ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಯುವತಿಯ ಮನೋರೋಗಕ್ಕೆ ಕಾರಣವೇನು ಗೊತ್ತೆ? ಮೊಬೈಲ್ ಗೀಳು!

By Nayana
|
Google Oneindia Kannada News

ಬೆಂಗಳೂರು, ಜು.11: ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅನ್ಯರೊಂದಿಗೆ ಸಂದೇಶ ರವಾನಿಸುವುದನ್ನೇ ಹವ್ಯಾಸವಾಗಿಸಿಕೊಂಡು ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಘಟನೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಪತ್ತೆಯಾಗಿದೆ.

ಕೊಲ್ಕತ್ತ ಮೂಲಕ 19 ವರ್ಷದ ಯುವತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆಕೆಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲ್ಕತ್ತ ಮೂಲದ ಯುವತಿ ಕಾಲೇಜಿನಲ್ಲಿ ಅಧ್ಯಯನದಲ್ಲಿ ಹಿಂದುಳಿದು ಕಾಲೇಜಿನಿಂದ ಹೊರ ಬಿದ್ದಿದ್ದಳು ಬಳಿಕ, ಮನೆಯಲ್ಲೇ ಕುಳಿತು ಮೊಬೈಲ್‌ ಮೂಲಕ ಬೇರೆಯವರೊಂದಿಗೆ ನಿರಂತರ ಮೆಸೇಜ್‌ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಳು. ಇದರಿಂದ ಬೇಸರಗೊಂಡ ಪಾಲಕರು ಅವರನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ದಿದ್ದರು.

ಲ್ಯಾಂಡ್ ಲೈನ್ ಯುಗಕ್ಕೆ ಮರುಜೀವ: ಪ್ರಿಪೇಡ್ ಲ್ಯಾಂಡ್ ಲೈನ್ ಶೀಘ್ರ ಬರಲಿದೆಲ್ಯಾಂಡ್ ಲೈನ್ ಯುಗಕ್ಕೆ ಮರುಜೀವ: ಪ್ರಿಪೇಡ್ ಲ್ಯಾಂಡ್ ಲೈನ್ ಶೀಘ್ರ ಬರಲಿದೆ

ಮನಃಶಾಸ್ತ್ರಜ್ಞರು ಯುವತಿಯನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಕಳುಹಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ, ನಿಮ್ಹಾನ್ಸ್‌ಗೆ ಕರೆದೊಯ್ದ ಬಳಿಕ ಯುವತಿಯನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿದಾಗ ಆಕೆ ಪ್ರತಿನಿತ್ಯ 10 ರಿಂದ 12 ಗಂಟೆಗಳ ಕಾಲ ಮೊಬೈಲ್‌ನಲ್ಲಿ ಸಂದೇಶ ರವಾನಿಸುವುದನ್ನೇ ಹವ್ಯಾಸವನ್ನಾಗಿಸಿಕೊಂಡು ಕ್ರಮೇಣ ಮನೋರೋಗವಾಗಿ ಪರಿವರ್ತನೆಯಾಗಿರುವುದನ್ನು ಪತ್ತೆ ಮಾಡಲಾಗಿದೆ.

Texting addiction case reported in NIMHANS

ನಿಮ್ಹಾನ್ಸ್‌ನಲ್ಲಿರುವ ಡಿಜಿಟಲ್‌ ಸಂಬಂಧಿ ತಂತರ್ಜ್ಞಾನದಿಂದ ಪಸರಿಸುತ್ತಿರುವ ರೋಗಗಳ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು, ಮೊಬೈಲ್‌, ಕಂಪ್ಯೂಟ್ರ್‌ ಮತ್ತಿತರೆ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ತೊಡಗಿಸಿಕೊಂಡು ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ವ್ಯಕ್ತಿಗಳಿಗಾಗಿಯೇ ವಿಶೇಷ ಚಿಕಿತ್ಸೆ ನೀಡುವ ಕೇಂದ್ರವಾಗಿದೆ.

ಕೇಂದ್ರದ ನಿರ್ದೇಶಕ ಡಾ. ಮನೋಜ್‌ ಕುಮಾರ್ ಶರ್ಮಾ ಯುವತಿಗೆ ಚಿಕಿತ್ಸೆ ನೀಡುತ್ತಿದ್ದು, ಆಕೆಯ ಇತ್ತೀಚಿನ ವರ್ಷಗಳ ವರ್ತನೆ ಹಾಗೂ ಹವ್ಯಾಸಗಳ ಕುರಿತಂತೆ ಅಧ್ಯಯನ ನಡೆಸಿ, ಚಿಕಿತ್ಸೆ ನೀಡುತ್ತಿದ್ದಾರೆ, ಡಾ ಶರ್ಮಾ ಹೇಳುವಂತೆ ಯುವತಿ ಅಧ್ಯಯನ ಆರಂಭದಲ್ಲಿ ಚೂಟಿಯಾಗೇ ಇದ್ದಳು, ಏಕಾ ಏಕಿ ಕಾಲೇಜಿನಿಂದ ದೂರ ಉಳಿದು ಮನೆಯಲ್ಲಿಯೇ ಕುಳಿತು ಮೊಬೈಲ್‌ನಲ್ಲಿ ಟೆಕ್ಟ್‌ ಮಾಡುವುದನ್ನು ಹವ್ಯಾಸವನ್ನಾಗಿಸಿಕೊಂಡರು. ಪಾಲಕರು ಸೇರಿದಂತೆ ಎಲ್ಲರೊಂದಿಗಿನ ಸಂಪರ್ಕ ಕಡಿದು ಹೋಯಿತು.

ಇದೀಗ ಆಕೆ ಚೇತರಿಸಿಕೊಳ್ಳುತ್ತಿದ್ದು ದೂರಶಿಕ್ಷಣ ಕೋರ್ಸ್‌ ತೆಗೆದುಕೊಂಡಿದ್ದಾಳೆ ಜತೆಗೆ ಸಂಗೀತ ತರಗತಿಗೂ ಕೂಡ ಸೇರಿಕೊಂಡಿದ್ದಾಳೆ.

English summary
When 19-year-old failed to perform well in school, she dropped out. During that phase, the best way she thought to keep herself engaged was to keep in touch with people through text messages. Little did she know that this would grow into a psychological issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X