ಬೆಂಗಳೂರಿನಲ್ಲಿ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅರ್ಚಕನ ಬಂಧನ

ಬೆಂಗಳೂರು, ನವೆಂಬರ್ 26: ಈಶಾನ್ಯ ಬೆಂಗಳೂರಿನ ದೇವನಹಳ್ಳಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 62 ವರ್ಷದ ದೇವಸ್ಥಾನದ ಅರ್ಚಕನನ್ನು ಬುಧವಾರ ಬಂಧಿಸಲಾಗಿದೆ.

ಅರ್ಚನು ತನ್ನ ಮಗಳ ನಿವಾಸದಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಘಟನೆಯನ್ನು ಮೊದಲು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಆರೋಪಿಯು 62 ವರ್ಷದ ವೆಂಕಟರಮಣಪ್ಪ ಎಂದು ಗುರುತಿಸಲಾಗಿದೆ.

ಪೊಲೀಸರು ಹೇಳುವ ಪ್ರಕಾರ, ಮಂಗಳವಾರದಂದು ದೇವನಹಳ್ಳಿಯಲ್ಲಿ ಸಂಜೆ 4 ಗಂಟೆ ಸುಮಾರಿಗೆ ತನ್ನ ಮಗಳನ್ನು ಭೇಟಿ ಮಾಡಲು ಹೋಗಿದ್ದಾಗ, ಹೊರಗಡೆ 10 ವರ್ಷದ ಬಾಲಕಿ ಆಟವಾಡುತ್ತಿರುವುದನ್ನು ನೋಡಿದ್ದಾನೆ.

Temple Priest Arrested For Allegedly Raping A 10-Year-Old Girl In Devanahalli

ಈಶಾನ್ಯ ಬೆಂಗಳೂರಿನ ಉಪ ಆಯುಕ್ತ ಸಿ.ಕೆ.ಬಾಬಾ ಅವರು ಮಾತನಾಡಿ, ""ಮಂಗಳವಾರ ಸಂಜೆ 4.30 ರ ಸುಮಾರಿಗೆ ವೆಂಕಟರಮಣಪ್ಪ ಬಾಲಕಿಯನ್ನು ತನ್ನ ಮಗಳ ಮನೆಗೆ ಆಮಿಷವೊಡ್ಡಿ ಕರೆದುಕೊಂಡು ಹೋಗಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.'' ಬಾಲಕಿ ಮತ್ತು ಆಕೆಯ ಕುಟುಂಬ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರಿಂದ ಅವರು ಹೆಚ್ಚಾಗಿ ಈ ಪ್ರದೇಶದಲ್ಲಿ ಆಡುತ್ತಾರೆ ಎಂದು ಡಿಸಿಪಿ ಸಿ.ಕೆ. ಬಾಬಾ ಹೇಳಿದರು.

ಬಾಲಕಿ ಬಹಳ ಸಮಯದ ನಂತರ ಮನೆಗೆ ಹಿಂತಿರುಗದಿದ್ದಾಗ, ಆಕೆಯ ಪೋಷಕರು ಅವಳನ್ನು ಹುಡುಕತೊಡಗಿದರು. ಅವರು ಆರೋಪಿ ವೆಂಕಟರಮಣಪ್ಪ ಅವರ ಮಗಳ ಮನೆಯ ಸಮೀಪದಲ್ಲಿರುವ ದೇವಾಲಯಕ್ಕೆ ಹೋಗಿ ವಿಚಾರಿಸಿದರು.

ಅಲ್ಲೇ ಇದ್ದ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಮಗಳನ್ನು ನೋಡಿದ್ದೀರಾ ಎಂದು ಕೇಳಿದ್ದಾರೆ. ಆಗ ಹೂವಿನ ಮಾರಾಟಗಾರನು ಬಾಲಕಿಯ ತಂದೆಗೆ, ನಿಮ್ಮ ಮಗಳು ವೆಂಕಟರಮಣಪ್ಪ ಅವರ ಮಗಳ ಮನೆಗೆ ಹೋಗಿದ್ದಾಗಿ ತಿಳಿಸಿದ್ದಾನೆ.

ಬಾಲಕಿಯ ಪೋಷಕರು ಮನೆ ಕಡೆ ಬರುತ್ತಿದ್ದಾಗ, ಮಗಳು ಹೊರಗೆ ಓಡಿಹೋಗುವುದನ್ನು ಮತ್ತು ಜೋರಾಗಿ ಅಳುವುದನ್ನು ಅವರು ನೋಡಿದರು. ಬಾಲಕಿ ತನ್ನ ಹೆತ್ತವರಿಗೆ ನಡೆದಿದ್ದೆಲ್ಲವನ್ನು ಹೇಳಿದ್ದಾಳೆ. ಆಗ ಆರೋಪಿಯ ಮನೆಯ ಹೊರಗೆ ಜನರು ಜಮಾಯಿಸಿದರು. ನಂತರ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿ, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು.

ಮಂಗಳವಾರ ಸಂಜೆ ವಿಚಾರಣೆಗಾಗಿ ವೆಂಕಟರಮಣಪ್ಪ ಅವರನ್ನು ಕರೆದೊಯ್ಯಲಾಯಿತು ಮತ್ತು ನಂತರ ಬುಧವಾರ ಬಂಧಿಸಲಾಯಿತು. ಪಾದ್ರಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಸಿಕೆ ಬಾಬಾ ಹೇಳಿದರು. ರಸ್ತೆಯಲ್ಲಿದ್ದ ಬಾಲಕಿಯೊಂದಿಗೆ ವೆಂಕಟರಮಣಪ್ಪ ಮಾತನಾಡುತ್ತಿದ್ದ ಮತ್ತು ಅವಳ ಮನೆಯೊಳಗೆ ಕರೆದೊಯ್ಯುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಅವಳು ಒಳಗೆ ಹೋಗುವ ದೃಶ್ಯಗಳನ್ನು ದೇವಾಲಯದಲ್ಲಿ ಕ್ಯಾಮೆರಾದ ಮೂಲಕ ದಾಖಲಿಸಲಾಗಿದೆ.

ವೆಂಕಟರಮಣಪ್ಪ ಅವರನ್ನು ಮಂಗಳವಾರ ಸಂಜೆಯೇ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಂತರ ಬುಧವಾರ ಬಂಧಿಸಲಾಗಿದೆ. ಅರ್ಚಕ ವೆಂಕಟರಮಣಪ್ಪ ತಾನು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಸಿ.ಕೆ ಬಾಬಾ ತಿಳಿಸಿದರು.

ರಸ್ತೆಯಲ್ಲಿದ್ದ ಬಾಲಕಿಯೊಂದಿಗೆ ವೆಂಕಟರಮಣಪ್ಪ ಮಾತನಾಡುತ್ತಿರುವ ಮತ್ತು ಅವಳನ್ನು ಮನೆಯೊಳಗೆ ಕರೆದೊಯ್ಯುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಬಾಲಕಿಯನ್ನು ಒಳಗೆ ಕರೆದುಕೊಂಡು ಹೋಗುವ ದೃಶ್ಯಗಳನ್ನು ದೇವಾಲಯದ ಕ್ಯಾಮೆರಾದಲ್ಲಿ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+