ಕೆಂಪೇಗೌಡ ವಿಮಾನ ನಿಲ್ದಾಣ, ಐಟಿ ಕಾರಿಡಾರ್‌ಗೆ ಬಹುನಿರೀಕ್ಷಿತ ಸುರಂಗ ರಸ್ತೆ ಯೋಜನೆ ಸಿದ್ದ
ಬೆಂಗಳೂರು, ಜುಲೈ 6: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ಐಟಿ ಕಾರಿಡಾರ್‌ಗಳೊಂದಿಗೆ ಸಂಪರ್ಕಿಸಲು ಬೆಂಗಳೂರಿನ ಕೇಂದ್ರ ಭಾಗದ ಎರಡು ದಟ್ಟಣೆಯ ಪ್ರದೇಶಗಳಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರವು ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು ಯೋಜಿಸಿದೆ ಎಂದು ಡಿಎಚ್ ವರದಿ ಮಾಡಿದೆ.
ಆದರೆ, ಈ ಯೋಜನೆಯ ಹೊಣೆ ಹೊತ್ತಿರುವ ಸರ್ಕಾರಿ ಸಂಸ್ಥೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಂಗಳವಾರ ನಡೆದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಭೆಯಲ್ಲಿ ಚರ್ಚಿಸಿ, ಹೆಬ್ಬಾಳ ಮತ್ತು ಕೆಆರ್ ಪುರಂ ನಡುವೆ ಮೆಹಕ್ರಿ ಸರ್ಕಲ್, ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ ಮತ್ತು ಹಳೆ ಮದ್ರಾಸ್ ರಸ್ತೆ ಮೂಲಕ ಸುರಂಗ ರಸ್ತೆ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಎರಡನೇ ಮಾರ್ಗವು ಕಂಟೋನ್ಮೆಂಟ್‌ನಿಂದ ಡಬಲ್ ರೋಡ್, ಲಾಲ್‌ಬಾಗ್ ಮತ್ತು ಹೊಸೂರು ರಸ್ತೆ ಮೂಲಕ ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುತ್ತದೆ ಎನ್ನಲಾಗಿದೆ.

ಮೊದಲ ಹಂತದ ಕಾರ್ಯಸಾಧ್ಯತೆಗಾಗಿ ಸುಮಾರು 50 ಕಿಲೋಮೀಟರ್‌ಗಳಷ್ಟು ವಿಸ್ತರಿಸಿರುವ ಈ ಎರಡು ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ. ಈ ನಿರ್ಧಾರವು US ಆಧಾರಿತ ಮೂಲಸೌಕರ್ಯ ಸಲಹಾ ಸಂಸ್ಥೆಯಾದ AECOMನಿಂದ ಪ್ರಸ್ತಾವನೆಯನ್ನು ಪಡೆಯಲಾಗಿತ್ತು. ಅದು ಹಿಂದೆ 99-ಕಿಮೀ ಎತ್ತರದ ಕಾರಿಡಾರ್ ಅನ್ನು ಪ್ರಸ್ತಾಪಿಸಿತ್ತು. ನಂತರ ಅದನ್ನು ಕೈಬಿಡಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೊಂದಿಗೆ ಯೋಜನೆ ವಹಿಸಲು ಸಾಧ್ಯವಾಗದಿದ್ದರೂ ಯೋಜನೆಯ ಉಸ್ತುವಾರಿಯನ್ನು ಯಾವ ಏಜೆನ್ಸಿಗೆ ವಹಿಸಬೇಕು ಎಂಬುದರ ಕುರಿತು ಸರ್ಕಾರವು ನಿರ್ಧರಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ಅಂತಿಮವಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಥವಾ ಬೆಂಗಳೂರು ಸ್ಮಾರ್ಟ್ ಸಿಟಿಗೆ ಯೋಜನೆಯನ್ನು ನೀಡಬಹುದು ಎನ್ನಲಾಗುತ್ತಿದೆ.

ಮಂಗಳವಾರದ ಸಭೆಯಲ್ಲಿ AECOM ಪ್ರತಿನಿಧಿಗಳು ಬಹು ಸುರಂಗ ಕೊರೆಯುವ ಯಂತ್ರಗಳನ್ನು (TBMs) ಬಳಸಿಕೊಂಡು ದಿನಕ್ಕೆ 300 ಮೀಟರ್‌ಗಳವರೆಗೆ ಸುರಂಗವನ್ನು ನಿರ್ಮಿಸುವ ಇತ್ತೀಚಿನ ತಂತ್ರಜ್ಞಾನದ ಕುರಿತು ಶಿವಕುಮಾರ್‌ಗೆ ತಿಳಿಸಿದರು. ಅವರು ಸಿಂಗಾಪುರ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ನಿರ್ಮಿಸಲಾಗಿರುವ ಸುರಂಗ ರಸ್ತೆಗಳ ಉದಾಹರಣೆಗಳನ್ನು ಒದಗಿಸಿದರು, ಜೊತೆಗೆ ಮುಂಬೈನ ಅವಳಿ ಸುರಂಗ ಯೋಜನೆಯಲ್ಲಿ ತಮ್ಮ ಕಾರ್ಯವನ್ನು ವಿವರಿಸಿದ್ದರು
ಆರಂಭಿಕ ಅಂದಾಜಿನ ಪ್ರಕಾರ ಪ್ರತಿ ಕಿಲೋಮೀಟರ್‌ಗೆ ಸುರಂಗ ಮಾರ್ಗಕ್ಕೆ ಸುಮಾರು 450 ಕೋಟಿ ರೂಪಾಯಿ ಬೇಕಾಗಬಹುದು. ಮೊದಲ ಹಂತಕ್ಕೆ ಸುಮಾರು 25,000 ಕೋಟಿ ರೂಪಾಯಿಗಳ ವೆಚ್ಚವನ್ನು ನಿರೀಕ್ಷಿಸಲಾಗಿದೆ. ಇದರಿಂದ ಸಭೆಯಲ್ಲಿ ದೀರ್ಘಾವಧಿಯ ಸಾಲಗಳು, ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳು ಮತ್ತು ಆಸ್ತಿ ನಗದೀಕರಣದಂತಹ ವಿವಿಧ ಹಣಕಾಸಿನ ಆಯ್ಕೆಗಳನ್ನು ಚರ್ಚಿಸಲಾಯಿತು.
ಆದರೆ, ಸುರಂಗ ರಸ್ತೆ ನಿರ್ಮಾಣ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನಗರದ ವಿವಿಧೆಡೆ ನಮ್ಮ ಮೆಟ್ರೋ ವಿಸ್ತರಣೆಯನ್ನು ಪರಿಗಣಿಸಿ ಇಂತಹ ಯೋಜನೆ ಅನಗತ್ಯ ಎಂಬುದು ವಿಮರ್ಶಕರ ವಾದವಾಗಿದೆ. ನಮ್ಮ ಮೆಟ್ರೊದ 3ಎ ಹಂತದ ಯೋಜನೆಯನ್ನು (ಸಿಲ್ಕ್ ಬೋರ್ಡ್-ಹೆಬ್ಬಾಳ) ತ್ವರಿತಗೊಳಿಸಲು ಮತ್ತು ಒಳವರ್ತುಲ ರಸ್ತೆಯ ಉದ್ದಕ್ಕೂ ಮೆಟ್ರೋವನ್ನು ವಿಸ್ತರಿಸಲು ಹಣವನ್ನು ಬಳಸಬೇಕೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications