Bengaluru ಕೆಐಎ ಟರ್ಮಿನಲ್ 2 ಸೆಪ್ಟಂಬರ್ 12ರಿಂದ ಆರಂಭ: ಅಧಿಕೃತ ಮಾಹಿತಿ
ಬೆಂಗಳೂರು, ಸೆಪ್ಟಂಬರ್ 01: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಭುತ ವಿನ್ಯಾದ ಟರ್ಮಿನಲ್ 2 ನಲ್ಲಿ ವಿದೇಶಿ ವಿಮಾನಗಳು ಇದೇ ಸೆಪ್ಟೆಂಬರ್12 ರಿಂದ ಕಾರ್ಯಾಚರಣೆ ಆರಂಭಿಸಲಿವೆ. ಈ ಸಂಬಂದ ಟರ್ಮಿನಲ್1 ರಿಂದ ವಿದೇಶಿ ವಿಮಾನಗಳು ಈಗಾಗಲೇ ಟಿ2ಗೆ ಸ್ಥಳಾಂತರಗೊಂಡಿವೆ.
ವಿವಿಧ ನಿಯಂತ್ರಕ ಇಲಾಖೆ ಮತ್ತು ಸಹಭಾಗಿಗಳೊಂದಿಗೆ ಸಮಾಲೋಚಿಸಿದ ನಂತರ ಬೆಂಗಳೂರು (BLR) ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಟರ್ಮಿನಲ್ 2 ರಿಂದ ಸೆಪ್ಟಂಬರ್ 12, 2023 ರ ಬೆಳಗ್ಗೆ 10.45 ನಂತರ ಪ್ರಾರಂಭಿಸುವುದಾಗಿ KIA ಅಧಿಕಾರಿಗಳು ಅಧಿಕೃತ ಮಾಹಿತಿ ಪ್ರಕಟಿಸಿದ್ದಾರೆ.

ನಿಯಂತ್ರಕರ ಅಂಗೀಕಾರ, ಕಾರ್ಯಾಚರಣೆಯ ದಕ್ಷತೆ ಹಾಗೂ ಪ್ರಯಾಣಿಕರ ಅನುಕೂಲತೆ ಸೇರಿದಂತೆ ವಿವಿಧ ಅಂಶಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ ಮತ್ತು ಪರಿಗಣಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಏರ್‌ಪೋರ್ಟ್ ಮುಖ್ಯಸ್ಥರು ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಮ್ಮ ಪ್ರಯಾಣಿಕರಿಗೆ ಈ ಬದಲಾವಣೆಯನ್ನು ಸುಗಮವಾಗಿಸಲು ನಾವು ಬದ್ಧರಾಗಿದ್ದೇವೆ ಮತ್ತು ಹೊಸ ಸೌಲಭ್ಯಕ್ಕೆ ಅಂತಾರಾಷ್ಟ್ರೀಯ ಕಾರ್ಯಾಚರಣೆಯ ಅಡಚಣೆರಹಿತ ಸ್ಥಳಾಂತರಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನಿಮ್ಮ ತಾಳ್ಮೆ ಮತ್ತು ಅಚಲ ಬೆಂಬಲ ಪ್ರಶಂಸನೀಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟಿ2 ಗೆ ವಿದೇಶಿ ವಿಮಾನ ಶೀಫ್ಟ್
ಮೂಲಗಳ ಪ್ರಕಾರ, ಭಾರತೀಯ ಏರ್ ಇಂಡಿಯಾ ಮತ್ತು ಇಂಡಿಗೋ ಸಂಸ್ಥೆ ಇವೆರಡು ಸೇರಿದಂತೆ ಒಟ್ಟು 27 ವಿದೇಶಿ ವಿಮಾನಯಾನ ಸಂಸ್ಥೆಗಳು T1 ನಿಂದ ವಿಶಾಲವಾದ T2ಗೆ ಸ್ಥಳಾಂತರಗೊಂಡಿವೆ. ಅವೆಲ್ಲವುಗಳು ಸೆಪ್ಟಂಬರ್ 12ರಿಂದ ಟರ್ಮಿನಲ್ 2ನಿಂದ ಟೇಕ್ ಆಫ್ ಆಗುವುದು ಮತ್ತು ವಿದೇಶಗಳಿಂದ ಬಂದು ಲ್ಯಾಂಡ್ ಆಗಲಿವೆ.
ಟಿ2ಗೆ ಬರುವ-ಟೇಕ್ ಆಫ್ ಆಗುವ ಮೊದಲ ವಿಮಾನ
ಇನ್ನೂ ಸಿಂಗಪುರ ಏರ್‌ಲೈನ್ಸ್‌ನ ವಿಮಾನ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಮೊದಲ ಬಾರಿಗೆ ಇಳಿಯಲಿರುವ ವಿದೇಶಿ ವಿಮಾನ ಆಗಲಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಿಂದ ಹೊರಟು ಬೆಂಗಳೂರಿಗೆ ಆಗಮಿಸಲಿದೆ. ಅದೇ ದಿವಸ 11.45 ಕ್ಕೆ ಸಿಂಗಾಪುರಕ್ಕೆ ಬೆಂಗಳೂರು ಏರ್‌ಪೋರ್ಟ್‌ನ ಟಿ2ನಿಂದ ಮೊದಲ ವಿದೇಶಿ ವಿಮಾನ ಟೇಕ್ ಆಫ್ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಆಗಸ್ಟ್ 31ರಿಂದಲೇ ಟಿ2 ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹೇಳಲಾಗಿತ್ತು, ಇದೀಗ ಸೆಪ್ಟಂಬರ್ 12ರಿಂದ ಆರಂಭವಾಗಲಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.












Click it and Unblock the Notifications