ಹ್ಯಾರಿಸ್ ಇದ್ದ ವೇದಿಕೆಯಲ್ಲಿ ಸ್ಫೋಟ: ಆರ್ ಅಶೋಕ್ ಏನಂದ್ರು?
ಬೆಂಗಳೂರು, ಜನವರಿ 23: ಕಾಂಗ್ರೆಸ್ ಸಚಿವ ಎನ್‌ಎ ಹ್ಯಾರಿಸ್ ಭಾಗವಹಿಸಿದ್ದ ಸಭೆಯಲ್ಲಿ ಸ್ಫೋಟ ಸಂಭವಿಸಿದ್ದು ಮುಂಚಿತವಾಗಿ ಸಂಚು ರೂಪಿಸಲಾಗಿತ್ತೇ ಎನ್ನುವ ಕುರಿತು ತನಿಖೆ ನಡೆಸಬೇಕಿದೆ ಎಂದು ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ನಗರದ ವಿವೇಕನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಲಘು ಸ್ಫೋಟ ಸಂಭವಿಸಿ ಶಾಸಕ ಹ್ಯಾರಿಸ್ ಗೆ ಗಾಯವಾಗಿತ್ತು. ಹ್ಯಾರಿಸ್ ಅವರನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹ್ಯಾರಿಸ್ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಹ್ಯಾರಿಸ್ ಅವರ ತೊಡೆ ಮತ್ತು ಕಿವಿ ಭಾಗಕ್ಕೆ ಗಾಯಗಳಾಗಿವೆ ಎಂದು ಹ್ಯಾರಿಸ್ ಪುತ್ರ ನಲಪಾಡ್ ಹೇಳಿದ್ದರು.
ಕೆಲವರು ಅಣಕು ಪ್ರದರ್ಶನ ಅಂತಾರೆ ಇನ್ನು ಕೆಲವರು ಅದು ಪಟಾಕಿ ಎನ್ನುವ ಮಾತು ಕೇಳಿಬರ್ತಿದೆ. ಹ್ಯಾರಿಸ್ ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿದ್ದಾರೆ. ಹ್ಯಾರಿಸ್ ಕ್ಷೇತ್ರದಲ್ಲಿ ನಡೆದಿರುವುದು ಪ್ರೀ ಪ್ಲಾನಾ ಎನ್ನುವ ಕುರಿತು ಗೊಂಗಲ ಮೂಡಿದೆ.

ಇನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡಿರುವ ಆರ್ ಅಶೋಕ್ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಗೆ ಹೋಗುತ್ತೆ ಅನ್ನೋ ಆತಂಕ ಹೆಚ್ಡಿಕೆಯನ್ನ ಕಾಡುತ್ತಿರಬೇಕು. ಅವರು ಅಧಿಕಾರ ದಲ್ಲಿರೋವಾಗ ಪೊಲೀಸರು ಬೇಕಿತ್ತು.ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆ ಎಂದರು.












Click it and Unblock the Notifications