Defects in Voting Machine: ಸ್ಫೋಟಕ ಮಾಹಿತಿ: ಮತಯಂತ್ರದಲ್ಲಿ ಮಹಾದೋಷ ಪತ್ತೆ?
ನವದೆಹಲಿ: ಮತಯಂತ್ರ ದೋಷದ ಬಗ್ಗೆ ವಿಪಕ್ಷಗಳು ಆರೋಪ ಮಾಡುತ್ತಿರುವ ಸಂದರ್ಭದಲ್ಲೇ, ಚುನಾವಣಾ ಆಯೋಗಕ್ಕೆ ಮಹಾದೋಷ ಪತ್ತೆಯಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಭಾರತೀಯ ಚುನಾವಣಾ ಆಯೋಗ 6.5 ಲಕ್ಷಕ್ಕೂ ಹೆಚ್ಚು ವಿವಿಪ್ಯಾಟ್ ಯಂತ್ರಗಳನ್ನ 'ದೋಷಪೂರಿತ' ಎಂದು ಗುರುತಿಸಿರುವುದಾಗಿ ಸುದ್ದಿ ಜಾಲತಾಣ 'ದಿ ವೈರ್' ವರದಿ ಮಾಡಿದೆ.
ಈ ಮಾಹಿತಿ ಜೊತೆಗೆ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಸಂಚಲನ ಸೃಷ್ಟಿಯಾಗಿದೆ. 'ದಿ ವೈರ್' ವರದಿ ಪ್ರಕಾರ 6.5 ಲಕ್ಷಕ್ಕೂ ಹೆಚ್ಚು ವಿವಿಪ್ಯಾಟ್ ಯಂತ್ರಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ತಯಾರಕರಿಗೆ ಹಿಂದಿರುಗಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ ಅಸಲಿ ಸುದ್ದಿ ಇದಲ್ಲ, ಈಗ ದೋಷ ಪತ್ತೆಯಾಗಿರುವ ವಿವಿಪ್ಯಾಟ್ ಯಂತ್ರಗಳು ಹೊಸ ಯಂತ್ರಗಳಾಗಿವೆ. 2018 ರಲ್ಲಿ ಮೊದಲ ಬಾರಿ ಪರಿಚಯಿಸಲಾದ ಇತ್ತೀಚಿನ M3 ಪೀಳಿಗೆಯ ಯಂತ್ರಗಳು ಇವಾಗಿವೆಯಂತೆ.

2019ರ ಚುನಾವಣೆಯಲ್ಲೂ ಬಳಸಲಾಗಿತ್ತು.
ಈ ಮೊದಲಿನಿಂದಲೂ ಮತಯಂತ್ರದ ದೋಷದ ಬಗ್ಗೆ ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡುತ್ತಿದ್ದವು. ಅದರಲ್ಲೂ 2019ರ ಚುನಾವಣೆಯ ಸಂದರ್ಭದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇಷ್ಟೆಲ್ಲದರ ನಡುವೆ ಇದೀಗ 'ದಿ ವೈರ್' ವರದಿ ಮಾಡಿರುವ ಪ್ರಕಾರ ದೋಷ ಕಂಡುಬಂದಿರುವ ವಿವಿಪ್ಯಾಟ್ ಯಂತ್ರಗಳು 2019 ರ ಲೋಕಸಭೆ ಚುನಾವಣೆಯಲ್ಲೂ ಬಳಸಲಾಗಿತ್ತು ಎನ್ನಲಾಗಿದೆ. ಒಟ್ಟು 17.4 ಲಕ್ಷ VVPAT ಗಳನ್ನು ಲೋಕಸಭೆ ಚುನಾವಣೆಗೆ ಬಳಸಿದ್ದು, ಈ ಪೈಕಿ 6.5 ಲಕ್ಷಕ್ಕೂ ಹೆಚ್ಚು ವಿವಿಪ್ಯಾಟ್ ಯಂತ್ರಗಳಲ್ಲಿ ದೋಷ ಕಂಡುಬಂದಿದೆ ಎನ್ನಲಾಗಿದೆ.
ಕರ್ನಾಟಕದಲ್ಲೂ ಕಾಂಗ್ರೆಸ್ ವಿರೋಧ
ದೋಷ ಕಂಡುಬಂದ ನಂತರ ವಿವಿಪ್ಯಾಟ್ ಇಡೀ ಸರಣಿಯನ್ನು ಬದಲಿಸಲು ನಿರ್ಧರಿಸಲಾಗಿದೆ. ದೋಷಯುಕ್ತ ಯಂತ್ರಗಳ ದುರಸ್ತಿಗಾಗಿ ಅವುಗಳ ತಯಾರಕರಾದ ಹೈದರಾಬಾದ್‌ನ ಇಸಿಐಎಲ್ ಮತ್ತು ಪಂಚಕುಲಾದ ಬಿಇಎಲ್‌ಗೆ ರವಾನಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದು ಕಡೆ ಪ್ರಸಕ್ತ ಘಟನೆ ಬಗ್ಗೆ ತಜ್ಞರು ಕೂಡ ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ಕರ್ನಾಟಕ ಚುನಾವಣೆಯಲ್ಲೂ ಇವಿಎಂ ಬದಲಿಗೆ, ಮತಪತ್ರಗಳನ್ನೇ ಚುನಾವಣೆಯಲ್ಲಿ ಬಳಸುವಂತೆ ಕಾಂಗ್ರೆಸ್ ಬೇಡಿಕೆ ಮುಂದಿಟ್ಟಿತ್ತು.
'ದಿ ವೈರ್' ಇದೀಗ ವಿವಿ ಪ್ಯಾಟ್ ಮತಯಂತ್ರಗಳ ಬಗ್ಗೆ ಪ್ರಕಟಿಸಿರುವ ವರದಿಯಲ್ಲಿ ತಜ್ಞರ ಹೇಳಿಕೆಗಳನ್ನೂ ಉಲ್ಲೇಖಿಸಲಾಗಿದೆ. ಮಾಜಿ ಮುಖ್ಯ ಚುನಾವಣಾ ಆಯೋಕ್ತ ಎಸ್.ವೈ.ಖುರೇಷಿ ಅವರ ಹೇಳಿಕೆಯನ್ನ ವರದಿ ಉಲ್ಲೇಖಿಸಿದ್ದು, 'ಸಾಮಾನ್ಯವಾಗಿ ಚುನಾವಣೆಯೊಂದರಲ್ಲಿ ಸುಮಾರು 4,000 ಇವಿಎಂ ದೋಷಯುಕ್ತವಾಗಿರುವುದು ಕಂಡುಬರುತ್ತದೆ. ಆದರೆ 6.5 ಲಕ್ಷಕ್ಕೂ ಹೆಚ್ಚು ವಿವಿಪ್ಯಾಟ್ ಯಂತ್ರಗಳು ದೋಷಯುಕ್ತವಾಗಿವೆ ಎನ್ನುವುದು ನಿಜವೇ ಆಗಿದ್ದರೆ ಅತ್ಯಂತ ಗಂಭೀರ ವಿಷಯ' ಎಂದಿದ್ದಾರೆ.
ಐಐಟಿ-ಕಾನ್ಪುರದ ಕಂಪ್ಯೂಟರ್ ವಿಜ್ಞಾನ ಪ್ರೊಫೆಸರ್ ಸಂದೀಪ್ ಶುಕ್ಲಾ ಅವರ ಪ್ರಕಾರ, ಇವಿಎಂ ಮತ್ತು ವಿವಿಪ್ಯಾಟ್ ಸದೃಢತೆ ಹಾಗೂ ದಕ್ಷತೆಯನ್ನು ತಯಾರಕರು ಮತ್ತು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ. ತಾತ್ವಿಕವಾಗಿ ಈ ಯಂತ್ರಗಳನ್ನು ಪರೀಕ್ಷಿಸಲು ವಿವಿಧ ತಜ್ಞರಿಗೆ ಒಪ್ಪಿಸಬೇಕು. ಪಾರದರ್ಶಕತೆಯ ಕೊರತೆ ಮತ್ತು ಗೌಪ್ಯತೆಯ ಮುಸುಕು ಸಮಸ್ಯೆಯಾಗಿದೆ ಎಂದಿದ್ದಾರೆ. ಈ ಮೂಲಕ ತಜ್ಞರು ಕೂಡ ಈ ವಿಚಾರ ಗಂಭೀರವಾಗಿದೆ ಎಂದಿದ್ದಾರೆ. ಮತ್ತೊಂದು ಕಡೆ ವಿಪಕ್ಷಗಳು ಇದೇ ವಿಚಾರವನ್ನ ಹಿಡಿದು ಕೇಂದ್ರದ ವಿರುದ್ಧ ಹರಿಹಾಯಬಹುದು.
ಒಟ್ನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಸ್ಫೋಟಕ ವರದಿ ಸಂಚಲನ ಸೃಷ್ಟಿಸಿದೆ. ವಿವಿಪ್ಯಾಟ್ ಯಂತ್ರಗಳ ದೋಷದ ಬಗ್ಗೆ ಆರೋಪ ಕೇಳಿಬಂದಿರುವುದು ಚುನಾವಣೆಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನ ಕಾದು ನೋಡಬೇಕಿದೆ. ಆದರೆ ವಿಪಕ್ಷಗಳಿಗೆ ಇದೇ ವಿಚಾರ ಚುನಾವಣೆಯ ಅಸ್ತ್ರವಾಗಿ ಪ್ರಯೋಗವಾಗುವ ಸಾಧ್ಯತೆ ಇದ್ದು, ಆಡಳಿತ ಪಕ್ಷ ವಿಪಕ್ಷಗಳ ಅಸ್ತ್ರಕ್ಕೆ ಹೇಗೆ ಪ್ರತ್ಯಸ್ತ್ರ ಹುಡುಕುವುದೋ ಕಾದು ನೋಡಬೇಕು.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications