Tharun Sudhir and Sonal Monteiro: ತರುಣ್‌ ಸುಧೀರ್‌, ಸೋನಾಲ್‌ ವಿಶೇಷ ಟ್ವೀಟ್‌ ಪೋಸ್ಟರ್‌ ಭಾರೀ ವೈರಲ್‌

Tharun Sudhir and Sonal: ದರ್ಶನ್‌ ನಟನೆಯ ಕಾಟೇರ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹಾಗೂ ಸೋನಲ್‌ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅಲ್ಲದೆ, ಕೊಲೆ ಕೇಸ್‌ನಲ್ಲಿ ಬಂಧಿತನಾಗಿರುವ ನಟ ದರ್ಶನ್‌ಗೆ ಮೊದಲ ಇನ್ವೇಟೇಶನ್‌ ಅನ್ನು ಕೂಡ ತರುಣ್‌ ಸುಧೀರ್‌ ನೀಡಿದ್ದು, ಇದೀಗ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ವಿಶೇಷ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಪೋಸ್ಟರ್‌ ಭಾರೀ ವೈರಲ್‌ ಆಗುತ್ತಿದೆ.

ನಟಿ ಸೋನಲ್‌ ಮೊಂಥೆರೋ ಜೊತೆಗೆ ತರುಣ್ ಸುಧೀರ್ ಮದುವೆ ಆಗುತ್ತಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಈವರೆಗೂ ಸೋನಲ್ ಆಗಲಿ, ತರುಣ್ ಸುಧೀರ್ ಆಗಲಿ ಈ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಮದುವೆಯಾಗುವುದಾಗಿ ಮಾತ್ರ ಹೇಳಿಕೊಂಡಿದ್ದರು, ಯಾರನ್ನು ಎಂದು ಬಾಯ್ಬಿಟ್ಟಿರಲಿಲ್ಲ. ಆದರೆ ಇದೀಗ ಈ ಪೋಸ್ಟರ್‌ ಮೂಲಕ ತಮ್ಮ ವಿವಾದ ಬಗ್ಗೆ ತನ್ನ ಜೀವನದ ಸಂಗಾತಿ ಅಂದರೆ ತನ್ನ ಜೀವನದ ಹಿರೋಹಿನ್‌ ಬಗ್ಗೆ ತನ್ನ ಟ್ವಿಟ್ಟರ್‌ ಖಾತೆ ಮೂಲಕ ವಿಶೇಷ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ.

Tharun Sudhir and Sonal s Twitter poster has goes viral

"ನಿರ್ದೇಶಕ, ತನ್ನ ಜೀವನದ ಹಿರೋಹಿನ್‌ ಅನ್ನು ಕಂಡುಕೊಂಡಿದ್ದಾರೆ" ಎಂದು ಬರೆದುಕಿಂಡು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಲ್ಲಿ ಹಿರೋಹಿನ್‌ ಮತ್ತು ಡೈರೆಕ್ಟರ್ ಎಂದು ಹೆಸರು ಇರುವ ಎರಡು ಚೇರ್‌ಗಳಿವೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಜುಲೈ 22ರ ಬೆಳಗ್ಗೆ 11:08 ಗಂಟೆಗೆ ತಿಳಿಸಲಾಗುವುದು ಎಂದು ಈ ಪೋಸ್ಟರ್‌ನಲ್ಲಿ ಬರೆಯಲಾಗಿದೆ.

ಅಷ್ಟೇ ಅಲ್ಲದೆ, ತರುಣ್ ಸುಧೀರ್‌ ಹಂಚಿಕೊಂಡ ರೀತಿಯಲ್ಲೇ ಸೋನಲ್ ಸಹ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು, "ಕೊನಗೂ ನಾಯಕಿ ತನ್ನ ಜೀವನದ ನಿರ್ದೇಶಕನನ್ನು ಕಂಡುಕೊಂಡಳು" ಎಂದು ಬರೆದುಕೊಂಡಿದ್ದಾರೆ. ಇನ್ನು ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾದಲ್ಲಿ ಸೋನಲ್ ತನು ಎನ್ನು ಪಾತ್ರವನ್ನು ಮಾಡಿದ್ದು, ಆಗಿನಿಂದ ಇಬ್ಬರ ನಡುವೆ ಉತ್ತಮ ಒಡನಾಟವಿತ್ತು. ಹಾಗೆಯೆ ದಿನ ಕಳೆಯುತ್ತಾ ಈ ಸ್ನೇಹ ಪ್ರೀತಿ ಹಂತಕ್ಕೆ ಹೋಗಿದ್ದು, ಇದೀಗ ಮದುವೆ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸ್ವತಃ ತರುಣ್ ಸುಧೀರ್‌ ಅವರು ಮಾಧ್ಯಮದವರ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಕೊನೆಗೂ ಮದುವೆಯ ಹಂತಕ್ಕೆ ಬಂತು ನಿಂತಿದೆ. ಇನ್ನು ಇವರಿಬ್ಬರ ನಡುವೆ ಪ್ರೀತಿ ಬೆಳೆಯಲು ನಟ ದರ್ಶನ್ ಪಾತ್ರ ಪ್ರಮುಖವಾದದ್ದು ಎಂದು ಹೇಳಲಾಗುತ್ತಿದೆ.

ಕಳೆದ ವಾರವಷ್ಟೇ ತರುಣ್ ಸುಧೀರ್‌ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್‌ನನ್ನು ಭೇಟಿ ಮಾಡಿ ಪುಸ್ತಕಗಳನ್ನು ಕೊಟ್ಟು ಬಂದಿದ್ದರು. ಈ ವೇಳೆ ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಾವಣೆ ಮಾಡಬಾರದೆಂದು ದರ್ಶನ್ ಹೇಳಿದ್ದರು ಎಂದು ಸ್ವತಃ ತರುಣ್ ಸುಧೀರ್ ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು

ಅಲ್ಲದೆ, "ನನ್ನ ಮದುವೆ ವಿಷಯ ದರ್ಶನ್‌ಗೆ ಮೊದಲೇ ಗೊತ್ತಿತ್ತು. ನಿಗದಿಯಾಗಿರುವ ದಿನಾಂಕದಲ್ಲೇ ವಿವಾಹವನ್ನು ಮಾಡಿಕೋ ಎಂದಿದ್ದಾರೆ. ನನ್ನ ಮದುವೆಗೂ ಮುನ್ನವೇ ಅವರಿಗೆ ಜಾಮೀನು ಸಿಗಬಹುದು ಎಂಬ ನಂಬಿಕೆಯಲ್ಲಿದ್ದೇನೆ" ಎಂದು ತರುಣ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+