ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 10 ಫ್ಲೈಓವರ್‌ಗಳಿಗೆ ದುರಸ್ತಿ ಭಾಗ್ಯ!

|
Google Oneindia Kannada News

ಬೆಂಗಳೂರು, ಡಿ. 11 : ಬೆಂಗಳೂರಿನಲ್ಲಿ ಫ್ಲೈಓವರ್‌ಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. 12 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳುತ್ತಿದ್ದು, ಜನವರಿ ತಿಂಗಳಿನಿಂದ ಕಾಮವಾರಿ ಆರಂಭವಾಗಲಿವೆ.

15 ವರ್ಷಗಳ ಹಿಂದೆ ನಗರದಲ್ಲಿ ನಿರ್ಮಿಸಿದ ಪ್ಲೈಓವರ್‌ಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ನಗರದ ಇಂಜಿನಿಯರ್‌ಗಳು ಕಳೆದ ಆಗಸ್ಟ್ ತಿಂಗಳಿನಲ್ಲಿ ಬಿಬಿಎಂಪಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಗೆ ವರದಿ ನೀಡಿದ್ದರು. ಇದರ ಅನ್ವಯ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ.

flyover

ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಎಸ್.ಸೋಮಶೇಖರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ನಗರದ 10 ಫ್ಲೈಓವರ್‌ಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಾಗಿದೆ. ಸುಮಾರು 12 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಜನವರಿಯಿಂದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. [ಬೆಂಗಳೂರು ಅರಮನೆ ರಸ್ತೆ ವಿಸ್ತರಣೆ]

ಯಾವ ಫ್ಲೈಓವರ್ ದುರಸ್ತಿ : ಈಗಾಗಲೇ ಸೆಂಟ್ರಲ್ ಸಿಲ್ಕ್ ಬೋರ್ಡ್, ರಿಚ್ಮಂಡ್ ಸರ್ಕಲ್, ಡೈರಿ ಸರ್ಕಲ್, ಜಯದೇವ ಆಸ್ಪತ್ರೆ ಕಾಮಗಾರಿಗಳನ್ನು ಜನವರಿಯಿಂದ ಆರಂಭಿಸಲು ನಿರ್ಧರಿಸಲಾಗಿದೆ. ನ್ಯಾಷನಲ್ ಕಾಲೇಜು, ಲಿಂಗರಾಜಪುರಂ, ಬಾಣಸವಾಡಿ, ಆನಂದರಾವ್ ವೃತ್ತ, ಮತ್ತಿಕೆರೆ ಮತ್ತು ದೊಮ್ಮಲೂರು ಫ್ಲೈಓವರ್‌ಗಳ ದುರಸ್ತಿ ಕಾರ್ಯವನ್ನು ಆರಂಭಿಸಲು ಅನುಮತಿಯಾಗಿ ಕಾಯಲಾಗುತ್ತಿದೆ.

English summary
After 15 years of construction of flyovers in the Bengaluru City, the Bruhat Bangalore Mahanagara Palike (BBMP) has decided to take up repair and maintenance works of 10 flyovers from January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X