ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈಮಗ್ಗ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ, ಪ್ರಸನ್ನ ಸತ್ಯಾಗ್ರಹ ಅಂತ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19 : ಹಿರಿಯ ರಂಗಕರ್ಮಿ ಪ್ರಸನ್ನ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ. ಕೈಮಗ್ಗ ಉತ್ಪನ್ನಗಳಿಗೆ ತೆರಿಗೆ ವಿಧಿಸಬಾರದು ಎಂದು ಒತ್ತಾಯಿಸಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿತ್ತು.

ಬೆಂಗಳೂರಿನ ಬಸವನಗುಡಿಯಲ್ಲಿರುವ ನಿಡುಮಾಮಿಡಿ ಸಂಸ್ಥಾನ ಸಭಾಂಗಣದಲ್ಲಿ ಶನಿವಾರದಿಂದ ಪ್ರಸನ್ನ ಅವರು ಸತ್ಯಾಗ್ರಹ ನಡೆಸುತ್ತಿದ್ದರು. ಬುಧವಾರ ನಟ ಪ್ರಕಾಶ್ ರಾಜ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಸನ್ನ ಅವರನ್ನು ಭೇಟಿ ಮಾಡಿ, ಹೋರಾಟಕ್ಕೆ ಬೆಂಬಲ ನೀಡಿದ್ದರು.

ಜಿಎಸ್‌ಐಟಿ ವಿನಾಯಿತಿಗೆ ಆಗ್ರಹ, ಪ್ರಸನ್ನರ ಸತ್ಯಾಗ್ರಹ 5ನೇ ದಿನಕ್ಕೆಜಿಎಸ್‌ಐಟಿ ವಿನಾಯಿತಿಗೆ ಆಗ್ರಹ, ಪ್ರಸನ್ನರ ಸತ್ಯಾಗ್ರಹ 5ನೇ ದಿನಕ್ಕೆ

prasanna

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಮಗ್ಗ ಉತ್ಪನ್ನಗಳಿಗೆ ಜಿಎಸ್‌ಟಿ ತೆರಿಗೆಯಿಂದ ವಿನಾಯಿತಿ ನೀಡಿ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದರು. ಆದ್ದರಿಂದ, ಪ್ರಸನ್ನ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರಸನ್ನ ಅವರಿಗೆ ನೀರು ಕುಡಿಸುವ ಮೂಲಕ ಸತ್ಯಾಗ್ರಹವನ್ನು ಸಾಂಕೇತಿಕವಾಗಿ ಅಂತ್ಯಗೊಳಿಸಿದರು. ಶನಿವಾರದಿಂದ ಆರಂಭವಾದ ಸತ್ಯಾಗ್ರಹ ಇಂದು 6ನೇ ದಿನಕ್ಕೆ ಕಾಲಿಟ್ಟಿತ್ತು.

ಜಿಎಸ್ಟಿ ಪರಿಣಾಮ ನಗರದಲ್ಲಿ ಉದ್ಯೋಗವೇ ಇಲ್ಲಜಿಎಸ್ಟಿ ಪರಿಣಾಮ ನಗರದಲ್ಲಿ ಉದ್ಯೋಗವೇ ಇಲ್ಲ

'ಸ್ವಾತಂತ್ರ ಪೂರ್ವದಲ್ಲಿ ಕೃಷಿ, ಕರಕುಶಲ ಉತ್ಪನ್ನಗಳಿಗೆ ತೆರಿಗೆ ವಿಧಿಸುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮಡಿಕೆ, ಕುಡಿಕೆ, ಚಪ್ಪಲಿ, ಖಾದಿ ಬಟ್ಟೆ, ಕೈಮಗ್ಗ, ಕಂಬಳಿ ಮುಂತಾದ ವಸ್ತುಗಳನ್ನು ಶೂನ್ಯ ಕರದ ವ್ಯಾಪ್ತಿಗೆ ತರಬೇಕು' ಎಂದು ಪ್ರಸನ್ನ ಒತ್ತಾಯಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದ ಪತ್ರ

English summary
Theatre personality Prasanna ended his hunger strike after Karnataka Chief Minister Siddaramaiah writes letter to Finance Minister Arun Jaitley to removal of Goods and Services Tax (GST) on all products manufactured and sold by rural cooperatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X