇದೆ ಎಂದು ಖುಷಿ ಪಡಬೇಡಿ ಕಾರು ಲಾಕ್ ಮಾಡಿದ್ದೇನೆ, ಕೀ ನನ್ನ ಬಳಿಯೇ ಇದೆ ಎಂದು ಖುಷಿ ಪಡಬೇಡಿ

ಕೆಂಪೇಗೌಡ ಲೇಔಟ್‌ ನಿವಾಸಿ ನವೀನ್ ಅಲಿಯಾಸ್ ಡಿಯೋ ನವೀನ್(19) ಕಳ್ಳ. ಈತನ ಸಹಚರ ಮಾಗಡಿ ಸಮೀಪದ ಕುಣಿಗಾನಹಳ್ಳಿ ನಾರಾಯಣನನ್ನು ಕೂಡ ಬಂಧಿಸಲಾಗಿದೆ.

Thief stolen 23 bikes using one key

ಈತ ಸ್ಕೂಟರ್ ಮತ್ತು ಮೊಪೆಡ್‌ ರಿಪೇರಿ ಮಾಡುವುದರಲ್ಲಿ ಎತ್ತಿದ ಕೈ , ಸಣ್ಣ ವಯಸ್ಸಿನಲ್ಲೇ ಗ್ಯಾರೇಜಿಗೆ ಸೇರಿ ರಿಪೇರಿ ಕೆಲಸ ಕಲಿತಿದ್ದ, ಯಾವುದೇ ಕಂಪನಿ ಸ್ಕೂಟರ್ ಆದರೂ ಐದೇ ನಿಮಿಷಗಳಲ್ಲಿ ಸರಿಮಾಡಿಬಿಡುತ್ತಿದ್ದ. ಆತನ ಜಾಣತನವನ್ನೇ ಕಳ್ಳತನಕ್ಕೆ ಬಳಸಿಕೊಂಡಿದ್ದ. ಡಿಯೋ ಸ್ಕೂಟರ್ ರಿಪೇರಿ ಮಾಡುವುದರಲ್ಲಿ ನವೀನ ಪಳಗಿದ್ದ ಹೀಗಾಗಿಯೇ ಡಿಯೋ ನವೀನ ಎಂದು ವಾಹನ ಮಾಲೀಕರು ಹೆಸರಿಟ್ಟಿದ್ದರು.

ಮೆಕ್ಯಾನಿಕ್ ವೃತ್ತಿ ಅನುಭವದಿಂದಲೇ ಕಲಿತಿದ್ದ ಈತ ಎಲ್ಲಾ ವಾಹನಕ್ಕೂ ಅನ್ವಯವಾಗುವ ನಕಲಿ ಕೀಯನ್ನು ಸಿದ್ಧಪಡಿಸಿದ್ದ. ಇದೇ ಕೀ ಬಳಸಿ ಸಲೀಸಾಗಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಕುರುಬರಹಳ್ಳಿ ಸಮೀಪದ ಸತ್ಯನಾರಾಯಣ ಲೇಔಟ್‌ ನಿವಾಸಿ ಶರತ್ ಎನ್ನುವವರು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಘಟನಾ ಸ್ಥಳದ ಸುತ್ತಮುತ್ತ ಇರುವ ಸಿಸಿ ಟಿವಿ ಕ್ಯಾಮರಾ ಫೂಟೇಜ್ ವೀಕ್ಷಿಸಿದಾಗ ಸತ್ಯ ಬಯಲಾಗಿದೆ.

English summary
Thief stole 23 bikes using only one duplicate key in Bengaluru. He was arrested by police. Now he is in police custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X