ಬೆಂಗಳೂರು ವಿದ್ಯಾಪೀಠದಲ್ಲಿ 10 ದಿನಗಳ ಧಾರ್ಮಿಕ ಕಾರ್ಯಕ್ರಮ

ಬೆಂಗಳೂರು, ಜ 21: ಬೆಂಗಳೂರಿನ ಕತ್ರಿಗುಪ್ಪೆ ರಸ್ತೆಯಲ್ಲಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ರಜತ ಕಲಶಾಭಿಷೇಕ ಸೇರಿದಂತೆ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ಬುಧವಾರ (ಜ 21) ಚಾಲನೆ ನೀಡಿದ್ದಾರೆ.

ಈ ಹತ್ತು ದಿನಗಳ ಕಾರ್ಯಕ್ರಮದಲ್ಲಿ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಶ್ರೀ ಕೇಶವಾಚಾರ್ಯ ತಿಳಿಸಿದ್ದಾರೆ.

pht

ಗುರುವಾರ (ಜ 22) ಮಾಘ ಶುಕ್ಲ ಬಿದಿಗೆಯಂದು ಬೆಳಗ್ಗೆ 10.35ಕ್ಕೆ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳು, ಉಡುಪಿ ಫಲಿಮಾರು ಶ್ರೀಗಳು ಮತ್ತು ಅದಮಾರು ಮಠದ ಕಿರಿಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.

ಪ್ರಮುಖ ಕಾರ್ಯಕ್ರಮಗಳ ವಿವರ ಇಂತಿದೆ...

ಗುರುವಾರ (ಜ 22) ಬೆಳಗ್ಗೆ 10.35ಕ್ಕೆ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪನೆ. 11.15ಕ್ಕೆ ಕಲಶಾಭಿಷೇಕ. ಸಂಜೆ ಐದು ಗಂಟೆಗೆ ಪಟ್ಟಾಭಿರಾಮ ಅವರಿಂದ ನಗೆಹಬ್ಬ. ಸಂಜೆ ಆರು ಗಂಟೆಗೆ ಡಾ. ವ್ಯಾಸನಕೆರೆ ಪ್ರಭಂಜನಾರ್ಚ ಮತ್ತು ಇತರರಿಂದ ಪ್ರವಚನ.

10 days religious and cultural event in Vidyapeetha, Bengaluru

ಶುಕ್ರವಾರ (ಜ 23) ಬೆಳಗ್ಗೆ 9.30ಕ್ಕೆ ಶ್ರೀಕೃಷ್ಣನಿಗೆ 1008 ರಜತ ಕಲಶಾಭಿಷೇಕ.11.30ಕ್ಕೆ ಚಂಡಿಕಾಹೋಮ ಮತ್ತು ಮಹಾಪೂಜೆ, ಸಂಜೆ ಆರು ಗಂಟೆಗೆ ಡಾ.ಮಾಳಗಿ ರಾಮಾಚಾರ್ಯ ಮತ್ತು ಇತರರಿಂದ ಪ್ರವಚನ. ಸಂಜೆ ಏಳು ಗಂಟೆಗೆ ಕೃಷ್ಣಲೀಲೆ ನೃತ್ಯರೂಪಕ.

ಶನಿವಾರ (ಜ 24) ಏಳು ಗಂಟೆಗೆ 108 ಪವಮಾನ ಹೋಮ. ಸಂಜೆ ಆರು ಗಂಟೆಗೆ ಡಾ. ವೆಂಕಟೇಶಾಚಾರ್ಯ ಅವರಿಂದ ಪ್ರವಚನ. ಸಂಜೆ ಏಳು ಗಂಟೆಗೆ ವಿದ್ವಾನ್ ರಾಜಕಮಲ್ ಮತ್ತು ಸಂಗಡಿಗರಿಂದ ಕೊಳಲು ವಾದನ.

ಸೋಮವಾರ (ಜ 26) ಮಧ್ಯಾಹ್ನ ಮೂರು ಗಂಟೆಗೆ ವಿದ್ಯಾರ್ಥಿಗಳಿಂದ ಸುಧಾ ಅನುವಾದ ಕಾರ್ಯಕ್ರಮ. ರಾತ್ರಿ ಎಂಟು ಗಂಟೆಗೆ ಶ್ರೀಕೃಷ್ಣ ಕುಲ್ಕರ್ಣಿ ಅವರಿಂದ ದಾಸವಾಣಿ.

10 days religious and cultural event in Vidyapeetha, Bengaluru

ಮಂಗಳವಾರ (ಜ 27) ಬೆಳಗ್ಗೆ 9ಗಂಟೆಗೆ ವಿದ್ಯಾರ್ಥಿಗಳಿಂದ ಸುಧಾ ಅನುವಾದ ಕಾರ್ಯಕ್ರಮ. ಮಧ್ಯಾಹ್ನ ಮೂರು ಗಂಟೆಗೆ ವ್ಯಾಖ್ಯಾರ್ಥ ಗೋಷ್ಠಿ, ಸಂಜೆ ಆರು ಗಂಟೆಗೆ ಪಂಡಿತ್ ಗಿರಿ ಆಚಾರ್ಯ ಮತ್ತು ಇತರರಿಂದ ಪ್ರವಚನ. ರಾತ್ರಿ ಎಂಟು ಗಂಟೆಗೆ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸವಾಣಿ.

ಬುಧವಾರ (ಜ 28) ಮಧ್ವನವಮಿ ಕಾರ್ಯಕ್ರಮ, ಪ್ರವಚನ, ರಥೋತ್ಸವ. ಮಧ್ಯಾಹ್ನ ಮೂರುವರೆಗೆ ವಿದ್ಯಾರ್ಥಿಗಳಿಂದ ಸುಧಾ ಅನುವಾದ. ಸಂಜೆ ಆರು ಗಂಟೆಗೆ ಪ್ರೊ. ಹಯವದನ ಪುರಾಣಿಕ್ ಅವರಿಂದ ಪ್ರವಚನ. ರಾತ್ರಿ ಎಂಟು ಗಂಟೆಗೆ ಪುತ್ತೂರು ಶ್ರೀಶೇಷಗಿರಿ ದಾಸ್ ಅವರಿಂದ ದಾಸವಾಣಿ.

ಗುರುವಾರ (ಜ 29) ಬೆಳಗ್ಗೆ ಒಂಬತ್ತು ಗಂಟೆಗೆ ಶ್ರೀಮದ್ ಅನುವ್ಯಾಖ್ಯಾನ, ಶ್ರೀಮನ್ ನ್ಯಾಯಸುಧಾ ಗ್ರಂಧಗಳ ಭವ್ಯ ಮೆರವಣಿಗೆ. ಸಂಜೆ ಆರು ಗಂಟೆಗೆ ಧಾರ್ಮಿಕ ಕಾರ್ಯಕ್ರಮ. ದಿವ್ಯ ಸಾನಿಧ್ಯ ಪೇಜಾವರ ಶ್ರೀಗಳು, ಉಪಸ್ಥಿತಿ ಮಾನ್ಯ ರಾಜ್ಯಪಾಲರು, ಶಾಸಕ ರವಿ ಸುಬ್ರಮಣ್ಯ. ಡಾ. ಬನ್ನಂಜೆ ಗೋವಿಂದಾಚಾರ್ಯ ಅವರಿಂದ ಪ್ರವಚನ. ರಾತ್ರಿ ಎಂಟು ಗಂಟೆಗೆ ಗೋಪಿಕೋನ್ಮಾದ ಯಕ್ಷ ನೃತ್ಯರೂಪಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+