ಮಹೇಂದ್ರ ಸಿಂಗ್ ಧೋನಿಗೆ ಕೇಳಬಾರದ 10 ಪ್ರಶ್ನೆಗಳು!
ಬೆಂಗಳೂರು, ಡಿ. 31: ಟೆಸ್ಟ್ ಕ್ರಿಕೆಟ್‌ನಿಂದ ಮಹೇಂದ್ರಸಿಂಗ್ ಧೋನಿ ನಿವೃತ್ತಿ. ಇದೊಂದು ರಹಸ್ಯವೇ, ಸರಿಯೇ, ತಪ್ಪೇ, ಅಚ್ಚರಿಯೇ, ಆಘಾತವೇ ಏನು? ಅಥವಾ ಇವೆಲ್ಲವುಗಳ ಸಮ್ಮಿಳಿತವೇ? ಗೊತ್ತಿಲ್ಲ.
ಭಾರತ ಇದುವರೆಗೆ ಕಂಡ ಅತ್ಯಂತ ಯಶಸ್ವಿ ನಾಯಕನ ನಿವೃತ್ತಿಯ ಹಿಂದಿನ ಕಾರಣ ಯಾರಿಗೂ ಅರ್ಥವೇ ಆಗಲಿಲ್ಲ. ಈ ನಿರ್ಧಾರ ಧೋನಿ ಅಭಿಮಾನಿಗಳಿಗೆ ಆಘಾತ ತಂದಿದ್ದರೆ, ಟೆಸ್ಟ್ ಸೋಲಿಗೆ ನಾಯಕನೇ ಕಾರಣ ಎಂದೆಲ್ಲ ಆರೋಪಿಸಿದವರು ಸಂತಸಪಟ್ಟಿದ್ದಾರೆ. [ಟೆಸ್ಟ್ ಕ್ರಿಕೆಟ್ ಗೆ ಧೋನಿ ವಿದಾಯ]
ಸಾಮಾಜಿಕ ಜಾಲತಾಣದಲ್ಲಿ ಧೋನಿ ಪರ ಹಾಗೂ ವಿರುದ್ಧ ಅಭಿಪ್ರಾಯಗಳೆರಡೂ ವ್ಯಕ್ತವಾಗಿವೆ. ಆದರೆ, ಟೆಸ್ಟ್ ಸರಣಿ ಪೂರ್ಣಗೊಳ್ಳುವ ಮೊದಲೇ ಧೋನಿ ನಿವೃತ್ತಿ ಘೋಷಿಸಿದ್ದು ತಂಡದ ಇತರ ಆಟಗಾರರು ಹಾಗೂ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ಆಘಾತ ತಂದಿದೆ.
ಇದರ ಜೊತೆಗೆ ಧೋನಿ ನಿವೃತ್ತಿ ಅನೇಕ ಶಂಕೆಗಳನ್ನೂ ಹುಟ್ಟುಹಾಕಿದೆ. ಕೇವಲ 33 ವರ್ಷ ವಯಸ್ಸಿನ ತಂಡದ ನಾಯಕ ನಿವೃತ್ತಿ ಘೋಷಿಸಿದ್ದಕ್ಕೆ ಕಾರಣವೇನೆಂಬುದರ ಕುರಿತು ಚರ್ಚೆ ಆರಂಭವಾಗಿದೆ.

ಆಗಿದ್ದೇನು? : ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಬಿಬಿಸಿಐಗೆ ತಿಳಿಸಿದರು. ಅವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿ ವಿಷಯ ಅರುಹಿದರು.
ಧೋನಿ ಅವರು ಏಕದಿನ ಪಂದ್ಯಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ, ಧೋನಿ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನುಳಿಯಲು ನಿರ್ಧರಿಸಿದರು. [ಧೋನಿ ನಿವೃತ್ತಿ : ಯಾರು, ಏನು ಟ್ವೀಟ್ ಮಾಡಿದರು?]
'ಕ್ಯಾಪ್ಟನ್ ಕೂಲ್' ಖ್ಯಾತಿಯ ಧೋನಿ ಈಗ ಮೆಲ್ಬೋರ್ನ್ ಟೆಸ್ಟ್ ಆಡದೆ ಮನೆಗೆ ವಾಪಸ್ಸಾಗಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ 2-0 ಅಂಕಗಳಿಂದ ಮುಂದಿದೆ. ಮೂರನೇ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡ ಕಾರಣ ಸರಣಿ ಆತಿಥೇಯರ ಕೈವಶವಾಗಿದೆ.
ವಿಷಯ ಏನೇ ಇದ್ದರೂ ಈವರೆಗೆ ನಾಯಕನಾಗಿ 90 ಪಂದ್ಯಗಳನ್ನು ಆಡಿರುವ ಧೋನಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಬುದರಲ್ಲಿ ಅನುಮಾನವಿಲ್ಲ.

ಆದರೆ, ಧೋನಿಗೆ ಕೇಳಬಾರದಂತಹ 10 ಪ್ರಶ್ನೆಗಳು ಇಲ್ಲಿವೆ...
1) ಸರಣಿಯ ಮಧ್ಯೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇಕೆ?
2) ಭಾರತ ಇನ್ನು ಕನಿಷ್ಠ ಆರು ತಿಂಗಳ ಕಾಲ ಟೆಸ್ಟ್ ಪಂದ್ಯ ಆಡುವುದಿಲ್ಲ. ಹಾಗಿದ್ದಾಗ ನಿವೃತ್ತಿಗೆ ಆತುರ ತೋರಿದ್ದೇಕೆ?
3) ಟೆಸ್ಟ್ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಬಿಟ್ಟುಕೊಡುವಂತೆ ಒತ್ತಡವಿತ್ತೇ?
4) ಕೊಹ್ಲಿ ನಾಯಕತ್ವದಡಿ ಆಡಲು ನಿಮಗೆ ಇಷ್ಟವಿರಲಿಲ್ಲವೇ? [ಧೋನಿ ನಿವೃತ್ತಿ ಘೋಷಣೆಗೆ ಅಸಲಿ ಕಾರಣವೇನು?]
5) ಸರಣಿಯೊಂದರ ಗೆಲುವಿಗೆ ಅಗತ್ಯವಾದಷ್ಟು ಟೆಸ್ಟ್ ಪಂದ್ಯಗಳು ಇಲ್ಲದಿದ್ದಾಗ ನಿವೃತ್ತಿ ಘೋಷಿಸಿದ್ದು ಎಷ್ಟು ಸರಿ? ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್ ಗೆದ್ದು ಗೌರವ ಉಳಿಸಿಕೊಳ್ಳುವ ವಿಶ್ವಾಸ ಉಳಿಯಲಿಲ್ಲವೇ?
6) ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತು ವಿವಾದಗಳು ನಿಮ್ಮನ್ನು ಕಾಡಿದವೇ? ಅಥವಾ ಹಿತಾಸಕ್ತಿಯ ಸಂಘರ್ಷಕ್ಕೆ ನೀವು ಬಲಿಯಾದಿರಾ?
7) ಕೊಹ್ಲಿ ನಾಯಕನಾಗುವುದರ ಕುರಿತು ನಿಮ್ಮ ಅಭಿಪ್ರಾಯವೇನು? ನಿಮ್ಮ ಸ್ಥಾನ ತುಂಬಲು ಅವರು ಸರಿಯಾದ ವ್ಯಕ್ತಿ ಎಂದು ನಿಮಗೆ ಅನ್ನಿಸುತ್ತದೆಯೇ?
8) ಬ್ರಿಸ್ಬೇನ್ ಟೆಸ್ಟ್ ಸಂದರ್ಭ ಡ್ರೆಸ್ಸಿಂಗ್ ರೂಂನಲ್ಲಿ ನಡೆಯಿತು ಎನ್ನಲಾದ ಜಗಳವನ್ನು ಬಹಿರಂಗಗೊಳಿಸಿದ್ದರಿಂದ ತಂಡದ ಇತರ ಸದಸ್ಯರು ಹಾಗೂ ನಿಮ್ಮ ಮಧ್ಯೆ ಬಿರುಕು ಮೂಡಿತೇ?
9) ಟೆಸ್ಟ್ ನಾಯಕತ್ವವನ್ನು ನಿಮ್ಮ ಬದಲು ವಿರಾಟ್ ಕೊಹ್ಲಿಗೆ ವಹಿಸಲು ತಂಡದ ನಿರ್ದೇಶಕ ರವಿ ಶಾಸ್ತ್ರಿ ಹೆಚ್ಚು ಒಲವು ಹೊಂದಿದ್ದರೇ?
10) ನಿವೃತ್ತಿ ಕುರಿತು ನೀವು ನೇರ ಹೇಳಿಕೆ ನೀಡದಿರುವುದಕ್ಕೆ ಕಾರಣವೇನು? ಈ ಪ್ರಶ್ನೆಗೆ ಉತ್ತರ ನೀಡುತ್ತೀರಾ ಅಥವಾ ಈ ಕುರಿತು ಪುಸ್ತಕ ಬರೆದು ತಿಳಿಸುತ್ತೀರಾ?
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications