ಮೆಜೆಸ್ಟಿಕ್ ನಲ್ಲಿ ಕೆಲವು ನಿರ್ಗಮನ ಅಂಕಣಗಳ ಬದಲಾವಣೆ
ಬೆಂಗಳೂರು, ಮಾರ್ಚ್ 29: ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೆಲವೊಂದು ನಿರ್ಗಮನ ಅಂಕಣಗಳನ್ನು ಬದಲಾವಣೆ ಮಾಡಲಾಗುತ್ತಿದೆ.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ಟರ್ಮಿನಲ್ 3ರಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಏಪ್ರಿಲ್ 1ರಿಂದ ಕೆಲವೊಂದು ನಿರ್ಗಮನ ಅಂಕಣಗಳನ್ನು ಬದಲಾವಣೆ ಮಾಡಲಾಗುತ್ತಿದೆ.
ಟರ್ಮಿನಲ್ 3ರ 9,12 ಮತ್ತು 13ರಿಂದ ಕಾರ್ಯಾಚರಣೆಗೊಳ್ಳುತ್ತಿರುವ ಅನಂತಪುರ, ಗೌರಿಬಿದನೂರು, ಹಿಂದೂಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಮಂತ್ರಾಲಯ, ಪುಟ್ಟಪರ್ತಿ, ಮಾರ್ಗದ ಬಸ್‌ಗಳನ್ನು ಟರ್ಮಿನಲ್ 2ಎ ಗೆ ವರ್ಗಾವಣೆ ಮಾಡಲಾಗಿದೆ.

ಈ ಮಾರ್ಗದ ಬಸ್‌ಗಳು ಏ.1ರಿಂದ ಟರ್ಮಿನಲ್ 2ಎ ನಿಂದ ಕಾರ್ಯಾಚರಣೆಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.












Click it and Unblock the Notifications